Home » K S Eshwarappa: ಬಿಜೆಪಿ ತೊರೆಯುವ ವಿಚಾರ – ಈಶ್ವರಪ್ಪ ಮಹತ್ವದ ಹೇಳಿಕೆ!!

K S Eshwarappa: ಬಿಜೆಪಿ ತೊರೆಯುವ ವಿಚಾರ – ಈಶ್ವರಪ್ಪ ಮಹತ್ವದ ಹೇಳಿಕೆ!!

1,280 comments

K S Eshwarappa: ಬಿಜೆಪಿಯ ಕುಟುಂಬ ರಾಜಕಾರಣದ ವಿರುದ್ಧ ಸಿಡಿದೆದ್ದಿರುವ ಕೆ ಎಸ್ ಈಶ್ವರಪ್ಪನವರು ಶಿವಮೊಗ್ಗದಿಂದ ಪಕ್ಷೇತರವಾಗಿ ಸ್ಪರ್ಧಿಸೋದು ಫಿಕ್ಸ್ ಆಗಿದೆ. ಬ್ರಹ್ಮ ಬಂದರೂ ನಿರ್ಧಾರ ಬದಲಿಸಲ್ಲ ಎಂದಿದ್ದಾರೆ. ಈ ಬೆನ್ನಲ್ಲೇ ಈಶ್ವರಪ್ಪನವರು(K S Eshwarappa) ಬಿಜೆಪಿ ಬಿಡುತ್ತಾರೆ ಎಂಬ ಸುದ್ದಿ ಬಲವಾಗಿ ಹಬ್ಬುತ್ತಿದೆ. ಆದರೀಗ ಈ ಕುರಿತು ಸ್ವತಃ ಈಶ್ವರಪ್ಪನವರೇ ಪ್ರತಿಕ್ರಿಯಿಸಿ ಕಿಡಿಕಾರಿದ್ದಾರೆ.

ಹೌದು, ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಭಾಗವಹಿಸಿದ ಈಶ್ವರಪ್ಪನವರಿಗೆ ಪಕ್ಷ ಬಿಡುವ ಕುರಿತು ಪ್ರಶ್ನೆಯೊಂದನ್ನು ಕೇಳಲಾಯಿತು. ನಿರೂಪಕರು ತಮ್ಮ ಮಗನಿಗೆ ಪಕ್ಷ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಅದೇ ದಿನ ಸಂಜೆ ಈಶ್ವರಪ್ಪ ಪಕ್ಷ ಬಿಡುತ್ತಾರೆ ಎಂಬ ಸುದ್ದಿ ಭಾರೀ ಸದ್ದು ಮಾಡಿತು. ಇದರ ಬಗ್ಗೆ ಏನು ಹೇಳುತ್ತೀರಿ ಎಂದಾಗ ಈಶ್ವರಪ್ಪನವರು ಕೆಂಡಾಮಂಡಲವಾದರು.

ನನ್ನ ಮೈಯಲ್ಲಿ ರಕ್ತ ಇರುವವರೆಗೂ ನಾನು ಪಕ್ಷ ತೊರೆಯಲ್ಲ. ಹಾಗೆ ಮಾಡಿದರೆ ನಾನು ದ್ರೋಹಿ ಆಗುತ್ತೇನೆ. ನೀವು ಇದನ್ನು ತಿದ್ದುಕೊಳ್ಳಿ. ಬಿಜೆಪಿ(BJP) ನನ್ನ ತಾಯಿ ಇದ್ದಾಗೆ. ಇಲ್ಲಿ ತನಕ ಜೀವವನ್ನೇ ಕೊಟ್ಟಿದೆ ನನಗೆ. ಸಂಸ್ಕಾರ ಕೊಟ್ಟಿರುವುದು ಇದೇ ಪಾರ್ಟಿ. ನಾನೇನಾದರು ಪಕ್ಷ ಬಿಟ್ಟರೆ ಮನುಷ್ಯ ಆಗುವುದಿಲ್ಲ, ಮೃಗ ಆಗಿರುತ್ತೇನೆ ಎಂದು ಬಿಜೆಪಿ ಬಿಡುವ ಪ್ರಮೇಯವೇ ಇಲ್ಲ ಎಂದು ಹೇಳಿದ್ದಾರೆ.

You may also like

Leave a Comment