Home » Vijayapura: ಬ್ಲಡ್ ಗ್ರೂಪ್ ಬದಲಾಗಿ ಬಾಣಂತಿ ಸಾವು : ಅವಳಿ ಮಕ್ಕಳು ಅನಾಥ

Vijayapura: ಬ್ಲಡ್ ಗ್ರೂಪ್ ಬದಲಾಗಿ ಬಾಣಂತಿ ಸಾವು : ಅವಳಿ ಮಕ್ಕಳು ಅನಾಥ

1 comment
Vijayapura

ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದ ಮಹಿಳೆಗೆ ಬೇರೆ ಬ್ಲಡ್ ಗ್ರೂಪಿನ ರಕ್ತ ಹಾಕಿದ್ದರ ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: Bengaluru: ಬೆಂಗಳೂರು ನೀರಿನ ಬಿಕ್ಕಟ್ಟು : ಹೋಳಿ ರೈನ್ ಡಾನ್ಸ್ , ಪೂಲ್ ಪಾರ್ಟಿಗಳಿಲ್ಲ ಅವಕಾಶ : ಹೊಸ ನಿಯಮಾವಳಿ ಜಾರಿ ಮಾಡಿದ ಬಿಡಬ್ಲ್ಯುಎಸ್ಎಸ್ಬಿ

ವಿಜಯಪುರದ ಬಾಬಲೇಶ್ವರ ಬಳಿಯ ದಾದಮಟ್ಟಿ ಗ್ರಾಮದ ಶಾರದಾ ದೊಡ್ಡಮಣಿ ಎಂಬ ಬಾಣಂತಿಯನ್ನು ಫೆಬ್ರವರಿ 23ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆ ಒಂದು ಗಂಡು ಮತ್ತು ಒಂದು ಹೆಣ್ಣು  ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಮಕ್ಕಳಿಗೆ ಜನ್ಮ ನೀಡಿದ ನಂತರ ಆಕೆಗೆ ತೀವ್ರ ರಕ್ತಸ್ರಾವವಾಗಿದ್ದರಿಂದ ಆಕೆಯನ್ನು ಬಿ . ಎಲ್ . ಡಿ . ಇ . ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಆದರೆ ಅಷ್ಟರಲ್ಲಿ ಆಕೆ ಮೃತಪಟ್ಟಿದ್ದಳು.

ಇದನ್ನೂ ಓದಿ: Home Tips: ನಿಮ್ಮ ಮನೆಯ ಕೊಳಕು ಟೈಲ್‌ಗಳನ್ನು ಫಳಫಳ ಬೆಳಗಿಸಲು ಈ ಸುಲಭ ವಿಧಾನಗಳನ್ನು ಅಳವಡಿಸಿಕೊಳ್ಳಿ

ಮಹಿಳೆಯ ಬ್ಲಡ್ ಗ್ರೂಪ್ ಎ + ಆಗಿದ್ದು , ಆದರೆ ಜಿಲ್ಲಾ ಆಸ್ಪತ್ರೆಯಲ್ಲಿ ಆಕೆಗೆ ಬಿ + ರಕ್ತವನ್ನು ನೀಡಲಾಯಿತು. ಆಕೆಯನ್ನು ಉಳಿಸುವ ಪ್ರಯತ್ನಗಳು ಫಲಿಸದೆ‌ ಕಾರಣ ಆಕೆ ಮಂಗಳವಾರ ನಿಧನರಾದರು. ಜಿಲ್ಲಾ ಆಸ್ಪತ್ರೆಯಲ್ಲಿ ಆಕೆಯನ್ನು ನೋಡಿಕೊಳ್ಳುವ ವೈದ್ಯರು ಮತ್ತು ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಿಳೆಯ ಕುಟುಂಬದ ದೂರಿನ ಮೇರೆಗೆ ಜಿಲ್ಲಾ ಆಸ್ಪತ್ರೆಯ ನಿರ್ದೇಶಕ ಶಿವಾನಂದ ಮಸ್ತಿಹೊಳಿ ಅವರು ಆಸ್ಪತ್ರೆಯ ನಾಲ್ವರು ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದು , ವಿವರವಾದ ತನಿಖೆ ನಡೆಸಲಾಗುತ್ತಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ .

You may also like

Leave a Comment