Home » DV Sadanada Gowda: ನಾನು ಬಿಜೆಪಿ ಬಿಡುವುದಿಲ್ಲ, ಕಾಂಗ್ರೆಸ್‌ ಸೇರುವುದಿಲ್ಲ : ಮಾಜಿ ಸಚಿವ ಡಿ. ವಿ. ಸದಾನಂದ

DV Sadanada Gowda: ನಾನು ಬಿಜೆಪಿ ಬಿಡುವುದಿಲ್ಲ, ಕಾಂಗ್ರೆಸ್‌ ಸೇರುವುದಿಲ್ಲ : ಮಾಜಿ ಸಚಿವ ಡಿ. ವಿ. ಸದಾನಂದ

2 comments
DV Sadanada Gowda

ಇಷ್ಟು ದಿನಗಳ ಕಾಲ ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ಕೋಲಾಹಲ ಸೃಷ್ಟಿಸಿದ್ದ ಬಿಜೆಪಿಯ ಹಿರಿಯ ನಾಯಕ ಸದಾನಂದ ಗೌಡರು ಇದೀಗ ತಮ್ಮ ಮುಂದಿನ ನಡೆಯ ಬಗ್ಗೆ ಬೆಂಗಳೂರಿನ ಸಂಜಯನಗರದ ಖಾಸಗಿ ನಿವಾಸದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ “ನಾನು ಬಿಜೆಪಿ ತೊರೆಯಲ್ಲಾ ಹಾಗೆಯೇ ಕಾಂಗ್ರೆಸ್ ಸೇರುವುದು ಇಲ್ಲ” ಎಂದು ಹೇಳುವ ಮೂಲಕ ಎಲ್ಲಾ ಕೋಲಾಹಲಗಳಿಗೂ ತೆರೆ ಎಳೆದಿದ್ದಾರೆ.

ಇದನ್ನೂ ಓದಿ: NFHS Survey: ಭಾರತೀಯರು ಇಷ್ಟ ಪಡುವ ನಾನ್‌ವೆಜ್‌ನಲ್ಲಿ ಮೀನು ತಿನ್ನುವವರ ಸಂಖ್ಯೆ ಹೆಚ್ಚಳ: ಎನ್‌ಎಫ್‌ಎಚ್‌ಎಸ್‌ ಸಮೀಕ್ಷೆ ಬಹಿರಂಗ

ಡಿವಿ ಸದಾನಂದ ಗೌಡರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲು ರಾಜ್ಯದಲ್ಲಿ ಬಿಜೆಪಿ ಜನರು ಒಪ್ಪಿಕೊಳ್ಳುವ ಪಕ್ಷ ಆಗಬೇಕು, ಮೋದಿ ಹೇಳಿದಂತೆ ಕರ್ನಾಟಕದಲ್ಲಿ ಬಿಜೆಪಿ ಇರಬೇಕು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Delhi: ದರೆಗುರುಳಿದ ಎರಡು ಅಂತಸ್ತಿನ ಕಟ್ಟಡ : ಇಬ್ಬರ ಸಾವು

ಮೋದಿ ಅವರು ಹೇಳಿರುವಂತೆ ಕುಟುಂಬ ರಾಜಕಾರಣ ರಹಿತ, ಜಾತಿವಾದ ಹಾಗೆಯೇ ಭ್ರಷ್ಟಾಚಾರ ಮುಕ್ತವಾದ ಪಕ್ಷ ರಾಜ್ಯದಲ್ಲಿ ಆಡಳಿತ ನಡೆಸಬೇಕು. ರಾಜ್ಯದಲ್ಲಿ ಬಿಜೆಪಿ ಶುದ್ಧೀಕರಣ ಮಾಡಲು ನನ್ನ ಹೋರಾಟ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣೆಯ ಹಿನ್ನೆಲೆ ಜೆಡಿಎಸ್ ಮತ್ತು ಬಿಜೆಪಿ ಒಂದಾಗಿರುವುದನ್ನು ಸ್ವಾಗತಿಸಿದ ಸದಾನಂದ ಗೌಡರು, ಪಕ್ಷಕ್ಕಾಗಿ ಅವಿರತವಾಗಿ ದುಡಿದವರನ್ನು ಕಡೆಗಣನೆ ಮಾಡಬಾರದು ಎಂದು ತಿಳಿಸಿದ್ದಾರೆ

You may also like

Leave a Comment