Home » Sumalatha Ambrish: ಚುನಾವಣೆಗೆ ನಿಲ್ಲಲ್ಲ, ಮಂಡ್ಯ ಬಿಡಲ್ಲ, ಸದ್ಯದಲ್ಲೇ ಬಿಜೆಪಿ ಸೇರುತ್ತೇನೆ – ಸಂಸದೆ ಸುಮಲತಾ ಅಂಬರೀಷ್ !!

Sumalatha Ambrish: ಚುನಾವಣೆಗೆ ನಿಲ್ಲಲ್ಲ, ಮಂಡ್ಯ ಬಿಡಲ್ಲ, ಸದ್ಯದಲ್ಲೇ ಬಿಜೆಪಿ ಸೇರುತ್ತೇನೆ – ಸಂಸದೆ ಸುಮಲತಾ ಅಂಬರೀಷ್ !!

1,270 comments
Sumalatha Ambrish

Sumalatha Ambrish: ಭಾರೀ ಕುತೂಹಲ ಕೆರಳಿಸಿದ್ದ ಮಂಡ್ಯ ಸಂಸದೆ ಸುಮಲತಾ ಅಂಬರೀಷ್(Sumalatha Ambrish) ಅವರ ನಡೆ ಕೊನೆಗೂ ಏನೆಂದು ಗೊತ್ತಾಗಿದ್ದು. ಬಿಜೆಪಿ ಹಾಗೂ ಜೆಡಿಎಸ್(BJP-JDS) ನವರಿಗೆ ಸಮಾಧಾನ ತರಿಸಿದೆ. ತಾನು ಚುನಾವಣೆಯಲ್ಲಿ ಸ್ಪರ್ಧಿಸಲ್ಲ, ಮಂಡ್ಯ ಬಿಟ್ಟು ಹೋಗಲ್ಲ ಆದ್ರೆ ಸದ್ಯದಲ್ಲೇ ಎಂದು ಕೊನೆಗೂ ಸುಮಲತಾ ಘೋಷಿಸಿದ್ದಾರೆ.

ಇದನ್ನೂ ಓದಿ: Mysore : ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿಸಿದ್ದು ಎಚ್ ಡಿ ದೇವೇಗೌಡ- ಕಾಂಗ್ರೆಸ್ ಸಚಿವ ಆರೋಪ !!

ಹೌದು, ಮಂಡ್ಯ(Mnadya) ಬಿಟ್ಟು ಬೇರೆ ಕಡೆ ನನ್ನ ರಾಜಕೀಯ ಜೀವನವಿಲ್ಲ, ಮಂಡ್ಯ ಮಣ್ಣಿನ ಸೊಸೆಯಾಗಿ ಜಿಲ್ಲೆಯ ಜನರ ಕೈಬಿಡಲು ನಾನು ಇಷ್ಟಪಡುವುದಿಲ್ಲ. ಈ ಮಂಡ್ಯದ ಋಣ ಮತ್ತು ಈ ಮಂಡ್ಯದ ಜನರನ್ನು ನಾನು ಎಂದೆಂದಿಗೂ ಬಿಡುವುದಿಲ್ಲ ಎಂದು ನಿಮ್ಮ ಮುಂದೆ ಇಂದು ಪ್ರಮಾಣ ಮಾಡಿ ಹೇಳುತ್ತೇನೆ. ಸದ್ಯದಲ್ಲೇ ಬಿಜೆಪಿ ಸೇರುತ್ತೇನೆ, ಬಳಿಕ ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡುತ್ತೇನೆ ಎಂದು ಸಂಸದೆ ಸುಮಲತಾ ಪುನರುಚ್ಛರಿಸಿದ್ದಾರೆ.

ಅಂದಹಾಗೆ ಮಂಡ್ಯದ ಕಾಳಿಕಾಂಬ ದೇವಸ್ಥಾನದ ಆವರಣದಲ್ಲಿ ಬುಧವಾರ ಮಾತನಾಡಿದ ಅವರು, ಎಂಪಿ ಚುನಾವಣೆ ಹುಡುಗಾಟವಲ್ಲ. ನಾನೇನೋ ದ್ವೇಷ ಅಥವಾ ಹಠಕ್ಕೆ ಸ್ಪರ್ಧೆ ಮಾಡಬೇಕು ಎಂದರೆ ನಾನು ಈಗಲೂ ಸ್ಪರ್ಧೆ ಮಾಡಬಹುದು. ಆದರೆ, ಇದರಿಂದ ಯಾರಿಗೆ ನಷ್ಟವಾಗುತ್ತದೆ ಎಂಬುದನ್ನೂ ಕೂಡ ಮುಲಾಜು ನೋಡಬೇಕು. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ನನ್ನ ಬೆಂಬಲ ನೀಡುತ್ತೇನೆ. ಕಾಂಗ್ರೆಸ್ ಪಕ್ಷ ಸೇರುವುದಿಲ್ಲ. ಆದರೆ ರಾಜಕೀಯ ಬಿಟ್ಟು ಹೋಗಲ್ಲ ಎಂದೂ ತಿಳಿಸಿದ್ದಾರೆ.

ಮೊನ್ನೆ ಬೆಂಗಳೂರಿನಲ್ಲಿ ಸಭೆಯಲ್ಲಿ ಹಲವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎಂದು ಕೇಳಿದ್ದೀರಿ. ಹಲವರು ಕಾಂಗ್ರೆಸ್‌ಗೆ ಬೆಂಬಲ ಕೊಡಿ ಎಂದು ಹೇಳಿದ್ರಿ. ಒಂದಿಷ್ಟು ಜನರು ನಾನು ಯಾವುದೇ ನಿರ್ಧಾರ ತೆಗೆದುಕೊಂಡರು ಬೆಂಬಲ ಕೊಡುತ್ತೇವೆ ಎಂದು ಹೇಳಿದ್ರಿ. ಆದರೆ, ಈಗ ಹಠಕ್ಕೆ ಬಿದ್ದು ಪಕ್ಷೇತರೆಯಾಗಿ ನಿಂತರೆ ಯಾರಿಗೆ ಲಾಭ? ಯಾರಿಗೆ ನಷ್ಟ? ಎಂಬುದನ್ನು ನಾವು ಗಮನಿಸಬೇಕು. ನನಗೆ ಬೇರೆ ಕಡೆ ಆಫರ್‌ ನೀಡಿದರೂ ನಾನು ಒಪ್ಪಲಿಲ್ಲ ಎಂದು ಸುಮಲತಾ ಹೇಳಿದರು.

ಮುಂದೆ ಮಾತನಾಡಿದ ಮೋದಿಯವರನ್ನು ಹಾಡಿ ಹೋಗಳಿದ ಸುಮಲತಾ ಅವರು ನನಗೆ ಅಂದರೆ ಮಂಡ್ಯ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ 4,000 ಕೋಟಿ ಅನುದಾನ ನೀಡಿದೆ. ಪ್ರತಿಯೊಂದು ವಿಷಯಕ್ಕೂ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅರ್ಥ ಮಾಡಿಸಿ ಕೂಲಂಕುಷವಾಗಿ ಎಲ್ಲವನ್ನೂ ಹೇಳಿಕೊಂಡು ಬಂದಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಅಭಿವೃದ್ಧಿಯೇ ಮೂಲ ಮಂತ್ರ ಎಂದು ಹೋಗುತ್ತಿದ್ದಾರೆ. ಅವರಿಗೆ ಕುಟುಂಬ ಇದಿಯಾ? ಏನೂ ಇಲ್ಲ. ಒಂದೇ ಒಂದು ಭ್ರಷ್ಟಾಚಾರದ ಆರೋಪ ಇಲ್ಲದ ನಾಯಕತ್ವ ಅವರದ್ದು ಎಂದಿದ್ದಾರೆ.

You may also like

Leave a Comment