Home » Hanuman Chalisa: ಹನುಮಾನ್‌ ಚಾಲೀಸ ಹಾಡು ಹಾಕಿದ ಪ್ರಕರಣ; ಹಲ್ಲೆ ಮಾಡಿದ ಅಪ್ರಾಪ್ತ ಸೇರಿ 6 ಮಂದಿ ಬಂಧನ

Hanuman Chalisa: ಹನುಮಾನ್‌ ಚಾಲೀಸ ಹಾಡು ಹಾಕಿದ ಪ್ರಕರಣ; ಹಲ್ಲೆ ಮಾಡಿದ ಅಪ್ರಾಪ್ತ ಸೇರಿ 6 ಮಂದಿ ಬಂಧನ

1 comment
Hanuman Chalisa

Hanuman Chalisa: ಬೆಂಗಳೂರಿನ ನಗರ್ತಪೇಟೆಯ ಅಂಗಡಿಯಲ್ಲಿ ಹನುಮಾನ್‌ ಚಾಲೀಸ ಹಾಕಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಅಪ್ರಾಪ್ತ ಸೇರಿದಂತೆ ಆರು ಮಂದಿಯನ್ನು ಹಲಸೂರು ಗೇಟ್‌ ಠಾಣೆಯ ಪೊಲೀಸರು ಬಂಧನ ಮಾಡಿದ್ದಾರೆ.

ಇದನ್ನೂ ಓದಿ: Bengaluru: ಬೆಂಕಿ ಹಚ್ಚಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ

ಕಬ್ಬನ್‌ ಪೇಟೆ ನಿವಾಸಿ ಸುಲೇಮಾನ್‌, ಶಹನವಾಜ್‌, ರೋಹಿತ್‌, ಡ್ಯಾನಿಷ್‌, ತರುಣ್‌ ಅಲಿಯಾಸ್‌ ದಡಿಯಾ ಹಾಗೂ ಅಪ್ರಾಪ್ತ ಬಾಲಕನನ್ನು ಬಂಧನ ಮಾಡಲಾಗಿದೆ.

ಇದನ್ನೂ ಓದಿ: Karnataka High Court: ಅಪಾಯಕಾರಿ ಶ್ವಾನ ತಳಿಗಳನ್ನು ನಿಷೇದಿಸಿದ್ದ ಕೇಂದ್ರದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ

ಬಂಧಿತ ಐವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಪೊಲೀಸರು ಸದ್ಯ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ. ಅಪ್ರಾಪ್ತನನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದ ಪ್ರಮುಖ ಆರೋಪಿ ಸುಲೇಮಾನ್‌ ಬಾಡಿಗೆ ವಾಹನದ ಚಾಲಕ. ಈತನ ಮೇಲೆ 2018, 2023 ರಲ್ಲಿ ಅಪಹರಣ, ಸುಲಿಗೆ ಪ್ರಕರಣಗಳು ಇದ್ದು, ಬಂಧನಕ್ಕೂ ಒಳಗಾಗಿದ್ದ. ಷಹನವಾಜ್‌ ಕೆಲಸ ಇಲ್ಲದೇ ಅಲ್ಲಿ ಇಲ್ಲಿ ಅಲೆದಾಡುತ್ತಿದ್ದ. ರೋಹಿತ್‌ ಈತ ಮೆಡಿಕಲ್‌ ಸ್ಟೋರ್‌ಗೆ ಔಷಧ ಪೂರೈಸುವ ಕೆಲಸ ಮಾಡುತ್ತಿದ್ದ. ತರುಣ್‌ ಖಾಸಗಿ ಆಸ್ಪತ್ರೆಯಲ್ಲಿ ವಾರ್ಡ್‌ ಬಾಯ್‌ ಆಗಿದ್ದ. ಡ್ಯಾನಿಷ್‌ ಅಲ್ಲಿ ಇಲ್ಲಿ ಸಿಕ್ಕಿದ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದ. ಸುಲೇಮಾನ್‌ ಆಂಡ್‌ ಗ್ಯಾಂಗ್‌ ಈ ತಂಡ ಹೋಟೆಲ್‌ ಮಾಲೀಕ ಸತೀಶ್‌ ಎಂಬುವವರ ಮೇಲೆ ಹಲ್ಲೆ ಮಾಡಿದ ಆರೋಪ ಕೂಡಾ ಇದೆ ಎಂದು ವರದಿಯಾಗಿದೆ. ಉಚಿತ ಆಹಾರ ಕೊಡಬೇಕು ಎಂಬ ಸತೀಶ್‌ ಅವರಿಗೆ ಧಮ್ಕಿ ಹಾಕಿರುವ ಆರೋಪ ಕೇಳಿ ಬಂದಿದೆ.

You may also like

Leave a Comment