Home » Acid Attack Kadaba: ಕಡಬ ಆಸಿಡ್‌ ಪ್ರಕರಣ; ಘಟನೆಗೆ ಮುನ್ನ ಸಂತ್ರಸ್ತೆಯನ್ನು ಭೇಟಿಯಾಗಿದ್ದ ಆರೋಪಿ

Acid Attack Kadaba: ಕಡಬ ಆಸಿಡ್‌ ಪ್ರಕರಣ; ಘಟನೆಗೆ ಮುನ್ನ ಸಂತ್ರಸ್ತೆಯನ್ನು ಭೇಟಿಯಾಗಿದ್ದ ಆರೋಪಿ

1 comment
Acid Attack Kadaba

Kadaba: ಕಡಬ ಸರಕಾರಿ ಪ.ಪೂ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿನಿಯ ಮೇಲೆ ಆಸಿಡ್‌ ಎರಚಿದ ಪ್ರಕರಣಕ್ಕೆ ಕುರಿತಂತೆ ಇದೀಗ ಮಹತ್ವದ ಸುದ್ದಿ ಬೆಳಕಿಗೆ ಬಂದಿದೆ. ಘಟನೆ ಸ್ವಲ್ಪ ಸಮಯದ ಮೊದಲು ಆಕೆಯನ್ನು ಭೇಟಿಯಾಗಿರುವುದು ಪೊಲೀಸ್‌ ತನಿಖೆಯನ್ನು ಬಯಲಾಗಿದೆ.

ಇದನ್ನೂ ಓದಿ: Nivetha Pethuraj: ಖ್ಯಾತ ನಟಿಯ ಮೋಹ ಪಾಶದಲ್ಲಿದ್ದಾರೆಯೇ ಉದಯನಿಧಿ? ಸಂಚಲನ ಮೂಡಿದ ಹೇಳಿಕೆ

ಮಾ.3 ರಂದು ರಾತ್ರಿ ಕೇರಳದಿಂದ ರೈಲಿನಲ್ಲಿ ಮಂಗಳೂರಿಗೆ ಬಂದಿಳಿದಿದ್ದ ಅಬಿನ್‌ ರೈಲು ನಿಲ್ದಾಣದಲ್ಲಿಯೇ ರಾತ್ರಿ ಕಳೆದು ಮುಂಜಾನೆ ಬಸ್‌ ಹತ್ತಿ ಕಡಬಕ್ಕೆ ಬಂದಿದ್ದ. ಆ ಸಮಯದಲ್ಲಿ ಪರೀಕ್ಷೆ ಬರೆಯಲು ಕಾಲೇಜಿಗೆ ಬರುತ್ತಿದ್ದ ಸಂತ್ರಸ್ತ ವಿದ್ಯಾರ್ಥಿನಿಯನ್ನು ಕಡಬ ಪೇಟೆಯಲ್ಲಿ ಭೇಟಿಯಾಗಿ ಮಾತನಾಡಿರುವುದು ಅಂಗಡಿಯೊಂದರ ಸಿಸಿ ಕೆಮರಾದಲ್ಲಿ ಪತ್ತೆಯಾಗಿದೆ. ತನ್ನ ಪ್ರೀತಿ ನಿರಾಕರಿಸದಂತೆ ಕೇಳಿಕೊಂಡಿದ್ದ ಎನ್ನಲಾಗಿದೆ.

ಯುವತಿ ನಿರ್ಲಕ್ಷಿಸಿ ಕಾಲೇಜಿಗೆ ಹೋಗಿದ್ದರಿಂದ ಸಿಟ್ಟಿಗೆದ್ದಿದ್ದ ಅಬಿನ್‌, ಕಡಬ ಎಪಿಎಂಸಿ ಪ್ರಾಂಗಣದ ಬಳಿಯಿಂದ ಕಡಬ ಸರಕಾರಿ ಪ.ಪೂ ಕಾಲೇಜಿಗೆ ಹೋಗುವ ಕಾಂಕ್ರೀಟ್‌ ರಸ್ತೆಯಲ್ಲಿ ನಡೆದು ಹೋಗಿ ಅಲ್ಲಿಯೇ ರಸ್ತೆಯ ಪಕ್ಕದಲ್ಲಿ ಜನವಸತಿ ಇಲ್ಲದ ಮನೆಯೊಂದರ ಹಿಂಬದಿ ಯಾರಿಗೂ ಕಾಣದಂತೆ ಬಟ್ಟೆ ಬದಲಾಯಿಸಿ ಕಾಲೇಜಿನ ಸಮವಸ್ತ್ರವನ್ನು ಹೋಲುವ ಅಂಗಿ ಧರಿಸಿ ನೇರ ಕಾಲೇಜಿಗೆ ಹೋಗಿದ್ದ.

ಪ್ರೀತಿಗೆ ಸ್ಪಂದಿಸದೇ ಹೋದಲ್ಲಿ ಆಸಿಡ್‌ ದಾಳಿ ನಡೆಸಲು ಎಲ್ಲಾ ಸಿದ್ಧತೆ ಮಾಡಿಕೊಂಡು ಬಂದಿದ್ದ ಎನ್ನಲಾಗಿದೆ.

You may also like

Leave a Comment