Home » Love and Dokha: ಹಿಂದೂ ಎಂದು ನಂಬಿಸಿ ಮಹಿಳೆಯ ಗರ್ಭಿಣಿ ಮಾಡಿದ ಅನ್ಯಕೋಮಿನ ಯುವಕ

Love and Dokha: ಹಿಂದೂ ಎಂದು ನಂಬಿಸಿ ಮಹಿಳೆಯ ಗರ್ಭಿಣಿ ಮಾಡಿದ ಅನ್ಯಕೋಮಿನ ಯುವಕ

1 comment
Love and Dokha

Love and Dokha: ಬಸ್‌ನಲ್ಲಿ ನಿತ್ಯ ಬರುತ್ತಿದ್ದ ಮಹಿಳೆಯೋರ್ವರನ್ನು ಪಟಾಯಿಸಿ ತಾನು ಹಿಂದೂ ಎಂದು ನಂಬಿಸಿದ್ದು ಮಾತ್ರವಲ್ಲದೇ ಆಕೆಯನ್ನು ಗರ್ಭಿಣಿಯಾಗಿಸಿದ ಅನ್ಯಕೋಮಿನ ಯುವಕನ ವಿರುದ್ಧ ದೂರು ದಾಖಲಾಗಿದೆ. ಈ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿದೆ. ಇದೊಂದು ಲವ್‌ಜಿಹಾದ್‌ ಪ್ರಕರಣ ಎಂದು ಆರೋಪ ಮಾಡಲಾಗಿದೆ.

ಇದನ್ನೂ ಓದಿ: Udupi Nejaru Case: ಆರೋಪಿ ಪ್ರವೀಣ್‌ ಚೌಗುಲೆಗೆ ಜಾಮೀನು ನಿರಾಕರಣೆ

ಮುಸ್ಲಿಂ ಯುವಕ ತೌಸೀಫ್‌ ಎಂಬಾತ ತನ್ನ ಹೆಸರು ಸುರೇಶ್‌ ಎಂದು ಹೇಳಿದ್ದು, ಮಹಿಳೆಯ ಸ್ನೇಹ ಸಂಪಾದಿಸಿದ್ದ. ನಂತರ ಪ್ರೀತಿಯ ನಾಟಕವಾಡಿ ಮದುವೆಯಾಗಿ ಆಕೆಯನ್ನು ಗರ್ಭಿಣಿ ಮಾಡಿದ್ದಾನೆ. ಮಹಿಳೆಗೆ ಅನಂತರ ಈತ ಸುಳ್ಳು ಹೇಳಿದ್ದಾನೆ ಎಂಬ ಅನುಮಾನ ಬಂದಿದೆ. ಈತನ ಹೆಸರು ಸುರೇಶ್‌ ಅಲ್ಲ ಎಂದು ಅರಿವಾಗಿದೆ. ಇದರಿಂದ ನೊಂದು ಆತ್ಮಹತ್ಯೆ ಮಾಡಲೆಂದು ನದಿಯ ದಡಕ್ಕೆ ಬಂದಿದ್ದ ಈಕೆಯನ್ನು ಯಾರೋ ಕಂಡು ರಕ್ಷಣೆ ಮಾಡಿದ್ದಾರೆ. ನಂತರ ಆಕೆಗೆ ಧೈರ್ಯ ಹೇಳಿ ಪ್ರಕರಣ ದಾಖಲಾಗುವಂತೆ ಮಾಡಿದ್ದಾರೆ.

ಇದನ್ನೂ ಓದಿ: Mangaluru: ಹಿಂದುತ್ವದ ಕೋಟೆ ಬೇಧಿಸಿ ಈ ಬಾರಿ ಜಯ; ಕಾಂಗ್ರೆಸ್‌ ತೆಕ್ಕೆಗೆ ಕ್ಷೇತ್ರ- ಅಭಯಚಂದ್ರ ಜೈನ್‌

ತನಿಖೆಯಲ್ಲಿ ತೌಸೀಫ್‌ಗೆ ಈಗಾಗಲೇ ಮದುವೆಯಾಗಿದ್ದು ಮಕ್ಕಳೂ ಇದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಈತನಿಗೆ ಮಾ.30 ರವರೆಗೆ ರಿಮಾಂಡ್‌ ನೀಡಲಾಗಿದೆ. ತನ್ನ ಪತಿಯ ಮರಣದ ನಂತರ ಒಂಟಿಯಾಗಿ ವಾಸಿಸುತ್ತಿದ್ದು, ಕಂಪ್ಯೂಟರ್‌ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ದಿನವೂ ಬಸ್‌ನಲ್ಲಿ ಕೆಲಸಕ್ಕೆಂದು ಹೋಗುತ್ತಿದ್ದ ಸಮಯದಲ್ಲಿ ಈತ ಹಿಂದೂ ಹೆಸರು ಹೇಳಿ ಬಲೆಗೆ ಬೀಸಿದ್ದಾನೆ.

ಇದೀಗ ಪ್ರಕರಣ ದಾಖಲಾಗಿದ್ದು, ಲವ್‌ಜಿಹಾದ್‌ ಕೋನದಿಂದ ಪೊಲೀಸರು ತನಿಖೆ ಆರಂಭಿಸಿದ್ದಾರೆ.

You may also like

Leave a Comment