Home » Pavitra Gowda: ಕೈಯಲ್ಲಿ 777 ಟ್ಯಾಟೂ ಹಾಕಿಕೊಂಡ ಪವಿತ್ರಾ ಗೌಡ; ದರ್ಶನ್‌ಗೆ ಲಿಂಕ್‌ ಮಾಡಿದ ಫ್ಯಾನ್ಸ್‌

Pavitra Gowda: ಕೈಯಲ್ಲಿ 777 ಟ್ಯಾಟೂ ಹಾಕಿಕೊಂಡ ಪವಿತ್ರಾ ಗೌಡ; ದರ್ಶನ್‌ಗೆ ಲಿಂಕ್‌ ಮಾಡಿದ ಫ್ಯಾನ್ಸ್‌

410 comments
Pavitra Gowda

Pavitra Gowda Tattoo: ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಪವಿತ್ರ ಗೌಡ ಮತ್ತು ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರ ನಡುವೆ ಕೆಲವೊಂದು ಟಾಕ್‌ವಾರ್‌ ನಡೆದಿತ್ತು. ಇದು ಈಗ ತಣ್ಣಗಾಗಿದೆ. ಈಗ ಇನ್ನೊಂದು ವಿಷಯ ಮುನ್ನೆಲೆಗೆ ಬಂದಿದೆ. ಅದುವೇ ಟ್ಯಾಟೂ ವಿಷಯ. ಪವಿತ್ರ ಗೌಡ ಅವರು ಟ್ಯಾಟುವೊಂದನ್ನು ಹಾಕಿದ್ದು, ಈ ಕುರಿತು ಇದೀಗ ನೆಟ್ಟಿಗರು ಹಲವಾರು ಕಮೆಂಟ್‌ ಮಾಡಿದ್ದು, ಇದಕ್ಕೆ ಕೂಡಾ ದರ್ಶನ್‌ ಲಿಂಕ್‌ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: MP Pratap Simha: ಮಹಾರಾಜರೇ ಜನರ ಸಮಸ್ಯೆಯನ್ನು ಪರಿಹರಿಸಲು ಬರುತ್ತಿದ್ದಾರೆ ಅದನ್ನು ನಾವು ಸ್ವಾಗತಿಸಬೇಕು: ಒಡೆಯರ್ ಗೆ ಟಾಂಗ್ ನೀಡಿದ ಸಂಸದ ಪ್ರತಾಪ್ ಸಿಂಹ

ನಟಿ ಪವಿತ್ರ ಗೌಡ ಅವರು ಇತ್ತೀಚಿಗೆ ಬಿಗ್‌ಬಾಸ್‌ ಸ್ಪರ್ಧಿ ನೀತು ವನಜಾಕ್ಷಿ ಅವರ ಟ್ಯಾಟೂ ಸ್ಟುಡಿಯೋವೊಂದಕ್ಕೆ ಹೋಗಿದ್ದು, ಅಲ್ಲಿ ತಮ್ಮ ಕೈ ಮೇಲೆ 777 ಎಂಬ ಹಚ್ಚೆ ಹಾಕಿಸಿಕೊಂಡಿದ್ದಾರೆ. ಹಾಗೂ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದರಲ್ಲಿ ಸಣ್ಣ ಹಾರ್ಟ್‌ಮಾರ್ಕ್‌ ಕೂಡಾ ಇದ್ದು, ಇದಕ್ಕೆ ಫ್ಯಾನ್ಸ್‌ಗಳು ನಾನಾ ಅರ್ಥ ಕಲ್ಪಿಸಿ ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: CAA News: ಸಿಎಎ ಜಾರಿ ನಂತರ ಯಾವುದೇ ಭಾರತೀಯ ಪ್ರಜೆಯನ್ನು ಪೌರತ್ವವನ್ನು ಸಾಬೀತುಪಡಿಸಲು ಯಾವುದೇ ದಾಖಲೆಯನ್ನು ಕೇಳಲಾಗುವುದಿಲ್ಲ : ಕೇಂದ್ರ ಗೃಹ ಸಚಿವಾಲಯ.

ಪವಿತ್ರ ಗೌಡಗೆ ನಟ ದರ್ಶನ್‌ ಜೊತೆಗಿನ ಆಪ್ತತೆ ಎಲ್ಲರಿಗೂ ಗೊತ್ತಿದೆ. ದರ್ಶನ್‌ ಅವರ ಹುಟ್ಟಿದ ವರ್ಷ 1977. ಪವಿತ್ರ ಮಗಳು ಹುಟ್ಟಿದ್ದು ನವೆಂಬರ್‌ 7. ಹೀಗಾಗಿ 777 ಟ್ಯಾಟ್‌ ಹಾಕಿಕೊಂಡಿರಬಹುದು ಎಂದು ಫ್ಯಾನ್ಸ್‌ ಊಹೆ ಮಾಡಿದ್ದಾರೆ. ಇನ್ನು ಕೆಲವರು ಇದನ್ನು ದರ್ಶನ್‌ ಅವರ ಕಾರಿನ ನಂಬರ್‌ ಎಂದು ಹೇಳಿಕೊಂಡಿದ್ದು, ನಾನಾ ಕಮೆಂಟ್‌ ಗಳು ಬಂದಿದೆ.

You may also like

Leave a Comment