ಭಾರತದಲ್ಲಿ ಜಾರಿಗೆ ಬಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವವರ ಸಂಖ್ಯೆ ದಿನದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ತಮಿಳುನಾಡು ಮುಖ್ಯಮಂತ್ರಿ ಸ್ಟ್ಯಾಲಿನ್ ಅವರು ಸಿ ಎ ಎ ಜಾರಿಯನ್ನು ವಿರೋಧಿಸಿದ್ದಾರೆ.
ಇದನ್ನು ಓದಿ: Putturu: ವಿವೇಕಾನಂದ ಪಾಲಿಟೆಕ್ನಿಕ್‌ನ ನಿವೃತ್ತ ಪ್ರಾಂಶುಪಾಲರಾದ ಇಂಜಿನಿಯರ್ ಗೋಪಿನಾಥ್ ಶೆಟ್ಟಿ ನಿಧನ
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯನ್ನು ‘ಸಂಪೂರ್ಣವಾಗಿ ಅನಗತ್ಯವಾದ ಕಾನೂನು’ ಎಂದು ಕರೆದ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟ್ಯಾಲಿನ್, ವಿವಾದಾತ್ಮಕವಾದ ಪೌರತ್ವ ಕಾನೂನನ್ನು ತಮಿಳುನಾಡಿನಲ್ಲಿ ಜಾರಿಗೆ ತರಲಾಗುವುದಿಲ್ಲ ಎಂದು ಮಂಗಳವಾರ ಹೇಳಿದ್ದಾರೆ.
ಇದನ್ನೂ ಓದಿ: Dharmasthala: ಶಿವರಾತ್ರಿ ಬೆನ್ನಲ್ಲೇ ಧರ್ಮಸ್ಥಳ ಭಕ್ತರಿಗೆ ವಿಶೇಷ ಮಾಹಿತಿ !!
“ಭಾರತೀಯರಲ್ಲಿ ವಿಭಜನೆಯನ್ನು ಸೃಷ್ಟಿಸಲು ಮಾತ್ರ ದಾರಿ ಮಾಡಿಕೊಡುವ ಸಿಎಎಯಿಂದ ಯಾವುದೇ ಪ್ರಯೋಜನಗಳಿಲ್ಲ. ಈ ಕಾನೂನು ಸಂಪೂರ್ಣವಾಗಿ ಅನಗತ್ಯವಾಗಿದೆ ಎಂಬುದು ನಮ್ಮ ಸರ್ಕಾರದ ನಿಲುವಾಗಿದೆ, ಇದನ್ನು ರದ್ದುಗೊಳಿಸಬೇಕು “ಎಂದು ಸ್ಟ್ಯಾಲಿನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ತಮಿಳುನಾಡು ಸರ್ಕಾರವು ಸಿಎಎಯನ್ನು ಜಾರಿಗೆ ತರಲು ಯಾವುದೇ ರೀತಿಯಲ್ಲೂ ಅವಕಾಶ ನೀಡುವುದಿಲ್ಲ, ಇದು ಬಹುತ್ವ, ಜಾತ್ಯತೀತತೆ, ಅಲ್ಪಸಂಖ್ಯಾತ ಸಮುದಾಯಗಳು ಮತ್ತು ಶ್ರೀಲಂಕಾದ ತಮಿಳು ನಿರಾಶ್ರಿತರಿಗೆ ವಿರುದ್ಧವಾದದ್ದು” ಎಂದು ಹೇಳಿದ್ದಾರೆ.
ಒಟ್ಟಾರೆ ದೇಶದಲ್ಲಿ ಜಾರಿಯಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆಯು ಕೆಲವರಿಗೆ ಸಂತಸವನ್ನುಂಟು ಮಾಡಿದ್ದರೆ ಇನ್ನೂ ಕೆಲವರ ಅಸಂತೋಷಕ್ಕೂ ಕಾರಣವಾಗಿದೆ.
ಇನ್ನು ಮುಂದೆ ದೇಶದಲ್ಲಿ ಸಿಎಎ ಕಾಯ್ದೆಯು ಅಕ್ರಮ ವಲಸಿಗರಿಗೆ ಕಡಿವಾಣ ಹಾಕಲಿದೆ.
