Home » Road Accident: ಬೆಂಗಳೂರಿನಲ್ಲಿ ಭಯಾನಕ ಆಕ್ಸಿಡೆಂಟ್‌; ಸ್ಕೂಟರ್‌ ಸವಾರನ ಮೇಲೆ ಎರಗಿದ ಕೋಲೆ ಬಸವ

Road Accident: ಬೆಂಗಳೂರಿನಲ್ಲಿ ಭಯಾನಕ ಆಕ್ಸಿಡೆಂಟ್‌; ಸ್ಕೂಟರ್‌ ಸವಾರನ ಮೇಲೆ ಎರಗಿದ ಕೋಲೆ ಬಸವ

1 comment
Road Accident

Road Accident: ಬೆಂಗಳೂರಿನಲ್ಲಿ ಒಂದು ಆಕ್ಸಿಡೆಂಟ್‌ ನಡೆದಿದ್ದು, ಆದರೆ ಇದಕ್ಕೆ ಕಾರಣ ಯಾವ ಮನುಷ್ಯನೂ ಅಲ್ಲ. ಹೌದು. ಈ ಭೀಕರ ಅಪಘಾತಕ್ಕೆ ಕಾರಣವಾಗಿದ್ದು ಒಂದು ಕೋಲೆಬಸವ!!!

ಇದನ್ನೂ ಓದಿ: KSRTC Special Bus: ಯುಗಾದಿ ಹಬ್ಬಕ್ಕೆ ಕೆಎಸ್‌ಆರ್‌ಟಿಸಿಯಿಂದ ಪ್ರಯಾಣಿಕರಿಗೆ ಶುಭ ಸುದ್ದಿ

ಆದರೂ ಈ ಅಪಘಾತದಲ್ಲಿ ಸವಾರ ಬದುಕುಳಿದಿದ್ದಾನೆ. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಜನರು ಇದನ್ನು ನೋಡಿ ಆಶ್ಚರ್ಯ ಪಡುತ್ತಿದ್ದಾರೆ.

ಇದನ್ನೂ ಓದಿ: Assault Case: ಹನುಮಾನ್‌ ಚಾಲೀಸ ಹಾಕಿದ ಪ್ರಕರಣ; ಹಲ್ಲೆಗೊಳಗಾದವನ ಮೇಲೆಯೇ ಎಫ್‌ಐಆರ್‌ ದಾಖಲು

ರಸ್ತೆ ಬದಿಯಲ್ಲಿ ತನ್ನ ಮಾಲಕಿ ಜೊತೆ ನಡೆದುಕೊಂಡು ಹೋಗುತ್ತಿದ್ದ ಕೋಲೆಬಸವ, ಇದ್ದಕ್ಕಿದ್ದಂತೆ ಸ್ಕೂಟರ್‌ ಸವಾರನಿಗೆ ತನ್ನ ಕೊಂಬಿನಿಂದ ಜೋರಾಗಿ ಹೊಡೆದು ಓಡಿದೆ. ಕೋಲೆಬಸವನ ಮಾಲಕಿ ಏನಾಗುತ್ತಿದ ಎಂದು ನೋಡುವಷ್ಟರಲ್ಲಿ ಕೋಲೆ ಬಸವ ಓಡಿ ಹೋಗಿದೆ.

ಆದರೆ ಸ್ಕೂಟರ್‌ ಸವಾರನ ಆಯಸ್ಸು ಗಟ್ಟಿ ಇತ್ತು. ಏಕೆಂದರೆ ಕೊಂಚ ಏಮಾರಿದರೂ ಈಚರ್‌ ಚಕ್ರಕ್ಕೆ ಈತನ ತಲೆ ಸಿಲುಕಿ ಬಲಿಯಾಗುತ್ತಿದ್ದ. ಈ ಘಟನೆ ನಡೆದಿರುವುದು ಮಹಾಲಕ್ಷ್ಮೀ ಲೇಔಟ್‌ನ ಸ್ವಿಮ್ಮಿಂಗ್‌ ಫೂಲ್‌ ಜಂಕ್ಷನ್‌ ಬಳಿ. ಕಳೆದ ವಾರ ಈ ದುರ್ಘಟನೆ ನಡೆದಿದೆ. ಬೈಕ್‌ ಸವಾರ ಅಚ್ಚರಿ ಎಂಬಂತೆ ಬದುಕುಳಿದಿದ್ದಾನೆ.

ಕೋಲೆ ಬಸವ ಹೊಡೆದ ರಭಸಕ್ಕೆ ಸ್ಕೂಟರ್‌ ಸವಾರ ಈಚರ್‌ ಕೆಳಗೆ ಬಿದ್ದಿದ್ದು, ಕೂಡಲೇ ಈಚರ್‌ ವಾಹನ ನಿಲ್ಲಿಸಿದ್ದ ಡ್ರೈವರ್‌ ಸ್ವಲ್ಪದರಲ್ಲೇ ಸವಾರ ಬದುಕಿದ್ದಾನೆ. ಬೆಚ್ಚಿ ಬೀಳಿಸುವ ಈ ಆಕ್ಸಿಡೆಂಟ್‌ನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

You may also like

Leave a Comment