Home » Tiruvananthapuram: ವೈದ್ಯಕೀಯ ಕಾಲೇಜಿನ ಯುವ ವೈದ್ಯೆ ಆತ್ಮಹತ್ಯೆ; ಡೆತ್‌ನೋಟ್‌ ಪತ್ತೆ

Tiruvananthapuram: ವೈದ್ಯಕೀಯ ಕಾಲೇಜಿನ ಯುವ ವೈದ್ಯೆ ಆತ್ಮಹತ್ಯೆ; ಡೆತ್‌ನೋಟ್‌ ಪತ್ತೆ

1 comment
Tiruvananthapuram

Tiruvananthapuram: ತಿರುವನಂತಪುರಂ ವೈದ್ಯಕೀಯ ಕಾಲೇಜಿನ ಯುವ ವೈದ್ಯರೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ವೈದ್ಯೆ ಅಭಿರಾಮಿ ಮೃತಪಟ್ಟಿದ್ದಾರೆ. ವೈದ್ಯೆ ಅಭಿರಾಮಿ ತಿರುವನಂತಪುರದ ವೆಲ್ಲನಾಡು ಮೂಲದವರು. ಮೆಡಿಕಲ್ ಕಾಲೇಜು ಸಮೀಪದ ಪಿಟಿ ಚಾಕೋ ನಗರದ ಫ್ಲ್ಯಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅರಿವಳಿಕೆ ಔಷಧಿಯ ಮಿತಿಮೀರಿದ ಸೇವನೆಯೇ ಸಾವಿಗೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಇದನ್ನೂ ಓದಿ : Bengaluru: ಯೆಮನ್ ಯುವಕನ ದೇಹದಲ್ಲಿ 2 ವರ್ಷದಿಂದ ಸಿಲುಕಿಕೊಂಡಿದ್ದ ಬುಲೆಟ್ ಹೊರ ತೆಗೆದ ಬೆಂಗಳೂರು ವೈದ್ಯರು

ಪೊಲೀಸರ ಪ್ರಕಾರ ಇವರು ಮಧ್ಯಾಹ್ನದ ಊಟದ ನಂತರ ತನ್ನ ಮನೆ ಲಾಕ್‌ ಮಾಡಿದ್ದರು. ಈಕೆಯ ಫ್ಲ್ಯಾಟ್‌ಮೇಟ್ಸ್‌ ಬಲವಂತದಿಂದ ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ಅಲ್ಲಿ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ತನ್ನ ಬೆಡ್‌ ಮೇಲೆ ಬಿದ್ದಿದ್ದರು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು, ಅಲ್ಲಿ ವೈದ್ಯರು ಆಕೆಯನ್ನು ಮೃತ ಎಂದು ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: K S Eshwarappa: ನನ್ನನ್ನು ಬೆಂಬಲಿಸುವುದಾಗಿ ಕಾಂಗ್ರೆಸ್ ಕಾರ್ಯಕರ್ತರ ಕರೆಗಳು ಬರುತ್ತಿವೆ : ಮಾಜಿ ಸಚಿವ ಕೆ ಎಸ್ ಈಶ್ವರಪ್ಪ

ಪೊಲೀಸರು ಕೊಠಡಿಯಿಂದ ಸಿರಿಂಜ್ ಮತ್ತು ಡೆತ್‌ನೋಟ್ ವಶಪಡಿಸಿಕೊಂಡಿದ್ದಾರೆ. ಶವವನ್ನು ಪೊಲೀಸರು ವೈದ್ಯಕೀಯ ಕಾಲೇಜು ಶವಾಗಾರಕ್ಕೆ ಸಾಗಿಸಲಾಗಿದೆ. ಮಿತಿಮೀರಿದ ಮಾದಕ ದ್ರವ್ಯ ಸೇವನೆಯಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ. ಯುವ ವೈದ್ಯೆ ಕೊಲ್ಲಂನ ರಾಮನ್‌ಕುಲಂಗರ ನಿವಾಸಿ ಪ್ರತೀಶ್ ರಘು ಅವರನ್ನು ವಿವಾಹವಾಗಿದ್ದರು. ಅವರು ಕೂಡಾ ವೃತ್ತಿಯಲ್ಲಿ ವೈದ್ಯರು. ಪೊಲೀಸರು ಅಸ್ವಾಭಾವಿಕ ಮರಣಕ್ಕಾಗಿ ಸಿಆರ್‌ಪಿಸಿ ಸೆಕ್ಷನ್ 174 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.

You may also like

Leave a Comment