Bengaluru: ಇತ್ತೀಚೆಗೆ ಆನ್‌ಲೈನ್ ಮೂಲಕ ತಮಗಿಷ್ಟದ ತಿಂಡಿ, ಆಹಾರವನ್ನು ಆರ್ಡರ್ ಮಾಡಿ, ತಿನ್ನುವುದು ಕಾಮನ್. ಹಾಗೆನೇ ಇಲ್ಲೊಬ್ಬ ಮಹಿಳೆಗೆ ಕೂಡಾ ದೋಸೆ ತಿನ್ನುವ ಬಹಳ ಆಸೆ ಉಂಟಾಗಿದೆ. ಆದರೆ ಈ ಆಸೆಯೇ ಆಕೆಗೆ ಮಾರಕವಾಗಿ ಪರಿಣಮಿಸಿದೆ. ಹೌದು, 30 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಸ್ವಿಗ್ಗಿಯಲ್ಲಿ ದೋಸೆ ಆರ್ಡರ್ ಮಾಡಿದ್ದು, ಆದರೆ ಆ ಡೆಲಿವರಿ ಬಾಯ್ ಆಕೆಗೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ನಡೆದಿದೆ.
ಇದನ್ನೂ ಓದಿ: Vijayapura: ಬ್ಲಡ್ ಗ್ರೂಪ್ ಬದಲಾಗಿ ಬಾಣಂತಿ ಸಾವು : ಅವಳಿ ಮಕ್ಕಳು ಅನಾಥ
ಇದೀಗ ಈ ಕುರಿತು ದೂರು ದಾಖಲಾಗಿದ್ದು, ಸಿಸಿಟಿವಿ ದೃಶ್ಯಗಳ ಮೂಲಕ ಅಪರಾಧಿಯನ್ನು ಗುರುತಿಸುವ ಪ್ರಯತ್ನ ನಡೆಯುತ್ತಿದೆ.
ಈ ಘಟನೆ ನಡೆದಿರುವುದು ಮಾ.17ರಂದು, ಬೆಂಗಳೂರಿನ ಎಇಸಿಎಸ್ ಲೇಔಟ್‌ನಲ್ಲಿ. ಮಹಿಳೆಗೆ ಡೆಲಿವರಿ ಬಾಯ್ ಕಿರುಕುಳ ನೀಡಿದ್ದು, ದೈಹಿಕ ಘರ್ಷಣೆಗೆ ಕಾರಣವಾಗಿದೆ. ಟೆಕ್ಕಿ ಮಹಿಳೆ ಸ್ವಿಗ್ಗಿಯಲ್ಲಿ ಸಂಜೆ 6.45ಕ್ಕೆ ಹತ್ತಿರದ ರೆಸ್ಟೋರೆಂಟ್‌ನಿಂದ ದೋಸೆ ಆರ್ಡರ್ ಮಾಡಿದ್ದಾಳೆ. ಅದನ್ನು ಡೆಲಿವರಿ ಮಾಡಿದ 20 ವರ್ಷದ ಹುಡುಗನ ಮೇಲೆ ಈ ಆರೋಪ ಮಾಡಿದ್ದಾರೆ.
ಸ್ವಿಗ್ಗಿ ಹುಡುಗ ಮೊದಲಿಗೆ ಡೆಲಿವರಿ ಕೊಟ್ಟು ಹೋಗಿದ್ದು, ಅನಂತರ ವಾಪಸ್ ಬಂದಿದ್ದು, ಬಾಗಿಲು ತಟ್ಟಿ,” ಮೇಡಮ್ ನಾನು ನಿಮ್ಮ ವಾಶ್‌ರೂಂ ಬಳಸಬಹುದೇ? ತುಂಬಾ ಅರ್ಜೆಂಟ್” ಎಂದು ಹೇಳಿದ್ದಾನೆ.
ನಾನು ಅವನನ್ನು ವಾಶ್‌ರೂಂ ಗೆ ಕಳುಹಿಸಿದೆ. ಅವನು ಹೊರಗಡೆ ಬಂದಿದ್ದು, ನಾನು ಅವನನ್ನು ಹೊರಗೆ ಹೋಗಲು ಹೇಳಿದೆ. ಆದರೆ ಅವನು ನನಗೆ ಬಾಯಾರಿಕೆ ಆಗಿದೆ ನೀರು ಕೊಡ್ತೀರಾ? ಎಂದು ಕೇಳಿದ ನಾನು ಒಪ್ಪಿದ್ದು, ಬಾಗಿಲ ಬಳಿ ಕಾಯುವಂತೆ ಹೇಳಿದೆ. ಆದರೆ ಆತ ನನ್ನನ್ನು ಅಡುಗೆಮನೆವರೆಗೆ ಹಿಂಬಾಲಿಸಿದ್ದು, ನನಗೆ ಅರ್ಥವಾಗದ ಭಾಷೆಯಲ್ಲಿ ಏನೋ ಗೊಣಗಿದ್ದು, ನನ್ನ ಕೈಯನ್ನು ಹಿಡಿದ. ನಾನು ಭಯದಿಂದ ಅಡುಗೆ ಮನೆಗೆ ಏಕೆ ಬಂದೆ ಎಂದು ಕೇಳುತ್ತಾ, ಜೋರಾಗಿ ಕೂಗಲು ಪ್ರಾರಂಭಿಸಿದೆ. ಅವನು ಇನ್ನೂ ನನ್ನ ಕೈ ಹಿಡಿದಿದ್ದರಿಂದ ನಾನು ಬಾಣಲೆ ತೆಗೆದು ಅವನ ಬೆನ್ನಿಗೆ ಹೊಡೆದೆ ʼ ಎಂದು ಮಹಿಳೆ ಹೇಳಿದ್ದಾಳೆ.
ಅವನು ಕೂಡಲೇ ಮನೆಯಿಂದ ಓಡಿದ್ದು, ನಾನು ಅವನ ಹಿಂದೆ ಲಿಫ್ಟ್‌ವರೆಗೆ ಓಡಿದೆ. ಆದರೆ ಅವನು ಮೆಟ್ಟಿಲಿನಿಂದ ಇಳಿದು ತಪ್ಪಿಸಿಕೊಂಡು ಹೋಗಿದ್ದಾನೆ ಎಂದು ಮಹಿಳೆ ಹೇಳಿದ್ದಾರೆ.
