Home » PM Modi: ಬಿರುಸುಗೊಂಡ ಬಿಜೆಪಿ ಪ್ರಚಾರ; ಮಾ.16,18 ರಂದು ಮೋದಿ ಕ್ಯಾಂಪೇನ್‌ ಶುರು

PM Modi: ಬಿರುಸುಗೊಂಡ ಬಿಜೆಪಿ ಪ್ರಚಾರ; ಮಾ.16,18 ರಂದು ಮೋದಿ ಕ್ಯಾಂಪೇನ್‌ ಶುರು

1 comment
PM Modi

PM Modi: ಪ್ರಧಾನಿ ನರೇಂದ್ರ ಮೋದಿ ಅವರು ಇದೇ 16 ಹಾಗೂ 18ರಂದು ಎರಡು ದಿನ ರಾಜ್ಯಕ್ಕೆ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ಮಾರ್ಚ್ 16ರಂದು ಕಲಬುರಗಿಗೆ ಭೇಟಿ 18ರಂದು ಶಿವಮೊಗ್ಗದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಆ ಮೂಲಕ ರಾಜ್ಯದಿಂದಲೇ ಪ್ರಧಾನಿ ಮೋದಿ ಪ್ರಚಾರ ಆರಂಭಿಸಲಿದ್ದು, ಕಾರ್ಯಕರ್ತರಲ್ಲಿ ಉತ್ಸಾಹ ಮೂಡುವಂತಾಗಿದೆ.

ಇದನ್ನೂ ಓದಿ: CAA: ಸಿಎಎ ನೆರವಿಗೆ ಸಹಾಯವಾಣಿ ಪ್ರಾರಂಭ

ರಾಜ್ಯ ಬಿಜೆಪಿ ಕಚೇರಿಯಲ್ಲಿ ಬುಧವಾರ ಈ ಬಗ್ಗೆ ಮಾಹಿತಿ ನೀಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್ ಕುಮಾರ್, “ಇದೇ 16ರಂದು ಮಧ್ಯಾಹ್ನ 2 ಎನ್.ವಿ. ಆಟದ ಮೈದಾನದಲ್ಲಿ ಮೋದಿ ಅವರು ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. 18ರಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ,” ಎಂದು “ಮುಂದಿನ ದಿನಗಳಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸೇರಿ ಹಲವು ನಾಯಕರು ನಾನಾ ಕ್ಷೇತ್ರಗಳಿಗೆ ನೀಡಲಿದ್ದಾರೆ,” ಎಂದರು.

ಇದನ್ನೂ ಓದಿ: FasTag: ಹೊಸ ಫಾಸ್‌ಟ್ಯಾಗ್‌ ಖರೀದಿಸಿ; ಮಾರ್ಚ್‌ 15 ರೊಳಗೆ ಈ ಕೆಲಸ ಮಾಡಿ

You may also like

Leave a Comment