Home » Crime News: ಚರ್ಮರೋಗಕ್ಕೆ ಚಿಕಿತ್ಸೆ ಕೊಡುವ ನೆಪ; ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ, ಬಾಲ ಮಂಜುನಾಥ ಸ್ವಾಮೀಜಿ ಅರೆಸ್ಟ್

Crime News: ಚರ್ಮರೋಗಕ್ಕೆ ಚಿಕಿತ್ಸೆ ಕೊಡುವ ನೆಪ; ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ, ಬಾಲ ಮಂಜುನಾಥ ಸ್ವಾಮೀಜಿ ಅರೆಸ್ಟ್

1 comment
Crime news

ಅಪ್ರಾಪ್ತ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಹಂಗರನಹಳ್ಳಿ ವಿದ್ಯಾಚೌಡೇಶ್ವರಿ ಮಹಾ ಸಂಸ್ಥಾನ ಮಠದ ಬಾಲ ಮಂಜುನಾಥ ಸ್ವಾಮೀಜಿ ಅವರನ್ನು ಪೊಲೀಸರು ಗುರುವಾರ ತಡರಾತ್ರಿ ಬಂಧಿ ಸಿದ್ದಾರೆ. ಚರ್ಮರೋಗಕ್ಕೆ ಚಿಕಿತ್ಸೆ ಕೊಡಿಸುವ ನೆಪದಲ್ಲಿ ವಿಡಿಯೊ ರೆಕಾರ್ಡ್ ಮಾಡಿ ಬ್ಲಾಕ್ ಮೇಲೆ ಮಾಡಿರುವುದಾಗಿ ಸ್ವಾಮೀಜಿ ಸೇವಕ ಅಭಿಷೇಕ್ ಸೇರಿ 6 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: Yadagiri: ಕೊನೇ ಕ್ಷಣದಲ್ಲಿ ಏಕಾಏಕಿ ರದ್ದಾಯ್ತು ‘ಸರಿಗಮಪ-20 ಗ್ರಾಂಡ್ ಫಿನಾಲೆ’ – ಕಾರಣವೇನು?

ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರು ಮಠಕ್ಕೆ ಭೇಟಿ ನೀಡಿ ಗುರುವಾರ ಸಂಜೆಯಿಂದ ಪರಿಶೀಲನೆ ನಡೆಸಿದ್ದರು. ಎಸ್.ಪಿ.ಅಶೋಕ್ ಕೆ.ವಿ.ಸೇರಿದಂತೆ ನಾನಾ ಅಧಿಕಾರಿಗಳು ತಡರಾತ್ರಿವರೆಗೂ ತನಿಖೆ ನಡೆಸಿದ್ದರು. ಈ ವೇಳೆ ಸ್ವಾಮೀಜಿಯೇ ಅಪ್ರಾಪ್ತ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಅಸಲಿ ಕಥೆ ಬಯಲಾಗಿದೆ. ಹೀಗಾಗಿ ಪೋಕ್ಸೋ ಕಾಯಿದೆಯಡಿ ಪೊಲೀಸರು ಬಂಧಿಸಿದ್ದಾರೆ.

You may also like

Leave a Comment