Home » Janardhan Reddy: ಜನಾರ್ಧನ್ ರೆಡ್ಡಿ ಬಿಜೆಪಿ ಸೇರ್ಪಡೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್, ಮುಹೂರ್ತ ಫಿಕ್ಸ್!!

Janardhan Reddy: ಜನಾರ್ಧನ್ ರೆಡ್ಡಿ ಬಿಜೆಪಿ ಸೇರ್ಪಡೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್, ಮುಹೂರ್ತ ಫಿಕ್ಸ್!!

1 comment
Janardhan Reddy

Janardhan Reddy: ಲೋಕಸಭಾ ಚುನಾವಣೆ(Parliament Election) ಬೆನ್ನಲ್ಲೇ ಬಿಜೆಪಿ(BJP) ತೊರೆದ ನಾಯಕರು ಘರ್ ವಾಪ್ಸಿ ಆಗುತ್ತಿದ್ದಾರೆ. ಇದೀಗ ಗಣಿ ದಣಿ, ಬಳ್ಳಾರಿಯ ಜನಾರ್ದನ್ ರೆಡ್ಡಿ(Janardhan Reddy)ಯವರು ಬಿಜೆಪಿ ಸೇರಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, ಮುಹೂರ್ತ ಕೂಡ ಫಿಕ್ಸ್ ಆಗಿದೆ.

ಹೌದು, ರಾಜ್ಯ ರಾಜಕೀಯದಲ್ಲಿ ನಡೆದ ಕ್ಷಿಪ್ರ ಬೆಳವಣಿಗೆಯೊಂದರಲ್ಲಿ ಕೆಆರ್​ಪಿಪಿ(KRPP) ಸಂಸ್ಥಾಪಕ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಮತ್ತೆ ಬಿಜೆಪಿ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಆಗಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚನಲ ಮೂಡಿಸಿದೆ. ಪಕ್ಷ ಸೇರ್ಪಡೆಗೆ ಹೈಕಮಾಂಡ್‌ ಗ್ರೀನ್‌ ಸಿಗ್ನಲ್‌ ನೀಡಿದ ಬೆನ್ನಲ್ಲೇ ಜನಾರ್ದನ ರೆಡ್ಡಿ ಯಾವುದೇ ಷರತ್ತುಗಳು ಇಲ್ಲದೇ ಸೋಮವಾರ ಬಿಜೆಪಿ ಸೇರ್ಪಡೆಯಾಗಲು ಸಜ್ಜಾಗಿದ್ದಾರೆಂದು ತಿಳಿದುಬಂದಿದೆ.

Actress Jyothi Rai: ಬೆಳ್ಳುಳ್ಳಿ ತಿಂದರೆ ಇಷ್ಟೆಲ್ಲ ಪ್ರಯೋಜನ ಇದೆ ಎಂದ ನಟಿ ಜ್ಯೋತಿ ರೈ!

ಅಂದಹಾಗೆ ಇತ್ತೀಚೆಗಷ್ಟೇ ರೆಡ್ಡಿಯನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಚರ್ಚಿಸಲು ಹೈಕಮಾಂಡ್, ಶ್ರೀರಾಮುಲು ಅವರನ್ನು ಕರೆಯಿಸಿಕೊಂಡು ಮಾತುಕತೆ ನಡೆಸಿತ್ತು. ಬಳಿಕ ಖುದ್ದು ಅಮಿತ್ ಶಾ(Amith Shah), ಜನಾದರ್ನ ರೆಡ್ಡಿಯನ್ನು ದೆಹಲಿಗೆ ಕರೆಯಿಸಿಕೊಂಡು ಅಂತಿಮ ಸುತ್ತಿನ ಮಾತುಕತೆ ನಡೆಸಿದ್ದರು. ಇದೀಗ ರೆಡ್ಡಿಯನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಮುಹೂರ್ತ ಸಹ ಫಿಕ್ಸ್ ಆಗಿದೆ. ನಾಳೆ(ಮಾರ್ಚ್ 25) ಜನಾರ್ದನ ರೆಡ್ಡಿ ಬಿಜೆಪಿ ಸೇರಲಿದ್ದಾರೆ.

ಇದನ್ನೂ ಓದಿ: ಜೈಲಿನಿಂದಲೇ ಆಡಳಿತ ಶುರು ಮಾಡಿದ ಕೇಜ್ರಿವಾಲ್; ಹೊರಡಿತು ಮೊದಲ ನಿರ್ದೇಶನ

You may also like

Leave a Comment