Home » Theft Case: ಉಂಡ ಮನೆಗೆ ಕನ್ನ; ಪೌಡರ್‌ ಮಿಶ್ರಿತ ಜ್ಯೂಸ್‌ ನೀಡಿ ಮನೆ ಮಾಲೀಕರ ಪ್ರಜ್ಞೆ ತಪ್ಪಿಸಿ, ಕೋಟಿ ಕೋಟಿ ಲೂಟಿ ಮಾಡಿದ ನೇಪಾಳಿ ದಂಪತಿ

Theft Case: ಉಂಡ ಮನೆಗೆ ಕನ್ನ; ಪೌಡರ್‌ ಮಿಶ್ರಿತ ಜ್ಯೂಸ್‌ ನೀಡಿ ಮನೆ ಮಾಲೀಕರ ಪ್ರಜ್ಞೆ ತಪ್ಪಿಸಿ, ಕೋಟಿ ಕೋಟಿ ಲೂಟಿ ಮಾಡಿದ ನೇಪಾಳಿ ದಂಪತಿ

1 comment
Theft Case

Bengaluru Theft Case: ಆ ದಂಪತಿಗಳಿಬ್ಬರು ಮನೆ ಕೆಲಸಕ್ಕೆಂದು ಸೇರಿಕೊಂಡು ಮಾಲೀಕರ ವಿಶ್ವಾಸವನ್ನು ಗಳಿಸಿ, ನಂತರ ಕೋಟಿ ಕೋಟಿ ಲೂಟಿ ಮಾಡಿ ಸಿಕ್ಕಿ ಬಿದ್ದ ಘಟನೆಯೊಂದು ನಡೆದಿದೆ.

ಇದನ್ನೂ ಓದಿ: Shivamogga: ರೈಲಿಗೆ ತಲೆಕೊಟ್ಟು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸುಸೈಡ್‌

ಮನೆ ಮಾಲೀಕರ ವಿಶ್ವಾಸ, ನಂಬಿಕೆಯನ್ನು ಗಳಿಸಿ ಮನೆ ಲೂಟಿ ಮಾಡಿ ಪರಾರಿಯಾಗಿದ್ದ ನೇಪಾಳಿ ದಂಪತಿಯ ಬಂಧನವಾಗಿದೆ. ದಿನೇಶ್‌ (21), ಮೇನಕಾ (20) ಬಂಧಿತ ಆರೋಪಿಗಳು.

ದಿನೇಶ್‌ ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದರೆ, ಮೇನಕಾ ಮನೆ ಕೆಲಸ ಮಾಡುತ್ತಿದ್ದಳು. ತಾವು ಕೆಲಸ ಮಾಡುತ್ತಿದ್ದ ಮನೆಯನ್ನೇ ಇವರು ದೋಚಿದ್ದಾರೆ. ಮನೆ ಮಾಲೀಕ ಹೊರಗೆ ಹೋದಾಗ ಮನೆಯಲ್ಲಿದ್ದ ಅವರ ಸೊಸೆಗೆ ಪೌಡರ್‌ ಮಿಶ್ರಿತ ಜ್ಯೂಸ್‌ ನೀಡಿ, ಆಕೆ ಪ್ರಜ್ಞೆ ತಪ್ಪುವಂತೆ ಮಾಡಿ, ಲಕ್ಷಾಂತರ ನಗದು ಸೇರಿ ಒಂದು ಕೋಟಿ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು.

ಕೊಡಿಗೇಹಳ್ಳಿಯ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರ ಮನೆಯಲ್ಲಿ ಈ ದಂಪತಿಗಳು ಕೆಲಸಕ್ಕೆ ಸೇರಿದ್ದರು. ಕಳೆದ ಫೆ.27 ರಂದು ಉದ್ಯಮಿ ಕೆಲಸಕ್ಕೆಂದು ಹೊರ ಹೋಗಿದ್ದು, ಫೆ.28 ರ ರಾತ್ರಿ ಉದ್ಯಮಿ ವಾಪಾಸು ಬರುವಾಗ ಅವರ ಸೊಸೆ ಅರೆ ಪ್ರಜ್ಞಾವಸ್ಥೆಯಲ್ಲಿದ್ದರು.

ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ ಉದ್ಯಮಿ, ಮನೆ ಪರಿಶೀಲನೆ ಮಾಡಿದಾಗ ಸುಮಾರು 40 ಲಕ್ಷ ನಗದು, ವಿದೇಶಿ ಕರೆನ್ಸಿ, ಎರಡು ಚಿನ್ನದ ಉಂಗುರು, ಮೂರು ದುಬಾರಿ ವಾಚ್‌ ಕಳ್ಳತನವಾಗಿತ್ತು. ಜೊತೆಗೆ ಮನೆಯಲ್ಲಿ ಕೆಲಸಕ್ಕಿಂದ ದಂಪತಿ ನಾಪತ್ತೆಯಾಗಿರುವುದು ತಿಳಿದು ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಮಾಲು ಸಮೇತ ದಂಪತಿಗಳನ್ನು ಕೊಡಿಗೆಹಳ್ಳಿ ಪೊಲೀಸರು ಬಂಧನ ಮಾಡಿದ್ದಾರೆ.

ಆರೋಪಿಗಳಿಂದ ನಗದು ಸೇರಿ ಒಂದು ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರಿದಿದೆ.

You may also like

Leave a Comment