Home » NCERT : ಈ ಶೈಕ್ಷಣಿಕ ವರ್ಷದಿಂದ ಹಿಂದುತ್ವ ವಿಷಯಗಳಿಗೆ ಗೇಟ್‌ಪಾಸ್‌

NCERT : ಈ ಶೈಕ್ಷಣಿಕ ವರ್ಷದಿಂದ ಹಿಂದುತ್ವ ವಿಷಯಗಳಿಗೆ ಗೇಟ್‌ಪಾಸ್‌

2 comments
NCERT

NCERT: 11,12 ನೇ ತರಗತಿ ಪಠ್ಯದಲ್ಲಿ ಬದಲಾವಣೆ ಮಾಡಲಾಗಿದ್ದು ಈ ಕುರಿತು ಎನ್‌ಸಿಇಆರ್‌ಟಿ ಕೇಂದ್ರೀಯ ಪಠ್ಯದಿಂದ ಬಾಬ್ರಿ ಮಸೀದಿ, ಗುಜರಾತ್‌ ಹಿಂಸೆ ವಿಷಯವನ್ನು ತೆಗೆದಿದೆ.

ಇದನ್ನೂ ಓದಿ: Arecanut Farming: ಈ ವರ್ಷ ಅಡಿಕೆ ನೆಡುವವರು ಅಪ್ಪಿತಪ್ಪಿಯೂ ಈ ತಪ್ಪು ಮಾಡದಿರಿ !!

11,12 ನೇ ತರಗತಿ ಪಠ್ಯಪುಸ್ತಕದಿಂದ ಗುಜರಾತ್‌ ಗಲಭೆ, ಬಾಬ್ರಿ ಮಸೀದಿ ಧ್ವಂಸ, ಹಿಂದುತ್ವ ಸೇರಿ ಹಲವು ಅಂಶಗಳನ್ನು 2024-25 ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಎನ್‌ಸಿಆರ್‌ಟಿ ಬಿಟ್ಟಿದೆ. ಹಾಗೆನೇ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿ ಸೇರಿಸಲಾಗಿದೆ. 370ನೇ ವಿಧಿ ರದ್ದು ಕುರಿತ ವಿಷಯ ಸೇರ್ಪಡೆ ಮಾಡಲಾಗಿರುವ ಕುರಿತು ವರದಿಯಾಗಿದೆ.

ಇದನ್ನೂ ಓದಿ: Education Board : 2024-25ನೇ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ- ಶಾಲಾ ರಜೆಗಳ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಸಮಾಜ ವಿಜ್ಞಾನ ಮತ್ತು ರಾಜಕೀಯ ವಿಜ್ಞಾ ಪುಸ್ತಕದಲ್ಲಿ ಬದಲಾವಣೆ ಮಾಡಿ ಪರಿಷ್ಕೃತ ಪಠ್ಯ ಪ್ರಕಟ ಮಾಡಲಾಗಿದೆ. ಈ ಕುರಿತು ಅಧಿಕೃತ ಹೇಳಿಕೆಯನ್ನು ನೀಡಿಲ್ಲವಾದರೂ ಬದಲಾವಣೆಯನ್ನು ವಾರ್ಷಿಕ ನವೀಕರಣದ ಪ್ರಕಾರ ಮಾಡಲಾಗಿದೆ.

ಅಯೋಧ್ಯ ಬಾಬರಿ ಮಸೀದಿ ಧ್ವಂಸ, ಹಿಂದುತ್ವ ರಾಜಕೀಯ ವಿಷಯಗಳನ್ನು 11 ನೇ ತರಗತಿಯ ಅಧ್ಯಾಯ 8 ರಲ್ಲಿ ಬಿಡಲಾಗಿದೆ. ಗೋದ್ರಾ ನಂತರದ ಗಲಭೆಗಳ ಸಮಯದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮುಸ್ಲಿಮರನ್ನು ಕೊಲೆ ಮಾಡಲಾಗಿತ್ತು ಎಂಬುವುದನ್ನು ಒಂದು ಸಾವಿರಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟರು ಎಂದು ಬದಲಾಯಿಸಲಾಗಿದೆ. ಹಾಗೆನೇ ಪಾಕ್‌ ಆಕ್ರಮಿತ ಕಾಶ್ಮೀರ, ಮಣಿಪುರ ಒಪ್ಪಂದ ವಿಷಯ ಕುರತ ಪಠ್ಯ ಕೂಡಾ ಬದಲಾವಣೆ ಮಾಡಿದೆ.

You may also like

Leave a Comment