Home » Puttur: ಬಿಜೆಪಿ ಅಭ್ಯರ್ಥಿಯನ್ನು ಅಧಿಕ ಬಹುಮತದಿಂದ ಗೆಲ್ಲಿಸುವ ಸಂಕಲ್ಪ- ಫೇಸ್‌ಬುಲ್‌ ಲೈವ್‌ ಬಂದು ಸಕ್ರಿಯ ರಾಜಕಾರಣದತ್ತ ಇನ್ನು ಮುಂದೆ ಎಂದು ಹೇಳಿದ ರಾಜಾರಾಮ್‌ ಭಟ್‌

Puttur: ಬಿಜೆಪಿ ಅಭ್ಯರ್ಥಿಯನ್ನು ಅಧಿಕ ಬಹುಮತದಿಂದ ಗೆಲ್ಲಿಸುವ ಸಂಕಲ್ಪ- ಫೇಸ್‌ಬುಲ್‌ ಲೈವ್‌ ಬಂದು ಸಕ್ರಿಯ ರಾಜಕಾರಣದತ್ತ ಇನ್ನು ಮುಂದೆ ಎಂದು ಹೇಳಿದ ರಾಜಾರಾಮ್‌ ಭಟ್‌

2 comments
Puttur

Puttur: ಕೆಲ ದಿನಗಳ ಹಿಂದೆ ರಾಜಕೀಯದಿಂದ, ಸಂಘಟನೆಯಿಂದ ದೂರ ಉಳಿಯುವುದಾಗಿ ಹೇಳಿದ್ದ ರಾಜಾರಾಮ್‌ ಭಟ್‌ ಅವರು ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ರಾಜಕೀಯದಲ್ಲಿ ತಾವು ಸಕ್ರಿಯವಾಗಿ ಕೆಲಸ ಮಾಡುವುದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Saudi Arabia: ಸೌದಿ ಸರ್ಕಾರದಿಂದ ಮಹತ್ವದ ನಿರ್ಧಾರ; ರಂಜಾನ್‌ ತಿಂಗಳಲ್ಲಿ ಉಮ್ರಾ ಕುರಿತು ಬಹುದೊಡ್ಡ ನಿರ್ಧಾರ ಮಾಡಿದ ಸೌದಿ ಸರಕಾರ

ಫೇಸ್ಬುಕ್‌ ಮೂಲಕ ಲೈವ ಬಂದು ಮಾತನಾಡಿದ ರಾಜಾರಾಮ್‌ ಭಟ್‌ ಅವರು, ” ಕೆಲ ದಿನಗಳ ಹಿಂದಷ್ಟೇ ರಾಜಕೀಯ ನಿವೃತ್ತಿಯನ್ನು ಘೋಷಣೆ ಮಾಡಿದ್ದೆ. ಈ ವಿಚಾರವಾಗಿ ಹಲವು ಮಂದಿ ಕಾರ್ಯಕರ್ತರು, ಸ್ನೇಹಿತರು, ಅಣ್ಣ-ತಮ್ಮಂದಿರು ರಾಜಾರಾಮ್‌ ನನ್ನ ಬಳಿ ನೀವು ನಮ್ಮನ್ನು ಬಿಟ್ಟು ಹೋಗಬಾರದು ಎಂದು ಹೇಳಿದ್ದರಿಂದ ನನಗೆ ಅವರ ಮನಸ್ಸಿಗೆ ಕಷ್ಟ ಆಗುವ ರೀತಿಯಲ್ಲಿ ನಡೆದುಕೊಳ್ಳಲು ಇಷ್ಟವಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: CM Siddaramaiah: ಡಿ.ವಿ.ಎಸ್ ಕಾಂಗ್ರೆಸ್ ಸೇರ್ಪಡೆಗೆ `ನೋ` ಎಂದ ಸಿದ್ದರಾಮಯ್ಯ

ಪುತ್ತಿಲ ಪರಿವಾರದೊಂದಿಗೆ ಅಭಿಪ್ರಾಯ ವ್ಯತ್ಯಾಸವಾಗಿ ನಾನು ರಾಜಕೀಯ ನಿವೃತ್ತಿ ಘೋಷಣೆ ಮಾಡಿಲ್ಲ. ನನ್ನ ತೀರ್ಮಾನ ನಿಮ್ಮ ಮನಸ್ಸಿಗೆ ನೋವು ತಂದಿದ್ದರೆ ಕ್ಷಮೆ ಇರಲಿ. ಪುತ್ತಿಲ ಪರಿವಾರ ಮಾತೃ ಪಕ್ಷವಾದ ಬಿಜೆಪಿ ಜೊತೆ ಸಂಪೂರ್ಣವಾಗಿ ಕೈ ಜೋಡಿಸಿ ಮುಂದಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎಲ್ಲರೂ ಒಂದಾಗಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯನ್ನು ಅಧಿಕ ಬಹುಮತದಿಂದ ಗೆಲ್ಲಿಸುವಂತಹ ಸಂಕಲ್ಪದತ್ತ ಹೊರಟಿದ್ದೇವೆ. ಈ ಕಾರ್ಯದಲ್ಲಿ ನಾನೂ ಒಬ್ಬ. ನಾನು ನಿಮ್ಮೊಂದಿಗೆ ಇರುತ್ತೇನೆ” ಎಂದು ಹೇಳಿದ್ದಾರೆ.

You may also like

Leave a Comment