Home » E-Bike: ಮದ್ಯಪಾನ ಮಾಡಿ ಬಂದರೆ ಈ ಬೈಕ್‌ ಸ್ಟಾರ್ಟ್‌ ಆಗುವ ಪ್ರಶ್ನೆಯೇ ಇಲ್ಲ, ಸ್ಮೋಕ್‌ ಸೆಂಸರ್‌ ಕೂಡಾ ಅಳವಡಿಕೆ, ಬೆಲೆ 1.30ಲಕ್ಷ

E-Bike: ಮದ್ಯಪಾನ ಮಾಡಿ ಬಂದರೆ ಈ ಬೈಕ್‌ ಸ್ಟಾರ್ಟ್‌ ಆಗುವ ಪ್ರಶ್ನೆಯೇ ಇಲ್ಲ, ಸ್ಮೋಕ್‌ ಸೆಂಸರ್‌ ಕೂಡಾ ಅಳವಡಿಕೆ, ಬೆಲೆ 1.30ಲಕ್ಷ

1 comment
E-Bike

ಪ್ರಯಾಗ್‌ರಾಜ್: ರಾಜ್ಯದ ಏಕೈಕ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ-ಮೋತಿಲಾಲ್ ನೆಹರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಎನ್‌ಎನ್‌ಐಟಿ)-ಅಲಹಾಬಾದ್- ಸೊಸೈಟಿ ಆಫ್ ಆಟೋಮೋಟಿವ್ ಇಂಜಿನಿಯರ್ಸ್ (ಎಸ್‌ಎಇ) ಕ್ಲಬ್‌ನ ಸಹಯೋಗದೊಂದಿಗೆ ಉದಯೋನ್ಮುಖ ತಂತ್ರಜ್ಞರು ಇ-ಬೈಕ್ ಒಂದನ್ನು ವಿನ್ಯಾಸಗೊಳಿಸಿದ್ದು, ಈ ಮೂಲಕ ಚಾಲಕ ಕುಡಿದಿದ್ದರೆ ಬೈಕ್‌ ಸ್ಟಾರ್ಟ್‌ ಆಗುವುದಿಲ್ಲ. ಈ ನವೀನ ರಚನೆಯ ಬೈಕ್ ಗಂಟೆಗೆ 70 ಕಿಲೋಮೀಟರ್‌ಗಳ ಗರಿಷ್ಠ ವೇಗ ಮತ್ತು ನಾಲ್ಕು-ಗಂಟೆಗಳ ಚಾರ್ಜ್‌ನಲ್ಲಿ 60 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ.‌

ಇದನ್ನೂ ಓದಿ: Board Exam: 5,8,9 ಮತ್ತು 11ನೇ ತರಗತಿ ಮಕ್ಕಳಿಗೆ ಪಬ್ಲಿಕ್‌ ಪರೀಕ್ಷೆ ರದ್ದುಪಡಿಸಿದ ಹೈಕೋರ್ಟ್‌; ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಜ್ಜಾದ ಸರಕಾರ

ಇದನ್ನು ಕೇಳಿ ನಿಮಗೆ ಅಚ್ಚರಿಯಾಗಬಹುದು. ಆದರೆ ಇಂತಹ ಒಂದು ಬೈಕ್‌ನ ಆವಿಷ್ಕಾರ ಮಾಡಿರುವುದು ಟೆಕ್ಕಿಗಳು. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ, ಮೋತಿಲಾಲ್‌ ನೆಹರು ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ -ಅಲಹಾಬಾದ್‌ನ ವಿದ್ಯಾರ್ಥಿಗಳು, ಸೊಸೈಟಿ ಆಫ್‌ ಆಟೋಮೋಟಿವ್‌ ಇಂಜಿನಿಯರ್ಸ್‌ ಕ್ಲಬ್‌ನ ಸಹಯೋಗದಲ್ಲಿ ಈ ಆವಿಷ್ಕಾರ ಮಾಡಿದ್ದಾರೆ.

ಇಷ್ಟು ಮಾತ್ರವಲ್ಲದೇ ಈ ಬೈಕ್‌ನಲ್ಲಿದೆ ಹಲವು ವೈಶಿಷ್ಟ್ಯಗಳು. ಇದು ಆಲ್ಕೋಹಾಲ್‌ ಡಿಟೆಕ್ಷನ್‌ ಸಿಸ್ಟಮ್‌ ಮೂಲಕ ಎಲೆಕ್ಟ್ರಿಕ್‌ ಸ್ಕೂಟರ್‌ನ ಗಮನ ಸೆಳೆಯುವ ಜೊತೆಗೆ ಇದು ಸ್ಮೋಕ್‌ ಸೆನ್ಸರ್‌, ಆಂಟಿ ಥೆಫ್ಟ್‌ ಅಲಾರಂ, ಸೇರಿದಂತೆ ಹಲವು ಫೀಚರ್‌ಗಳನ್ನು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಇಬೈಕ್‌ನಲ್ಲಿ ಪರಿಚಯ ಮಾಡಿಸಿದ್ದಾರೆ. ಒಂದೊಮ್ಮೆ ಅಪಘಾತ ಸಂಭವಿಸಿದರೂ ಕೂಡಾ ಇದರಲ್ಲಿ ಸಹಾಯಕ್ಕಾಗಿ ತುರ್ತು ಸೇವೆಗಳನ್ನು ಸಂಪರ್ಕಿಸುವ ಟೆಕ್ನಾಲಜಿಯನ್ನು ಕೂಡಾ ಅಳವಡಿಸಲಾಗಿದೆ. ಕಡಿದಾದ ರಸ್ತೆಲ್ಲಿ ಸರಾಗವಾಗಿ ಏರಲು ಸಹಾಯ ಮಾಡುವಂತೆ ಹಿಲ್‌ ಅಸಿಸ್ಟ್‌ಫೀಚರ್‌ನ್ನೂ ಇದು ಒಳಗೊಂಡಿದೆ.

ಈ ಬೈಕ್‌ಗೆ ಸುಮಾರು 1.30 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಭೋಪಾಲ್‌ನಲ್ಲಿ ಇಂಪೀರಿಯಲ್‌ ಸೊಸೈಟಿ ಆಫ್‌ ಇನ್ನೋವೇಟಿವ್‌ ಇಂಜಿನಿಯರ್ಸ್‌ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಈ ಇ-ಬೈಕ್‌ನ್ನು ಅನಾವರಣಗೊಳಿಸಲಾಗಿದ್ದು, ಉತ್ತಮ ವಿನ್ಯಾಸ, ಫ್ಯೂಚರ್‌ ಅವಾರ್ಡ್‌ ಎಂದು ಎರಡು ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

https://www.facebook.com/MNNITALLD/posts/811509207660218?ref=embed_post

 

You may also like

Leave a Comment