Home » Rama Navami Holiday: ಬಂಗಾಳದಲ್ಲಿ ಪ್ರಪಥಮ ಬಾರಿಗೆ ರಾಮನವಮಿ ದಿನ ಸಾರ್ವತ್ರಿಕ ರಜೆ ಘೋಷಣೆ; ಇದ್ಯಾವ ನಾಟಕ ಎಂದ ಬಿಜೆಪಿ

Rama Navami Holiday: ಬಂಗಾಳದಲ್ಲಿ ಪ್ರಪಥಮ ಬಾರಿಗೆ ರಾಮನವಮಿ ದಿನ ಸಾರ್ವತ್ರಿಕ ರಜೆ ಘೋಷಣೆ; ಇದ್ಯಾವ ನಾಟಕ ಎಂದ ಬಿಜೆಪಿ

1 comment

CM Mamata Banerjee on Rama Navami: ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ಸರ್ಕಾರವು ರಾಮ ನವಮಿಯ ದಿನದಂದು ರಜೆಯನ್ನು ನೀಡುವ ಮೂಲಕ ದೊಡ್ಡ ಘೋಷಣೆ ಮಾಡಿದೆ. 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೂ ಮುನ್ನ ಈ ಘೋಷಣೆ ಮಾಡಿರುವುದರಿಂದ ಮಮತಾ ಬ್ಯಾನರ್ಜಿ ಸರ್ಕಾರದ ಈ ಹೆಜ್ಜೆಗೆ ರಾಜಕೀಯ ಅರ್ಥ ಕಲ್ಪಿಸಲಾಗುತ್ತಿದೆ. ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ರಾಮ ನವಮಿ(Rama Navami)ಯಂದು ರಜೆ ನೀಡಲಾಗಿದೆ. ಇದೇ ವೇಳೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(CM Mamata Banerjee) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಬಾರಿ ರಾಮ ನವಮಿಯನ್ನು ಏಪ್ರಿಲ್ 17 ರಂದು ಆಚರಿಸಲಾಗುತ್ತದೆ.

 

ಕೋಲ್ಕತ್ತಾದಲ್ಲಿ ನಡೆಯಲಿರುವ ಟಿಎಂಸಿ ಚುನಾವಣಾ ರ್ಯಾಲಿಗೆ ಒಂದು ದಿನ ಮುಂಚಿತವಾಗಿ ರಾಮ ನವಮಿಯಂದು ರಜೆ ಘೋಷಿಸಲಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಾನುವಾರ (ಮಾರ್ಚ್ 10) ಕೋಲ್ಕತ್ತಾದ ಬ್ರಿಗೇಡ್ ಮೈದಾನದಿಂದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ.

 

ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ, ಕಾಳಿ ಪೂಜೆ ಮತ್ತು ಸರಸ್ವತಿ ಪೂಜೆಯನ್ನು ಯಾವಾಗಲೂ ಆಚರಿಸಲಾಗುತ್ತದೆ, ಆದರೆ ರಾಮ ನವಮಿ ಮತ್ತು ಹನುಮ ಜಯಂತಿಯಂತಹ ಹಬ್ಬಗಳಲ್ಲಿ ಹಿಂಸಾತ್ಮಕ ಘಟನೆಗಳು ನಡೆಯುವ ವರದಿಯಾಗುತ್ತ ಇತ್ತು. ಬಂಗಾಳದಲ್ಲಿ ರಾಮನವಮಿ ಮತ್ತು ಹನುಮ ಜಯಂತಿಯನ್ನು ಈಗ ಹಿಂದೆಂದಿಗಿಂತಲೂ ದೊಡ್ಡ ಹಬ್ಬಗಳಾಗಿ ಆಚರಿಸಲಾಗುತ್ತದೆ.

 

ಕಳೆದ ವರ್ಷವೂ ರಾಮನವಮಿಯಂದು ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಹಿಂಸಾತ್ಮಕ ಘಟನೆಗಳು ನಡೆದವು ಮತ್ತು ಬಿಜೆಪಿ ರಾಜ್ಯ ಸರ್ಕಾರವನ್ನು ತೀವ್ರವಾಗಿ ಮೂಲೆಗುಂಪು ಮಾಡಿತ್ತು. ಇಂತಹ ಪರಿಸ್ಥಿತಿಯಲ್ಲಿ ಈ ಬಾರಿ ಚುನಾವಣೆಗೂ ಮುನ್ನ ರಾಮನವಮಿ ರಜೆ ಘೋಷಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮ ಹಿಂದೂ ಮತದಾರರ ಮನ ಗೆಲ್ಲುವ ಪ್ರಯತ್ನವೆಂಬಂತೆಯೂ ಕಂಡು ಬರುತ್ತಿದೆ.

ಇದನ್ನೂ ಓದಿ : ಮಂಗಳೂರಿನ ಕುತ್ತಾರಿನ ಕೊರಗಜ್ಜನ ದೈವಸಾನಿಧ್ಯದಲ್ಲಿ ನಟ ದರ್ಶನ್‌ ತೂಗುದೀಪ

You may also like

Leave a Comment