Home » Mumbai Police: ಬ್ಲೂ ಫಿಲಂ ನಿರ್ಮಿಸುತ್ತಿದ್ದ ಗುಂಪನ್ನು ಬಂಧಿಸಿದ ಪೊಲೀಸರು

Mumbai Police: ಬ್ಲೂ ಫಿಲಂ ನಿರ್ಮಿಸುತ್ತಿದ್ದ ಗುಂಪನ್ನು ಬಂಧಿಸಿದ ಪೊಲೀಸರು

by Mallika
1 comment
Mumbai Police

Mumbai Police: ನೀಲಿ ಚಿತ್ರಗಳ ನಿರ್ಮಾಣದಲ್ಲಿ ತೊಡಗಿದ್ದ ಗುಂಪೊಂದನ್ನು ಬಂಧಿಸಿರುವ ಘಟನೆಯೊಂದು ಮುಂಬೈ ಬಳಿಯ ಲೊನಾವ್ಲಾದಲ್ಲಿ ನಡೆದಿದೆ.

ಐಶಾರಾಮಿ ವಿಲ್ಲಾವೊಂದನ್ನು ಬಾಡಿಗೆ ಪಡೆದಿದ್ದ 15 ಜನರ ತಂಡವೊಂದು ಅಲ್ಲಿಯೇ ನೀಲಿ ಚಿತ್ರದ ಶೂಟಿಂಗ್‌ ನಡೆಯುತ್ತಿದ್ದು, ಈ ಶೂಟಿಂಗ್‌ನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದರ ಬೆನ್ನ ಹಿಂದೆ ಬಿದ್ದ ಲೊನಾವ್ಲಾ ಪೊಲೀಸರು ಗುಂಪನ್ನು ಬಂಧಿಸಿದ್ದಾರೆ.

13 ಜನರನ್ನು ಪೊಲೀಸರು ಬಂಧಿಸಿದ್ದು, ಐದು ಮಂದಿ ಯುವತಿಯರು ಇದ್ದರು. ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದವರು ಸೇರಿ ನೀಲಿ ಚಿತ್ರ ಶೂಟಿಂಗ್‌ ಮಾಡುತ್ತಿದ್ದರು. ಡಿಜಿಟಲ್‌ ಫ್ಲಾಟ್‌ಫಾರ್ಮ್‌, ಒಟಿಟಿಗಳಿಗಾಗಿ ಈ ಯುವಕರು ನೀಲಿ ಚಿತ್ರದ ಚಿತ್ರೀಕರಣ ಮಾಡುತ್ತಿದ್ದರು ಎನ್ನಲಾಗಿದೆ.

ಚಿತ್ರೀಕರಣ ಮಾಡಿದ್ದ ಫುಟೇಜನ್ನು ವಶಪಡಿಸಿಕೊಳ್ಳಲಾಗಿದ್ದು, ಡಿಜಿಟಲ್‌ ಕ್ಯಾಮೆರಾ ಹಾಗೂ ಚಿತ್ರೀಕರಣಕ್ಕೆಂದು ಬಳಸಿದ್ದ ಇತರೆ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: Birthday Cake: ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಕೇಕ್ ತಿಂದು 10 ವರ್ಷದ ಬಾಲಕಿ ಸಾವು

 

 

 

You may also like

Leave a Comment