Home » MLA Fullform: ‘ಎಂಎಲ್‌ಎ’ ಫುಲ್ ಫಾರ್ಮ್ ಗೊತ್ತಿಲ್ಲದ ಶಾಸಕರು ಇವರು – ವಿಡಿಯೋ ವೈರಲ್

MLA Fullform: ‘ಎಂಎಲ್‌ಎ’ ಫುಲ್ ಫಾರ್ಮ್ ಗೊತ್ತಿಲ್ಲದ ಶಾಸಕರು ಇವರು – ವಿಡಿಯೋ ವೈರಲ್

1 comment
MLA Fullform

MLA Fullform:  ಸಾಂವಿಧಾನಿಕವಾಗಿ ನಮ್ಮನ್ನು ಪ್ರತಿನಿಧಿಸುವಂತಹ ಅಭ್ಯರ್ಥಿಗಳು ಜನಸೇವಕರಾಗಿ ಕರ್ತವ್ಯ ನಿರ್ವಹಿಸಬೇಕು. ಆದರಿಂದು ಇಡೀ ದೇಶದಲ್ಲಿ ಕೆಲವೇ ಕೆಲವು ಬೆರಳೆಣಿಕೆಯ ಮಂದಿಯನ್ನು ಬಿಟ್ಟರೆ ಉಳಿದೆಲ್ಲರೂ ದುಡ್ಡು ಮಾಡುವುದು ಹೇಗೆ, ನಮ್ಮ ಮಕ್ಕಳನ್ನು, ಸೊಸೆ ಅಳಿಯಂದಿರನ್ನು ರಾಜಕೀಯಕ್ಕೆ ತರುವುದು ಹೇಗೆ ಎಂದು ಚಿಂತಿಸುವವರೇ ಆಗಿದೆ. ಇದು ಹೋಗಲಿ ಬಿಡಿ ಎಲ್ಲರಿಗೂ ಅವರ ಹಣೆಬರಹ ತಿಳಿದಿದೆ. ಆದರೆ ನಮ್ಮ ಪ್ರತಿನಿಧಿಗಳಿಗೆ ತಾವು ಪ್ರತಿನಿಧಿಸುವ ಹುದ್ದೆಯ ಬಗ್ಗೆಯಾದರೂ ತಿಳಿದಿರಬೇಕಲ್ಲವೇ? ಅದೂ ಕೂಡ ಗೊತ್ತಿಲ್ಲ ಎಂದರೆ ಎಂತಹ ನಾಚಿಕೆಗೇಡು ಅಲ್ಲವೇ?

Kerala Government: ರಾಷ್ಟ್ರಪತಿಗಳ ವಿರುದ್ಧವೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕೇರಳ ಸರ್ಕಾರ !!

MLA, MP, MLC ಗಳಿಗೆ ತಮ್ಮ ಹುದ್ದೆಯ ಮೌಲ್ಯ ಏನು, ಅದರ ಅರ್ಥ ಏನು, ತಮ್ಮ ಕಾರ್ಯಗಳೇನು ಎಂದು ತಿಳಿದಿರಬೇಕು. ಹೋಗಲಿ ಕೊನೇ ಪಕ್ಷ ತಮ್ಮ ಹುದ್ದೆಯ ಫುಲ್ ಫಾರ್ಮ್ ಆದರೂ ಗೊತ್ತಿರಬೇಕು. ಆದರೆ ಇಂದು ಅದೂ ಕೂಡ ಗೊತ್ತಿಲ್ಲ. ನಾವು ಈಗ ಹೇಳ ಹೊರಟಿರುವ ವಿಚಾರ ಕೂಡ ಅದುವೆ. ಅಂದ್ರೆ MLA ಫುಲ್ ಫಾರ್ಮ್ ಕೂಡ ಗೊತ್ತಿರದ ಹೆಮ್ಮೆಯ ನಮ್ಮ ಶಾಸಕರುಗಳ ಬಗ್ಗೆ.

IAS Interesting Question: ರಾತ್ರಿ ಹೊತ್ತು ಗಂಡ-ಹೆಂಡತಿ ಇಬ್ಬರೂ ಇಷ್ಟ ಪಡೋ ವಸ್ತು ಯಾವುದು? IAS ಪ್ರಶ್ನೆಗೆ…

ಹೌದು, ಇನ್ಸ್ಟಾಗ್ರಾಮ್(Instagram)ಖಾತೆಯಲ್ಲಿ ವಿಡಿಯೋ ಒಂದು ಭಾರೀ ವೈರಲ್(Viral Video)ಆಗ್ತಿದೆ. ಅದರಲ್ಲಿ ಮಾಧ್ಯಮದವರು ನಮ್ಮ ಹೆಮ್ಮೆಯ ಶಾಸಕರುಗಳನ್ನು ಭೇಟಿ ಮಾಡಿ MLA ಫುಲ್ ಫಾರ್ಮ್ ಕೇಳುತ್ತಿದ್ದಾರೆ. ಅದರಲ್ಲಿ ಅವರು ತಡಬಡಿಸುವುದನ್ನು ನೋಡಿದರೆ ಮತದಾರ ಪ್ರಭುಗಳಿಗೇ ಮುಜುಗರವಾಗಬಹುದು. ನಾಚಿಕೆ ಆಗಬಹುದು. ಇಂತಹ ಮಹಾತ್ಮರನ್ನು ಆರಿಸಿ ಕಳಿಸಿದ್ಧೇವಲ್ಲಾ? ಎಂದು.

ಇದನ್ನೂ ಓದಿ: ದ.ಕ: ಕುಕ್ಕೆ ಸುಬ್ರಹ್ಮಣ್ಯ ಸಮೀಪ ಕಾಣಿಸಿಕೊಂಡ ನಕ್ಸಲರು

ಅಂದಹಾಗೆ ವಿಡಿಯೋದಲ್ಲಿ 3-4 ಶಾಸಕರ ಬಳಿ MLA ಫುಲ್ ಫಾರ್ಮ್ ಏನು ಎಂದರೆ ಫುಲ್ ಕನ್ಫ್ಯೂಸ್ ಆಗುತ್ತಾರೆ. ಹಾಗದಂರೆ… ಎಂದು ಪ್ರಶ್ನಿಸುತ್ತಾರೆ. ಪಕ್ಕದವರನ್ನು ಕೇಳುತ್ತಾರೆ. ಅರೆ ಬರೆ ಉತ್ತರಿಸುತ್ತಾರೆ. ಎಂತಹ ಪರಿಸ್ಥಿತಿ ಇದು ಅಲ್ವಾ? ಇವರೇ ಹೀಗಾದರೆ ತಮ್ಮ ಕ್ಷೇತ್ರದ ಜನರ ಸ್ಥಿತಿ ಏನು? ಇನ್ನು ಈ ವಿಡಿಯೋ ದೇಶದ ಯಾವ ಭಾಗದ್ದು ಎಂದು ಗೊತ್ತಿಲ್ಲ. ಹಿಂದಿಯಲ್ಲಿ ಮಾತನಾಡುವುದನ್ನು ನಾವು ಕಾಣಬಹುದು. ಆದರೂ ಇದು ನಿಜಕ್ಕೂ ದುರಂತವೇ ಸರಿ.

You may also like

Leave a Comment