Home » K.S.Ishwarappa: ಶಿವಮೊಗ್ಗದಲ್ಲಿ ಎದ್ದು ನಿಂತ ಈಶ್ವರಪ್ಪ, ಸ್ವತಂತ್ರ ಸ್ಪರ್ಧೆಗೆ ನಿರ್ಧಾರ, ಕುತೂಹಲ ಮೂಡಿಸಿದ ತ್ರಿಕೋನ ಸ್ಪರ್ಧೆ!

K.S.Ishwarappa: ಶಿವಮೊಗ್ಗದಲ್ಲಿ ಎದ್ದು ನಿಂತ ಈಶ್ವರಪ್ಪ, ಸ್ವತಂತ್ರ ಸ್ಪರ್ಧೆಗೆ ನಿರ್ಧಾರ, ಕುತೂಹಲ ಮೂಡಿಸಿದ ತ್ರಿಕೋನ ಸ್ಪರ್ಧೆ!

1 comment
K S Eshwarappa

K.S.Ishwarappa: ಶಿವಮೊಗ್ಗ: ಬಿಜೆಪಿ ಕಾರ್ಯಕರ್ತರ ನೋವಿನ ದನಿಯಾಗಿ ನಾನು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹಿರಿಯ ಬಿಜೆಪಿ ನಾಯಕ, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪನವರು ಘೋಷಿಸಿದ್ದಾರೆ.

ಕೆಎಸ್ ಈಶ್ವರಪ್ಪನವರ ಮಗ ಕೆ.ಇ. ಕಾಂತೇಶ್ ಅವರಿಗೆ ಬಿಜೆಪಿಯಿಂದ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ತಪ್ಪಿದ ವಿಚಾರಕ್ಕೆ ಸಂಬಂಧಿಸಿ ಶಿವಮೊಗ್ಗ ನಗರದ ಬಂಜಾ‌ರ್ ಭವನದಲ್ಲಿ ಅವರು ಸೇರಿದ್ದರು. ಅಲ್ಲಿ ” ಇದು ಸ್ವಪ್ರತಿಷ್ಠೆಯ ಪ್ರದರ್ಶನವಲ್ಲ, ಸ್ವಾಭಿಮಾನದ ಸಂಘರ್ಷ” ಎನ್ನುವ ಘೋಷವಾಕ್ಯದಲ್ಲಿ ಮುಂದಿನ ರಾಜಕೀಯ ನಡೆ ಕುರಿತು ಮಹತ್ವದ ಸಭೆ ನಡೆದು, ಆ ಸಭೆಯಲ್ಲಿ ಈಶ್ವರಪ್ಪ ಈ ಘೋಷಣೆ ಮಾಡಿದ್ದಾರೆ.

ಇವತ್ತು ನಾನು ಮಾಡುತ್ತಿರುವುದು ಯಾವುದೇ ಉದ್ವೇಗದ ತೀರ್ಮಾನವಲ್ಲ. ಅಂದು ಒಂದೇ ನಿಮಿಷದಲ್ಲಿ ನಾನು ಚುನಾವಣೆಗೆ ನಿಲ್ಲುವುದಿಲ್ಲವೆಂದು ಪತ್ರ ಬರೆದು ಕೊಟ್ಟಿದ್ದೆ. ಹಿಂದುತ್ವಕ್ಕೆ ಅನ್ಯಾಯ ಆಗಬಾರದು, ಒಂದೇ ಕುಟುಂಬದ ಕೈಯಲ್ಲಿ ಪಕ್ಷ ಇರಬಾರದು ಮತ್ತು ನೊಂದ ಸಾವಿರಾರು ಕಾರ್ಯಕರ್ತರ ದನಿಯಾಗಿ ಈಗ ನಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಅವರು ತಮ್ಮ ಆಕ್ರೋಶದ ಮಾತುಗಳನ್ನಾಡಿದರು.

ಇದನ್ನೂ ಓದಿ: ನಳಿನ್ ಕಟೀಲ್ ಔಟ್ ಆದ ಬೆನ್ನಲ್ಲೇ ಅರುಣ್ ಕುಮಾರ್ ಪುತ್ತಿಲ ತರಾತುರಿಯಲ್ಲಿ ಬಿಜೆಪಿ ಸೇರಿದ್ದೇಕೆ? ಮಧ್ಯೆ ನಡೆದ ಆ ದೊಡ್ಡ ಡೀಲ್ ಏನು ?!

ಈ ಮೂಲಕ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಹಳೆಯ ಹುಲಿ, ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಸ್ಪರ್ಧಿಸುತ್ತಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಈಶ್ವರಪ್ಪ ಮನಸ್ಸು ಮಾಡಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಅತ್ತ ಯಡಿಯೂರಪ್ಪ ಪುತ್ರ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ಸಿನಿಂದ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜಕುಮಾರ್ ಕಣಕ್ಕಿಳಿಯಲಿದ್ದಾರೆ. ಅವರ ಮಧ್ಯೆ ಕೆ ಎಸ್ ಈಶ್ವರಪ್ಪ ಸ್ಪರ್ಧೆ ಕುತೂಹಲ ಮೂಡಿಸುತ್ತಿದೆ.

ಇದನ್ನೂ ಓದಿ: ಬಿಜೆಪಿ ಟಿಕೆಟ್ ಸಿಗುತ್ತಿದ್ದಂತೆ ಯದುವೀರ್ ಒಡೆಯರ್ ಗೆ ಬಿಗ್ ಶಾಕ್ ಕೊಟ್ಟ ರಾಜ್ಯ ಸರ್ಕಾರ !!

You may also like

Leave a Comment