Home » K S Eshwarappa: ಮತ್ತೊಂದು ಹೊಸ ಘೋಘಣೆ ಹೊರಡಿಸಿದ ಈಶ್ವರಪ್ಪ !!

K S Eshwarappa: ಮತ್ತೊಂದು ಹೊಸ ಘೋಘಣೆ ಹೊರಡಿಸಿದ ಈಶ್ವರಪ್ಪ !!

4 comments
K S Eshwarappa

K S Eshwarappa: ಮಗನಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯ ಎದ್ದಿರುವ ಕೆ ಎಸ್ ಈಶ್ವರಪ್ಪನವರು ಶಿವಮೊಗ್ಗದಿಂದ ಪಕ್ಷೇತರವಾಗಿ ಸ್ಪರ್ಧಿಸೋದು ಫಿಕ್ಸ್ ಆಗಿದೆ. ಬ್ರಹ್ಮ ಬಂದರೂ ನಿರ್ಧಾರ ಬದಲಿಸಲ್ಲ ಎಂದಿದ್ದಾರೆ. ಈ ಬೆನ್ನಲ್ಲೇ ಈಶ್ವರಪ್ಪನವರು(K S Eshwarappa)ಮತ್ತೊಂದು ಘೋಷಣೆ ಮಾಡಿದ್ದಾರೆ.

ಪಕ್ಷೇತರ ಸ್ಪರ್ಧೆಗೆ ಮುಂದಾಗಿರುವ ಈಶ್ವರಪ್ಪನವರು ಇದೀಗ ಕ್ಷೇತ್ರದ ಮಠ-ಮಂದಿರಗಳಿಗೆ ಭೇಟಿ ನೀಡುತ್ತಿದ್ದಾರೆ. ಅಂತೆಯೇ ಇಂದು ಅವರು ಬಾಳೆಹೊನ್ನೂರಿನ ರಂಬಾಪುರಿ ಮಠಕ್ಕೆ ಭೇಟಿ ನೀಡಿ ಮಾಧ್ಯಮಗಳಿಗೆ ಕೆಲವು ಹೇಳಿಕೆ ನೀಡಿದರು.

ಈ ವೇಳೆ ಮಾತನಾಡಿದ ಅವರು ‘ನನ್ನ ಚುನಾವಣಾ ಸ್ಪರ್ಧೆ 100ಕ್ಕೆ 100 ಖಚಿತ. ನಾನು ಯಾವ ಸಂಧಾನಕ್ಕೂ ಒಪ್ಪುವುದಿಲ್ಲ. ಯಡಿಯೂರಪ್ಪನವರ(B S Yadiyurappa)ಬಗ್ಗೆ ಏನೇ ಇದ್ದರೂ ಹೊರಗಡೆ ಮಾತನಾಡುತ್ತೇನೆ” ಎಂದು ತಿಳಿಸಿದರು.

ಇನ್ನು ಇದುವರೆಗೂ ಯಡಿಯೂರಪ್ಪರ ಪ್ರಭಾವದಿಂದ ರಾಜಕೀಯ ಮಾಡಿಕೊಂಡು ಬಂದಿರುವ ಈಶ್ವರಪ್ಪನವರು ಇದೀಗ ಯಡಿಯೂರಪ್ಪರ ತವರಿನಲ್ಲೇ ಅವರನ್ನು ಎದುರು ಹಾಕಿಕೊಳ್ಳುತ್ತಿರುವುದು, ಅವರ ವಿರುದ್ಧ ಗೆಲುವು ಸಾಧಿಸುವುದು ಅಷ್ಟು ಸುಲಭದ ಮಾತಲ್ಲ ಎಂದು ಹೇಳಲಾಗುತ್ತಿದೆ.

You may also like

Leave a Comment