Home » Assault Case: ಹನುಮಾನ್‌ ಚಾಲೀಸ ಹಾಕಿದ ಪ್ರಕರಣ; ಹಲ್ಲೆಗೊಳಗಾದವನ ಮೇಲೆಯೇ ಎಫ್‌ಐಆರ್‌ ದಾಖಲು

Assault Case: ಹನುಮಾನ್‌ ಚಾಲೀಸ ಹಾಕಿದ ಪ್ರಕರಣ; ಹಲ್ಲೆಗೊಳಗಾದವನ ಮೇಲೆಯೇ ಎಫ್‌ಐಆರ್‌ ದಾಖಲು

1 comment
Assualt case

Assault Case: ಮಾ.17 ರಂದು ಮೊಬೈಲ್‌ ಶಾಪ್‌ ಮಾಲೀಕನ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಹಲ್ಲೆಗೊಳಗಾದ ಮುಖೇಶ್‌ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲು ಮಾಡಿದ್ದಾರೆ. ಕೋರ್ಟ್‌ ಅನುಮತಿ ಪಡೆದು ಪೊಲೀಸರು ಎಫ್‌ಐಆರ್‌ ದಾಖಲು ಮಾಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Illicit Relationship: ಲವರ್‌ನ ಮನೆಗೆ ಕರೆದುಕೊಂಡು ಬರಲು ಗಂಡ ಒಪ್ಪದ್ದಕ್ಕೆ ವಿದ್ಯುತ್‌ ಕಂಬ ಏರಿ ಕುಳಿತ ಪತ್ನಿ

ಬಂಧಿತ ಐವರು ಆರೋಪಿಗಳಲ್ಲಿ ಒಬ್ಬನಾದ ಸುಲೇಮಾನ್‌ ಎಂಬಾತನ ತಾಯಿ ಮುಖೇಶ್‌ ವಿರುದ್ಧ ಪ್ರತಿ ದೂರು ನೀಡಿದ್ದರು. ನಂತರ ದೂರನ್ನು ಆಧರಿಸಿ ಪೊಲೀಸರು ಎನ್‌ಸಿಆರ್‌ ದಾಖಲು ಮಾಡಿದ್ದರು. ಇದೀಗ ಕೋರ್ಟ್‌ ಅನುಮತಿ ಪಡೆದು ಮುಖೇಶ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಇದನ್ನೂ ಓದಿ: Vijayapura: ಸಾವು ಗೆದ್ದ ಸಾತ್ವಿಕ್‌; ಈತನ ಹೆಸರು ಇನ್ನು ಸಿದ್ದಲಿಂಗ

ದೂರಿನಲ್ಲಿರುವ ಪ್ರಕಾರ ಮುಖೇಶ್‌ ಮೂರರಿಂದ ನಾಲ್ಕು ದಿನಗಳಿಂದ ಜೋರಾಗಿ ಸೌಂಡ್‌ ಸಿಸ್ಟಂ ಹಾಕಿದ್ದ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ನನ್ನ ಮಗ ಹಾಗೂ ಆತನ ಸ್ನೇಹಿತರು ಕೇಳಿದ್ದಕ್ಕೆ ಮುಖೇಶ್‌ನಿಂದ ಐವರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳ ನಿಂದನೆ ಮಾಡಿ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ. ಈ ಕುರಿತು ಘಟನೆಯ ಮರುದಿನವೇ ಬಂಧಿತ ಸುಲೇಮಾನ್‌ ತಾಯಿ ದೂರನ್ನು ನೀಡಿದ್ದರು ಎಂದು ವರದಿಯಾಗಿದೆ.

You may also like

Leave a Comment