Home » Aditi Rao Hydari Wedding: ನಟಿ ಅದಿತಿ ರಾವ್-ಸಿದ್ಧಾರ್ಥ್‌ ದೇವಸ್ಥಾನದಲ್ಲಿ ಮದುವೆ

Aditi Rao Hydari Wedding: ನಟಿ ಅದಿತಿ ರಾವ್-ಸಿದ್ಧಾರ್ಥ್‌ ದೇವಸ್ಥಾನದಲ್ಲಿ ಮದುವೆ

2 comments
Aditi Rao Hydari Wedding

Aditi Rao Hydari Wedding: ನಟಿ ಅದಿತಿ ರಾವ್ ಹೈದರಿ ತಮ್ಮ ದೀರ್ಘಕಾಲದ ಗೆಳೆಯ ನಟ ಸಿದ್ಧಾರ್ಥ್ ಅವರನ್ನು ವಿವಾಹವಾಗಿದ್ದಾರೆ. ವರದಿಗಳ ಪ್ರಕಾರ, ಇಬ್ಬರೂ ತೆಲಂಗಾಣದ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಅಲ್ಲಿ ನಟಿ ಅದಿತಿ ಮತ್ತು ನಟ ಸಿದ್ಧಾರ್ಥ್ ಅತ್ಯಂತ ಆತ್ಮೀಯ ಸಮಾರಂಭದಲ್ಲಿ ವಿವಾಹವಾದರು, ಇದರಲ್ಲಿ ಅವರ ಕುಟುಂಬ ಮತ್ತು ಹತ್ತಿರದ ಸಂಬಂಧಿಕರು ಮಾತ್ರ ಭಾಗವಹಿಸಿದ್ದರು ಎಂದು ವರದಿಯಾಗಿದೆ.

ಇದನ್ನೂ ಓದಿ: Tejswini Gowda: ಧಿಡೀರ್ ಎಂದು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ತೇಜಸ್ವಿನಿ ಗೌಡ !!

ವರದಿ ಪ್ರಕಾರ, ಅದಿತಿ ಮತ್ತು ಸಿದ್ಧಾರ್ಥ್ ಸಾಂಪ್ರದಾಯಿಕ ಪದ್ಧತಿ ಮೂಲಕ ವಿವಾಹವಾದರು. ಇವರಿಬ್ಬರ ಮದುವೆಗೆ ತಮಿಳುನಾಡಿನಿಂದ ಅರ್ಚಕರನ್ನು ಕರೆಸಲಾಗಿತ್ತು. ನಟಿಯ ತಾಯಿಯ ಅಜ್ಜ ವನಪರ್ತಿ ಸಂಸ್ಥಾನದ ಕೊನೆಯ ಆಡಳಿತಗಾರರಾಗಿದ್ದರು ಎಂದು ವರದಿಯಾಗಿದೆ.

ಇದನ್ನೂ ಓದಿ: Bengaluru: ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಶಾಕ್ ನೀಡಿದ ಲೋಕಾಯುಕ್ತ :‌ 13 ಸರ್ಕಾರಿ ಅಧಿಕಾರಿಗಳ 60 ಸ್ಥಳಗಳ ಮೇಲೆ ದಾಳಿ

ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ್ ತಮ್ಮ ಲವ್‌ಲೈಫನ್ನು ವೈಯಕ್ತಿಕವಾಗಿ ಇಟ್ಟುಕೊಂಡಿದ್ದರು. ಈ ಜೋಡಿ ಎಲ್ಲೂ ಕೂಡಾ ಅಷ್ಟಾಗಿ ಒಟ್ಟಾಗಿ ಕಾಣಿಸಿಕೊಂಡಿದ್ದು ಕಡಿಮೆ. ಹಾಗಾಗಿ ಇವರಿಬ್ಬರು ರಹಸ್ಯವಾಗಿ ಮದುವೆಯಾಗಲು ಇದೇ ಕಾರಣ ಎನ್ನಲಾಗಿದೆ. ಆದಾಗ್ಯೂ, ದಂಪತಿಗಳು ತಮ್ಮ ಮದುವೆಯನ್ನು ಇನ್ನೂ ಘೋಷಿಸಿಲ್ಲ.

You may also like

Leave a Comment