Home » Sadananda Gowda: ಚುನಾವಣಾ ರಾಜಕೀಯದಿಂದ ನಾ ದೂರ-ಡಿ.ವಿ.ಸದಾನಂದ ಗೌಡ

Sadananda Gowda: ಚುನಾವಣಾ ರಾಜಕೀಯದಿಂದ ನಾ ದೂರ-ಡಿ.ವಿ.ಸದಾನಂದ ಗೌಡ

2 comments
Sadananda Gowda

Sadananda Gowda: ಸಂಸದ, ಕೇಂದ್ರ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ ಅವರು ನಾನು ಚುನಾವಣಾ ರಾಜಕೀಯದಿಂದ ದೂರ ಉಳಿದಿದ್ದು, ರಾಜಕರಾಣದಿಂದ ದೂರ ಉಳಿದಿಲ್ಲ ಎಂಬ ಮಾತನ್ನು ಹೇಳಿದ್ದಾರೆ. ರಾಜಕೀಯ ಶುದ್ಧೀಕರಣದ ಕೆಲಸ ನಾ ಮಾಡುವೆ. ನನ್ನೊಂದಿಗೆ ಕೈ ಜೋಡಿಸುವ ಸಮಾನ ಮನಸ್ಕರಿಗೆ ಸ್ವಾಗತವಿದೆ ಎಂದು ಅವರು ಭಾನುವಾರ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿ ಸುದ್ದಿಗಾರರೊಂದಿಗೆ ಹೇಳಿದರು.

ಇದನ್ನೂ ಓದಿ: Ayodhya Rama Mandir: ಅಯೋಧ್ಯೆ ರಾಮಮಂದಿರ ಟ್ರಸ್ಟ್ ನಿಂದ ಮತ್ತೊಂದು ಮಹತ್ವದ ನಿರ್ಧಾರ – ಭಕ್ತರಿಗೆ ಖುಷಿಯೋ ಖುಷಿ !!

ಗುಂಪುಗಾರಿಕೆಯ ಕಾರಣದಿಂದ ಬಿಜೆಪಿ ಕಳೆದ ಬಾರಿ ಅಧಿಕಾರ ಕಳೆದುಕೊಂಡಿತ್ತು. ನಾನು ಗುಂಪುಗಾರಿಕೆ ರಾಜಕಾರಣ ಮಾಡುವುದಿಲ್ಲ. ನನ್ನದು ಬಿಜೆಪಿ ಗುಂಪು ಮಾತ್ರ ಎಂದು ಹೇಳಿದರು. ಮೋದಿ ಅವರು ಕಳೆದ ಹತ್ತು ವರ್ಷದಿಂದ ಸ್ವಾರ್ಥರಹಿತ ರಾಜಕಾರಣ ಮಾಡಿದ್ದಾರೆ. ಮುಕ್ತ, ಭ್ರಷ್ಟಾಚಾರ ಮುಕ್ತ, ಜಾತಿವಾದ ಮುಕ್ತ, ರಾಜನೀತಿಯ ಪರಿಕಲ್ಪನೆ ಇದು ಮೋದಿ ವಾಕ್ಯ. ಇದು ಸಾಕಾರಗೊಳ್ಲಬೇಕು. ಈ ಬಾರಿಯ ಚುನಾವಣೆಯಲ್ಲಿ ಅದು ಆಗಬೇಕು.

ಇದನ್ನೂ ಓದಿ: K S Eshwarappa: ಈಶ್ವರಪ್ಪ ಪಕ್ಷೇತರ ಸ್ಪರ್ಧೆಗೆ ಕಾಂಗ್ರೆಸ್ ಬೆಂಬಲ !!

ನನ್ನ ಪ್ರಾಮಾಣಿಕತನ, ಸಚ್ಚಾರಿತ್ರ್ಯಕ್ಕೆ ನನಗೆ ಯಾರದ್ದೂ ಸರ್ಟಿಫಿಕೇಟ್‌ ಬೇಕಿಲ್ಲ. ಕರ್ನಾಟಕದಲ್ಲಿ ಪ್ರಾಮಾಣಿಕತೆ, ಸಚ್ಚಾರಿತ್ರ್ಯ ಅರ್ಥ ಕಳೆದುಕೊಳ್ಳುವ ರಾಜನೀತಿ ಇದೆ. ಇದು ನೋವಿನ ಸಂಗತಿ. ಚುನಾವಣೆಯವರೆಗೆ ಈ ನೋವನ್ನು ನುಂಗುತ್ತೇನೆ ಎಂದು ಹೇಳಿದರು.

You may also like

Leave a Comment