Home » Kerala Government: ರಾಷ್ಟ್ರಪತಿಗಳ ವಿರುದ್ಧವೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕೇರಳ ಸರ್ಕಾರ !!

Kerala Government: ರಾಷ್ಟ್ರಪತಿಗಳ ವಿರುದ್ಧವೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕೇರಳ ಸರ್ಕಾರ !!

3 comments
Kerala Government

Kerala Government: ಕೇರಳ ವಿಧಾನಸಭೆಯು ಅಂಗೀಕಾರ ನೀಡಿರುವ ನಾಲ್ಕು ಮಸೂದೆಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕುತ್ತಿಲ್ಲ ಎಂದು ದೂರಿ ಕೇರಳ ಸರ್ಕಾರವು(Kerala Government)ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

ಹೌದು, ಕೇರಳ ವಿಧಾನಸಭೆಯಲ್ಲಿ(Vidhanasabhe) ವಿಶ್ವವಿದ್ಯಾಲಯ ಕಾನೂನುಗಳ (ತಿದ್ದುಪಡಿ) (ನಂ. 2) ಮಸೂದೆ –2021, ಕೇರಳ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ – 2022, ವಿಶ್ವವಿದ್ಯಾಲಯ ಕಾನೂನುಗಳ (ತಿದ್ದುಪಡಿ) ಮಸೂದೆ – 2022 ಹಾಗೂ ವಿಶ್ವವಿದ್ಯಾಲಯ ಕಾನೂನುಗಳ (ತಿದ್ದುಪಡಿ) (ನಂ. 3) ಮಸೂದೆ – 2022 ಮಸೂದೆಗಳನ್ನು ಅಂಗೀಕರಿಸಿ ರಾಷ್ಟ್ರಪತಿಗಳ ಸಹಿಗೆ ಕಳುಹಿಸಲಾಗಿತ್ತು. ಆದರೆ ರಾಷ್ಟ್ರಪತಿ ಯಾವುದೇ ಕಾರಣ ಉಲ್ಲೇಖಿಸದೆ ಅಂಕಿತ ಹಾಕದೆ ಇರುವುದನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ. ರಾಷ್ಟ್ರಪತಿ ವಿರುದ್ಧ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದು ಅಸಾಮಾನ್ಯ ನಡೆ ಎಂದು ವಿಶ್ಲೇಷಿಸಲಾಗಿದೆ.

ಇಷ್ಟೇ ಅಲ್ಲದೆ ಇದಲ್ಲದೆ, ರಾಷ್ಟ್ರಪತಿಗಳ(President of India) ಒಪ್ಪಿಗೆ ಬಾಕಿ ಇರುವ 4 ವಿಧೇಯಕ ಸೇರಿ 7 ಮಸೂದೆಗಳನ್ನು ರಾಜ್ಯಪಾಲರು ಅನಿರ್ದಿಷ್ಟ ಅವಧಿಗೆ ಬಾಕಿ ಇರಿಸಿಕೊಂಡಿದ್ದನ್ನು ಕಾನೂನುಬಾಹಿರ ಎಂದು ಪರಿಗಣಿಸುವಂತೆಯೂ ಅರ್ಜಿಯಲ್ಲಿ ಸರ್ಕಾರ ಕೋರಿದೆ. ಕೇಂದ್ರ ಸರ್ಕಾರ, ರಾಷ್ಟ್ರಪತಿಯವರ ಕಾರ್ಯದರ್ಶಿ, ಕೇರಳ ರಾಜ್ಯ‍ಪಾಲ ಆರೀಫ್ ಮೊಹಮ್ಮದ್ ಖಾನ್ ಮತ್ತು ಅವರ ಹೆಚ್ಚುವರಿ ಕಾರ್ಯದರ್ಶಿಯನ್ನು ಪ್ರತಿವಾದಿಗಳು ಎಂದು ಅರ್ಜಿಯಲ್ಲಿ ಹೆಸರಿಸಲಾಗಿದೆ.

ಅಂದಹಾಗೆ ಕಳೆದ ನವೆಂಬರ್ ತಿಂಗಳಲ್ಲಿ ರಾಜ್ಯಪಾಲರು, ಮಸೂದೆಗಳನ್ನು ಆಂಗೀಕರಿಸದೇ ಬಾಕಿಯಿಟ್ಟು, ಸರ್ಕಾರದ ವಿರುದ್ದ ಪದೇಪದೇ ಗದಾಪ್ರಹಾರ ನಡೆಸುತ್ತಿದ್ದಾರೆಂದು ಕೇರಳ ಸರ್ಕಾರ, ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಈಗ, ಅದೇ ರೀತಿ ರಾಷ್ಟ್ರಪತಿಗಳ ವಿರುದ್ದ ಕೇರಳ ಸರ್ಕಾರ ಸುಪ್ರೀಂ ಮೆಟ್ಟಲೇರಿದೆ.

ಇದನ್ನೂ ಓದಿ: ಭಾರತೀಯ ಮಹಿಳೆಯರು ಪುರುಷರಿಗಿಂತ 10 ಪಟ್ಟು ಹೆಚ್ಚು ಮನೆಕೆಲಸ ಮಾಡುತ್ತಾರೆ; ಇಂಟ್ರೆಸ್ಟಿಂಗ್ ಮಾಹಿತಿ ಬಹಿರಂಗ !

You may also like

Leave a Comment