Home » Addict Doctor Video: ಆಸ್ಪತ್ರೆ ಆವರಣದಲ್ಲಿ ನಗ್ನವಾಗಿಯೇ ಓಡಾಡಿದ ವೈದ್ಯ, ವೀಡಿಯೋ ವೈರಲ್‌

Addict Doctor Video: ಆಸ್ಪತ್ರೆ ಆವರಣದಲ್ಲಿ ನಗ್ನವಾಗಿಯೇ ಓಡಾಡಿದ ವೈದ್ಯ, ವೀಡಿಯೋ ವೈರಲ್‌

1 comment

Addict Doctor roams Hospital: ಮಹಾರಾಷ್ಟ್ರದ ಸರಕಾರಿ ಆಸ್ಪತ್ರೆಯ ವೈದ್ಯರೊಬ್ಬರು ಆಸ್ಪತ್ರೆಯೊಳಗೆ(Addict Doctor Video) ಬೆತ್ತಲೆಯಾಗಿ ಸುತ್ತಾಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ರಾಜ್ಯದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

 

ಮೂಲಗಳ ಪ್ರಕಾರ ಬಿಡಕೀನ್ ಗ್ರಾಮಾಂತರ ಸರ್ಕಾರಿ ಆಸ್ಪತ್ರೆಯ 45 ವರ್ಷದ ವೈದ್ಯನಿಗೆ ಕುಡಿತದ ಚಟ ಇದ್ದು, ಕುಡಿದು ಆಸ್ಪತ್ರೆಯಲ್ಲಿ ಬಟ್ಟೆ ಇಲ್ಲದೆ ಅಲೆದಾಡುತ್ತಿರುವುದು ಕಂಡು ಬಂದಿದೆ.

 

ಸಂಭಾಜಿನಗರ ಜಿಲ್ಲಾ ಆರೋಗ್ಯ ಸೇವೆಗಳ ಮುಖ್ಯಸ್ಥ, ಸಿವಿಲ್ ಸರ್ಜನ್ ಡಾ.ದಯಾನಂದ ಮೋತಿಪಾವ್ಲೆ ಅವರು ಈ ಘಟನೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ನೀಡಿದ್ದು, ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರಾಗಿದ್ದರೆ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

 

ವಾಶ್‌ರೂಮ್‌ನ ಒಳಗೆ ಹೋಗುವಾಗ ಕೂಡಾ, ಅದರ ಬಾಗಿಲು ತೆರೆದಿರುವುದು ಕೂಡಾ ವೀಡಿಯೋದಲ್ಲಿ ಕಂಡು ಬಂದಿದೆ.

ಇದನ್ನೂ ಓದಿ : ಬಂಗಾಳದಲ್ಲಿ ಪ್ರಪಥಮ ಬಾರಿಗೆ ರಾಮನವಮಿ ದಿನ ಸಾರ್ವತ್ರಿಕ ರಜೆ ಘೋಷಣೆ; ಇದ್ಯಾವ ನಾಟಕ ಎಂದ ಬಿಜೆಪಿ

You may also like

Leave a Comment