Home » Physical Abuse: ಒಂಟಿಯಾಗಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಹಿಂಬಾಲಿಸಿ ಬಂದು ತಬ್ಬಿಕೊಂಡ ಕಾಮುಕ

Physical Abuse: ಒಂಟಿಯಾಗಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಹಿಂಬಾಲಿಸಿ ಬಂದು ತಬ್ಬಿಕೊಂಡ ಕಾಮುಕ

2 comments
Physical Abuse

Physical Abuse: ನಿನ್ನೆಯಷ್ಟೇ ಶಾಲೆಗೆಂದು ಹೋಗುವ ವಿದ್ಯಾರ್ಥಿನಿಯ ಹಿಂದೆ ಬಂದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆಯೊಂದು ನಡೆದಿತ್ತು. ವಿಕೃತ ಮನಸ್ಥಿತಿಯ ವ್ಯಕ್ತಿಗಳು ಹೆಚ್ಚಾಗುತ್ತಿದ್ದಾರೆ. ಯಾರ ಭಯವೂ ಇಲ್ಲದೇ ಅಸಭ್ಯವಾಗಿ ಸಾರ್ವಜನಿಕವಾಗಿ ಅಸಹ್ಯ ರೀತಿಯಲ್ಲಿ ವರ್ತನೆ ಮಾಡುತ್ತಿರುವ ಘಟನೆಗಳು ಹೆಚ್ಚು ಹೆಚ್ಚಾಗಿ ನಡೆಯುತ್ತಿದೆ.

ಇದನ್ನೂ ಓದಿ: Urfi Javed: ತನ್ನ ಸ್ಕರ್ಟ್‌ನೊಳಗೆ ಇಡೀ ಬ್ರಹ್ಮಾಂಡವನ್ನೇ ತೋರಿಸಿದ ಉರ್ಫಿ

ತನ್ನ ಪಾಡಿಗೆ ತಾನು ಹೋಗುತ್ತಿದ್ದ ಯುವತಿಯ ಮೇಲೆ ಕಾಮುಕನೋರ್ವ ಹಿಂಬಾಲಿಸಿಕೊಂಡು ಬಂದಿದ್ದು, ನಂತರ ಆಕೆಯನ್ನು ಬೈಕ್‌ನಿಂದ ಇಳಿದು ಓಡಿ ಬಂದು, ಹಿಂಭಾಗದಿಂದ ತಬ್ಬಿ ಅಸಭ್ಯವಾಗಿ ವರ್ತಿಸಿರುವ ಘಟನೆಯೊಂದು ನಡೆದಿದೆ. ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಇದನ್ನೂ ಓದಿ: Parliament Election: ಲೋಕಸಭಾ ಚುನಾವಣೆಯ ಮೊದಲ ಹಂತದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ

ಶೃತಿ ಸಿಂಗ್‌ ಎಂಬ ಯುವತಿ ಸೋಶಿಯಲ್‌ ಮೀಡಿಯಾದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಒಬ್ಬಂಟಿಯಾಗಿ ತನ್ನ ಮನೆ ಕಡೆ ನಡೆದುಕೊಂಡು ಹೋಗುತ್ತಿದ್ದಾಗ ಕಾಮುಕ ಹಿಂಬಾಲಿಸಿಕೊಂಡು ಬಂದು ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಆತಂಕಗೊಂಡ ಈಕೆ ಕೂಡಲೇ ಕಿರುಚಿದ್ದು, ಜನರನ್ನು ಸೇರಿದ್ದಾಳೆ. ಕೂಡಲೇ ಸ್ಥಳೀಯರ ಸಹಕಾರದಿಂದ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾಳೆ. ಈ ವೀಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಈಕೆ ಪೋಸ್ಟ್‌ ಮಾಡಿದ್ದಾಳೆ. ಹಾಗೂ ತನ್ನ ನೋವನ್ನು ಬರೆದಿದ್ದಾರೆ.

You may also like

Leave a Comment