Home » Prime minster:ಇನ್ನೆಷ್ಟು ಸಮಯ ಮೋದಿ ಪ್ರಧಾನಿ ಹುದ್ದೆಯಲ್ಲಿರುತ್ತಾರೆ? ಅಮಿತ್ ಶಾ ಕೊಟ್ರು ಬಿಗ್ ಅಪ್ಡೇಟ್

Prime minster:ಇನ್ನೆಷ್ಟು ಸಮಯ ಮೋದಿ ಪ್ರಧಾನಿ ಹುದ್ದೆಯಲ್ಲಿರುತ್ತಾರೆ? ಅಮಿತ್ ಶಾ ಕೊಟ್ರು ಬಿಗ್ ಅಪ್ಡೇಟ್

1 comment
Prime minister

Prime minister: 2014ರಲ್ಲಿ ಶುರುವಾದ ಪ್ರಧಾನಿ ಮೋದಿ ಹವಾ ಇನ್ನೂ ಕಡಿಮೆಯಾಗಿಲ್ಲ. ಇಡೀ ದೇಶ ಇಂದಿಗೂ ಮೋದಿ, ಮೋದಿ ಎನ್ನುತ್ತದೆ. ಅದೊಂದು ಮುಗಿಯದ ಅಧ್ಯಾಯ ಎನ್ನುವಂತಾಗಿದೆ. ಈ ಸಲದ ಚುನಾವಣೆಯಲ್ಲೂ ಅಭೂತಪೂರ್ವ ಗೆಲವು ಸಾಧಿಸಿ, ಹ್ಯಾಟ್ರಿಕ್ ಭಾರಿಸಿ ಮೋದಿ ಪ್ರಧಾನಿಯಾಗೋದು ಪಕ್ಕಾ. ಹಾಗಂತ ಮೋದಿ ಎಲ್ಲಿವರೆಗೂ ದೇಶದ ಪ್ರಧಾನಿ(Prime minister) ಆಗಿರಬಹುದು? ಎಂಬುದು ಹಲವರ ಪ್ರಶ್ನೆ, ಕುತೂಹಲ. ಇದೀಗ ಈ ಪ್ರಶ್ನೆಗೆ ಮೋದಿ ಪರಮಾಪ್ತ ಅಮಿತ್ ಶಾ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: Mangalore: ಮಂಗಳೂರು ಕಾಂಗ್ರೆಸ್ MP ಪಟ್ಟಿಯಲ್ಲಿದ್ದ ಕಿರಣ್ ಬುಡ್ಲೆ ಗುತ್ತು ಹೆಸರು ಹೈಕಮಾಂಡ್ ಅಂತಿಮ ಪಟ್ಚಿಯಲ್ಲಿ ಕೈಬಿಡಲು ಭಾರೀ ಷಡ್ಯಂತ್ರ ! ವಾಮಮಾರ್ಗ ಹಿಡಿದು ಕೈ ಅಡ್ಡ ಹಿಡಿಯಲು ಹೊರಟವರು ಯಾರು ?!

ಹೌದು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಪರಮಾಪ್ತ ಹಾಗೂ ದೇಶದ ಗೃಹಮಂತ್ರಿ ಅಮಿತ್ ಶಾ ಅವರು ನಮ್ಮೆಲ್ಲರ ನೆಚ್ಚಿನ ಮೋದಿಯವರು ಮುಂದಿನ 10 ವರ್ಷಗಳ ಕಾಲ ಪ್ರಧಾನ ಮಂತ್ರಿ ಆಗಿರುತ್ತಾರೆ. ಅವರೇ ಆಡಳಿತದಲ್ಲಿ ಮುಂದುವರಿಯುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ನಮ್ಮ ದೇಶದಲ್ಲಿ ಕ್ರಿಯಾತ್ಮಕ ಪ್ರಜಾಪ್ರಭುತ್ವವಿದೆ. ಪ್ರಧಾನಿ ಮೋದಿ ಅವರು ಕಾರ್ಯಕ್ಷಮತೆಯ ರಾಜಕೀಯವನ್ನು ಸ್ಥಾಪಿಸಿದ್ದಾರೆ. ಕೆಲಸ ಮಾಡುವವರಿಗೆ ದೇಶವು ಅವಕಾಶವನ್ನು ನೀಡುತ್ತದೆ. ನಾವು ಉತ್ತಮವಾಗಿ ಕಾರ್ಯನಿರ್ವಹಿಸಿದರೆ, ನಾವು ಅಧಿಕಾರದಲ್ಲಿ ಉಳಿಯುತ್ತೇವೆ. ನಮ್ಮ ನ್ಯೂನತೆಗಳನ್ನು ನಿಯಂತ್ರಿಸಬೇಡಿ. ಆಗ ನಾವು ಗೆಲ್ಲುವುದಿಲ್ಲ. ಏಕೆಂದರೆ ನೀವು ಮುಂದಿನ 10 ವರ್ಷಗಳ ಬಗ್ಗೆ ಕೇಳಿದ್ದೀರಿ. ಮುಂದಿನ 10 ವರ್ಷಗಳು ಪ್ರಧಾನಿ ನರೇಂದ್ರ ಮೋದಿ ಮಾತ್ರ ಎಂದು ನಾನು ನಿಮಗೆ ಹೇಳಬಲ್ಲೆ ಎಂದು ತಿಳಿಸಿದ್ದಾರೆ.

You may also like

Leave a Comment