Home » Prakash Raj: ಬಿಜೆಪಿ ಸೇರ್ಪಡೆ ವಿಚಾರ – ಸ್ಪಷ್ಟೀಕರಣ ನೀಡಿದ ನಟ ಪ್ರಕಾಶ್ ರಾಜ್

Prakash Raj: ಬಿಜೆಪಿ ಸೇರ್ಪಡೆ ವಿಚಾರ – ಸ್ಪಷ್ಟೀಕರಣ ನೀಡಿದ ನಟ ಪ್ರಕಾಶ್ ರಾಜ್

4 comments
Prakash Raj

Prakash Raj: ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ಇತ್ತೀಚಿನ ದಿನಗಳಲ್ಲಿ ಸಿನಿಮಾಗಿಂತ ರಾಜಕೀಯ ವಿಚಾರವಾಗಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಸದಾ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸುವ ನಟ ಇದೀಗ ಇದ್ದಕ್ಕಿದ್ದಂತೆ ಬಿಜೆಪಿ(BJP) ಸೇರುತ್ತಾರೆ ಎಂಬ ಸುದ್ದಿ ಭಾರೀ ಸದ್ದುಮಾಡುತ್ತಿದೆ.

ಇದನ್ನೂ ಓದಿ: Kota Shrinivas Poojary : ಸಿಂಪಲ್ ನಾಯಕ ಕೋಟ ಶ್ರೀನಿವಾಸ ಪೂಜಾರಿ 3.5 ಕೋಟಿ ಆಸ್ತಿ ಒಡೆಯ !!

https://x.com/prakashraaj/status/1775817257630720389?t=vECLRlHBeLt538JbzgAZ9w&s=08

ಹೌದು, ಇಂದು ಮಧ್ಯಾಹ್ನ 3 ಗಂಟೆಗೆ ಪ್ರಕಾಶ್‌ ರಾಜ್‌ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂದು ಎಕ್ಸ್‌ನಲ್ಲಿ ಹರಿದಾಡುತ್ತಿತ್ತು. ಇದು ಒಂದು ರೀತಿ ರಾಜಕೀಯ ವಲಯದಲ್ಲಿ ಭಾರೀ ಗುಲ್ಲೆಬ್ಬಿಸಿಬಿಟ್ಟಿತು. ಕೇಂದ್ರ ಸರ್ಕಾರವನ್ನು(Central Government)ಆಗಾಗ ಟೀಕಿಸುತ್ತಲೇ ಮೋದಿಯವರ ವಿರುದ್ಧ, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ನಟ ಇದೀಗ ಬಿಜೆಪಿಗೆ (BJP) ಸೇರ್ಪಡೆ ಆಗುತ್ತಾರೆ ಎಂಬ ಸುದ್ದಿ ಬಂದಾಗ ಎಂತವರಿಗೂ ಶಾಕ್ ಆಗೇ ಆಗುತ್ತದೆ. ಆದರೆ ರಾಜಕೀಯದಲ್ಲಿ ಏನು ಬೇಕಾದರೂ ನಡೆಯುತ್ತದೆ ಎನ್ನುವ ಕಾರಣಕ್ಕೆ ಎಲ್ಲರೂ ಇದ್ದರೂ ಇರಬಹುದು ಎಂದು ಸುಮ್ಮನಿದ್ದರು.

ಇದನ್ನೂ ಓದಿ: Parliament Election: ಬಿಜೆಪಿ ಅಭ್ಯರ್ಥಿ ಸಿ ಎನ್ ಮಂಜುನಾಥ್ ಹೆಸರಿನಲ್ಲಿ 4 ಮಂದಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಪ್ರತಿಪಕ್ಷಗಳು

ಈ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದ್ದಂತೆ ಪ್ರಕಾಶ್ ರಾಜ್ ಮೌನ ಮುರಿದಿದ್ದಾರೆ. ಬಿಜೆಪಿ ಸೇರುತ್ತಾರೆ ಎನ್ನುವ ಪೋಸ್ಟ್ ಅನ್ನು ಶೇರ್‌ ಮಾಡಿಕೊಂಡಿರುವ ಪ್ರಕಾಶ್‌ ರಾಜ್‌ ಅವರು ಜಸ್ಟ್‌ ಆಸ್ಕಿಂಗ್‌ ಎಂಬ ಹ್ಯಾಶ್‌ ಟ್ಯಾಗ್‌ ಅನ್ನು ಬಳಸಿ ಪ್ರತಿಕ್ರಿಯೆ ನೀಡಿದ್ದಾರೆ.

ಎಕ್ಸ್‌ನಲ್ಲಿ ಏನಿದೆ?

ಅವರು ಪ್ರಯತ್ನಿಸಿದ್ದಾರೆ ಅಂತ ನಾನು ಭಾವಿಸಿದ್ದೇನೆ. ಅವರು ನನ್ನನ್ನು ಖರೀದಿಸುವಷ್ಟು (ಸೈದ್ಧಾಂತಿಕವಾಗಿ) ಶ್ರೀಮಂತರಲ್ಲ ಎಂದು ಅವರು ಅರಿತುಕೊಂಡಿರಬೇಕು ಎಂದು ನಾನು ಭಾವಿಸುತ್ತೇನೆ. ನೀವು ಏನು ಯೋಚಿಸುತ್ತೀರಿ ಸ್ನೇಹಿತರೇ ಎಂದು ಪ್ರಶ್ನಿಸಿ, ಜಸ್ಟ್ ಆಸ್ಕಿಂಗ್ ಎಂದು ಪ್ರಕಾಶ್ ರಾಜ್ ರಿಯಾಕ್ಟ್ ಮಾಡಿದ್ದಾರೆ.

ಈ ಮೂಲಕ ಬಿಜೆಪಿ ಪಕ್ಷಕ್ಕೆ ಸೇರುವ ಸುದ್ದಿ ಸುಳ್ಳು ಎಂಬುದನ್ನು ನಟ ಪ್ರಕಾಶ್ ರಾಜ್ ಅವರು ಸ್ಪಷ್ಟಪಡಿಸಿದ್ದಾರೆ. ಸುಖಾಸುಮ್ಮನೆ ಹರಡಿದ ಸುದ್ದಿ ಹಾಗೆ ತಣ್ಣಗಾಗಿದೆ.

You may also like

Leave a Comment