Home » Bengaluru: ಪಕ್ಕದ ಮನೆಯ ದಂಪತಿಯ ಸರಸ ಸಲ್ಲಾಪದ ಶಬ್ದದಿಂದ ಕಿರಿಕಿರಿ; ದೂರು ದಾಖಲು

Bengaluru: ಪಕ್ಕದ ಮನೆಯ ದಂಪತಿಯ ಸರಸ ಸಲ್ಲಾಪದ ಶಬ್ದದಿಂದ ಕಿರಿಕಿರಿ; ದೂರು ದಾಖಲು

1 comment
Bengaluru

Bengaluru: ಪಕ್ಕದ ಮನೆ ದಂಪತಿಯ ಸರಸ ಸಲ್ಲಾಪದಿಂದ ನಮಗೆ ಕಿರಿಕಿರಿಯಾಗುತ್ತದೆ ಎಂದು ಮಹಿಳೆಯೋರ್ವರು ದೂರು ದಾಖಲಿಸಿರುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಗಿರಿನಗರ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Namma Metro: ತನ್ನ ಖಾಸಗಿ ಅಂಗ ಸ್ಪರ್ಶಿಸಿಕೊಂಡು ಮಹಿಳೆ ಮುಂದೆ ಅಸಭ್ಯ ವರ್ತನೆ ಮಾಡಿದ ಬೆಂಗಳೂರು ಮೆಟ್ರೋ ಸಿಬ್ಬಂದಿ

44 ವರ್ಷದ ಮಹಿಳೆಯೊಬ್ಬರು ಆವಲಹಳ್ಳಿ, ಬಿಡಿಎ ಲೇಔಟ್‌ನಲ್ಲಿ ವಾಸವಾಗಿದ್ದು, ಈಕೆಯ ಮನೆಯ ಬಾಗಿಲಿಗೆ ಪಕ್ಕದ ಮನೆಯ ಬೆಡ್‌ರೂಂ ಇರುವ ಕಾರಣ ಪಕ್ಕದ ಮನೆಯಲ್ಲಿ ವಾಸವಾಗಿರುವ ದಂಪತಿ ಬೆಡ್‌ರೂಂ ಕಿಟಕಿ ತೆರೆದು ಸರಸ ಸಲ್ಲಾಪದಲ್ಲಿ ತೊಡಗುವುದು, ಹಾಗೂ ವಿಕೃತ ಮತ್ತು ಅಸಹ್ಯ ಮನಸ್ಥಿತಿಯಿಂದ ನಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Terrible Accident: ಪ್ರವಾಸಿ ವಾಹನ ಕಂದಕ್ಕೆ ಬಿದ್ದು ಮಗು ಸಹಿತ 3 ಮಂದಿ ದಾರುಣ ಸಾವು; ಹಲವು ಮಂದಿಗೆ ಗಂಭೀರ ಗಾಯ

ಈ ಕುರಿತು ಪಕ್ಕದ ಮನೆಯರಲ್ಲಿ ದೂರು ನೀಡಿದ ಮಹಿಳೆ, ದಯವಿಟ್ಟು ಬೆಡ್‌ರೂಂ ಕಿಟಕಿ ಹಾಕಿ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಪಕ್ಕದ ಮನೆಯ ವ್ಯಕ್ತಿ ಅವಾಚ್ಯ ಶಬ್ದಗಳಿಂದ ಮಹಿಳೆ ಹಾಗೂ ಕುಟುಂಬದವರಿಗೆ ನಿಂದನೆ ಮಾಡಿದ್ದಾನೆ. ಅಷ್ಟು ಮಾತ್ರವಲ್ಲದೇ ಮಹಿಳೆಯ ಮೇಲೆ ಅತ್ಯಾಚಾರ, ಕೊಲೆ ಮಾಡುವುದಾಗಿ ಬೆದರಿಕೆ ಕೂಡಾ ಹಾಕಿದ್ದಾನೆ. ಅಲ್ಲದೆ ಹಲ್ಲೆಗೆ ಕೂಡಾ ಯತ್ನ ಮಾಡಿದ್ದಾನೆ.

ಇಷ್ಟು ಸಾಲದು ಎಂದು ಕೆಲವು ಯುವಕರನ್ನು ಕರೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಹಿಳೆ ಮತ್ತು ಮಹಿಳೆಯ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ. ಇವರಿಂದ ರಕ್ಷಣೆ ಕೊಡಿ ಹಾಗೂ ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಹಿಳೆ ದೂರು ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಹಲವು ಐಪಿಸಿ ಸೆಕ್ಷನ್‌ ಅಡಿಯಲ್ಲಿ ಕೇಸು ದಾಖಲಾಗಿದೆ.

You may also like

Leave a Comment