Pigmentation: ಯಾವುದೇ ಹೆಣ್ಣಿಗೆ ಮುಖದ ಸೌಂದರ್ಯವೇ ಮುಖ್ಯ. ಒಂದು ವೇಳೆ ಹೆಣ್ಣಿನ ಬಳಿ ಚಿನ್ನ, ಒಡವೆ, ವಸ್ತ್ರ, ಅಪಾರ ಶ್ರೀಮಂತಿಕೆ ಎಲ್ಲವೂ ಇದ್ದು ಮುಖದ ಸೌಂದರ್ಯ ಹಾಳಾದರೆ ಇವೆಲ್ಲವೂ ಅದರ ಮುಂದೆ ಗೌಣವಾಗಿ ಬಿಡುತ್ತವೆ. ಅಷ್ಟರ ಮಟ್ಟಿಗೆ ಮುಖದ ಸೌಂದರ್ಯ ಮುಖ್ಯವೆನಿಸುತ್ತದೆ. ಅದರಲ್ಲೂ ಮುಖದ ಮೇಲೆ ಒಂದು ಸಣ್ಣ ಗುಳ್ಳೆಯಾದರೂ ಸಹಿಸದ ಹೆಣ್ಣು ಮಕ್ಕಳು,ಇನ್ನು ಪಿಗ್ಮೆಂಟೇಶನ್ ನಂತಹ ಕಪ್ಪು ಕಲೆಗಳು ಉಂಟಾದರೆ ಮುಗಿದೆ ಹೋಯಿತು. ಎಲ್ಲಿಗೆ ಹೋದರು ಮಾಸ್ಕ್ ಧರಿಸಿಕೊಂಡು ಹೋಗುವುದು, ಇನ್ನು ಕೆಲ ಹೆಣ್ಣು ಮಕ್ಕಳು ಮನೆಯಿಂದ ಹೊರಬರುವುದಕ್ಕೆ ಹೆದರುತ್ತಾರೆ.
ಇದನ್ನೂ ಓದಿ: Bengaluru: ವಕೀಲೆಯಿಂದ ಬೆತ್ತಲೆ ವೀಡಿಯೋ ಮಾಡಿಸಿ, 10 ಲಕ್ಷ ಪೀಕಿಸಿದ ನಕಲಿ ಕಸ್ಟಮ್ಸ್ ಅಧಿಕಾರಿಗಳು; ಏನಿದು ಪ್ರಕರಣ
ಮಾರುಕಟ್ಟೆಯಲ್ಲಿ ಪಿಗ್ಮೆಂಟೇಷನ್( ಭಂಗು) ಚಿಕಿತ್ಸೆಗೆ ಲೆಕ್ಕವಿಲ್ಲದಷ್ಟು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಮನೆಯಲ್ಲಿಯೇ ಸಿಗುವ ಪದಾರ್ಥಗಳನ್ನು ಉಪಯೋಗಿಸಿ ಪಿಗ್ನೆಂಟೇಶನ್ ಸಮಸ್ಯೆಯನ್ನು ದೂರ ಮಾಡಬಹುದು. ಪಿಗ್ಮೆಂಟೇಷನ್ ಚಿಕಿತ್ಸೆಯಲ್ಲಿ ಮನೆಮದ್ದುಗಳ ಬಳಕೆ ಪರಿಣಾಮಕಾರಿ ಎನಿಸುತ್ತವೆ.
ಇದನ್ನೂ ಓದಿ: Canara Bank: ಕೆನರಾ ಬ್ಯಾಂಕಿನಲ್ಲಿ ಖಾತೆ ಹೊಂದಿದವರಿಗೆ ಬೆಳ್ಳಂಬೆಳಗ್ಗೆಯೇ ಗುಡ್ ನ್ಯೂಸ್ !!
ಮುಖದಲ್ಲಿ ಪಿಗ್ಮೆಂಟೇಷನ್ ಸಮಸ್ಯೆ ಉಂಟಾಗಲು ಕಾರಣಗಳು :-
ಉಷ್ಣದ ಆಹಾರ ಹೆಚ್ಚಾಗಿ ಸೇವನೆ ಮಾಡುವುದರಿಂದ ಮುಖದಲ್ಲಿ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ. ಇನ್ನು ಆಲ್ಕೋಹಾಲ್ ಧೂಮಪಾನ ಮಾಡುವುದರಿಂದಲೂ ಸಹ ಇದು ಉಂಟಾಗುತ್ತದೆ. ಹಾಗೆಯೇ ಹೆಚ್ಚು ಬಿಸಿಲಿಗೆ ಒಡ್ಡಿಕೊಳ್ಳುವವರಿಗೆ, ಡ್ರೈ ಸ್ಕಿನ್ ಹೊಂದಿರುವವರಿಗೆ, ಅಧಿಕ ಕಾಫಿ ಟೀ ಅಭ್ಯಾಸ ಉಳ್ಳವರಲ್ಲಿ, ಜಂಕ್ ಫುಡ್ ಸೇವನೆಯಿಂದ, ನೀರನ್ನು ಕಡಿಮೆ ಬಳಸುವುದರಿಂದ, ಒತ್ತಡ ಹಾಗೂ ನಿದ್ರಾಹೀನತೆ ಸಮಸ್ಯೆಯಿಂದಾಗಿ ಮತ್ತು ಅತಿಯಾದ ಕೋಪ ಹಾಗೂ ಅತಿ ಹೆಚ್ಚು ಉದ್ರೇಕಗೊಳ್ಳುವವರಲ್ಲಿ ಪಿಗ್ಮೆಂಟೇಷನ್ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ.
ಪಿಗ್ಮೆಂಟೇಷನ್ ಸಮಸ್ಯೆ ನಿವಾರಣೆಗೆ ಮನೆಮದ್ದು :-
ಅರಿಶಿನ ಪೇಸ್ಟ್ : ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಅಡುಗೆಗೆ ಬಳಸುವ ಅರಿಶಿನವು ಕರ್ಕ್ಯುಮಿನ್ ಅಂಶವನ್ನು ಹೊಂದಿದ್ದು, ಇದು Oxidation ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ನಿವಾರಿಸುವ ಮಿಶ್ರಣವಾಗಿದ್ದು, ಇದು ಪಿಗ್ಮೆಂಟೇಷನ್ ಅನ್ನು ದೂರಗೊಳಿಸಲು ಮತ್ತು ಚರ್ಮದ ಹೊಳಪು ಹೆಚ್ಚಿಸಲು ಸಹಾಯ ಮಾಡುತ್ತದೆ. ಮನೆಯಲ್ಲಿ ಕುಟ್ಟಿ ಪುಡಿ ಮಾಡಿದ ಅರಿಶಿನ ಪುಡಿಯನ್ನು ನೀರು ಅಥವಾ ಹಾಲಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿ, ಬಳಿಕ ಪಿಗ್ಮೆಂಟೇಷನ್ ಇರುವ ಪ್ರದೇಶಗಳಿಗೆ ಹಚ್ಚಿ. ಇದನ್ನು 15-20 ನಿಮಿಷಗಳ ಕಾಲ ಬಿಟ್ಟು, ನಂತರ ಅದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು. ಇದನ್ನು ನಿಯಮಿತವಾಗಿ ಮಾಡುವುದರಿಂದ ಪಿಗ್ಮೆಂಟೇಷನ್ ದೂರ ಗೊಳಿಸಿ, ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.
ಅಲೋವೆರಾ ಜೆಲ್ : ನಮ್ಮ ಮನೆಗಳಲ್ಲಿಯೇ ಬೆಳೆಸುವ ಅಲೋವೆರಾ ಸಹ ನಮ್ಮ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಅಲೋವೆರಾ ಜೆಲ್ ತಂಪಾದ ಹಾಗೂ ಗುಣಪಡಿಸುವ ಔಷದೀಯ ಸಸ್ಯವಾಗಿದೆ. ಇದು ಪಿಗ್ಮೆಂಟೇಷನ್ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರವಾಗಿದ್ದು, ಎಲೆಯಿಂದ ತೆಗೆದ ತಾಜಾ ಅಲೋವೆರಾ ಜೆಲ್ ಅನ್ನು ನಿಮ್ಮ ಚರ್ಮದ ಪಿಗ್ಮೆಂಟೇಷನ್ ಪ್ರದೇಶಗಳಿಗೆ ನೇರವಾಗಿ ಹಚ್ಚಿ ನೀರಿನಿಂದ ತೊಳೆಯುವ ಮೊದಲು 20-30 ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಡಿ. ಅಲೋವೆರಾ ಜೆಲ್ ನ ನಿಯಮಿತ ಬಳಕೆಯು ಕಪ್ಪು ಕಲೆಗಳನ್ನು ಮುಖದಿಂದ ತೊಲಗಿಸಲು ಸಹಾಯ ಮಾಡುತ್ತದೆ ಮತ್ತು ಮುಖದ ಸೌಂದರ್ಯ ಹೆಚ್ಚಿಸುತ್ತದೆ.
ಮೊಸರಿನಿಂದ ಮಾಸ್ಕ್ ಮಾಡುವುದು : ಮನೆಗಳಲ್ಲಿ ಸಿಗುವ ಮೊಸರು ಸಹ ನಮ್ಮ ಚರ್ಮದ ತ್ವಚೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲವಿದ್ದು, ಇದು ಚರ್ಮದ ಮೇಲಿನ ಕಪ್ಪು ಕಲೆಗಳನ್ನು ನಿಧಾನವಾಗಿ ಹೋಗಲಾಡಿಸುತ್ತಿದ್ದೆ ಮತ್ತು ಕಾಲಾನಂತರದಲ್ಲಿ ಪಿಗ್ಮೆಂಟೇಷನ್ ಸಮಸ್ಯೆ ಬರದಂತೆ ತಡೆಯುತ್ತದೆ. ಮೊದಲಿಗೆ ಪಿಗ್ಮೆಂಟೇಷನ್ ಇರುವ ಜಾಗಗಳಲ್ಲಿ ಮೊಸರನ್ನು ಹಚ್ಚಿ, ನಂತರ ಅದನ್ನು ನೀರಿನಿಂದ ತೊಳೆಯುವ ಮೊದಲು ಅದನ್ನು 15-20 ನಿಮಿಷಗಳ ಕಾಲ ಬಿಡಿ. ಈ ರೀತಿ ನಿಯಮಿತವಾಗಿ ಮಾಡುವುದರಿಂದ ಪಿಗ್ಮೆಂಟೇಷನ್ ಸಮಸ್ಯೆ ದೂರವಾಗುತ್ತದೆ.
ನಿಂಬೆ ಹಣ್ಣು : ಇನ್ನು ಕೊನೆಯದಾಗಿ ನಾವು ಪ್ರತಿನಿತ್ಯ ಮನೆಯಲ್ಲಿ ಬಳಸುವ ನಿಂಬೆ ರಸವು ಸಿಟ್ರಿಕ್ ಆಮ್ಲವನ್ನು ಹೆಚ್ಚಾಗಿ ಹೊಂದಿದ್ದು, ನೈಸರ್ಗಿಕ ಬೀಚಿಂಗ್ ಏಜೆಂಟ್ ಆಗಿದೆ. ಇದು ಕಪ್ಪು ಕಲೆಗಳನ್ನು ತೊಲಗಿಸಲುಸಲು ಸಹಾಯ ಮಾಡುತ್ತದೆ ಮತ್ತು ಕಾಲಾನಂತರದಲ್ಲಿ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಆಗತಾನೇ ಹಿಂಡಿದ ನಿಂಬೆ ರಸದಲ್ಲಿ ನೆನೆಸಿದ ಹತ್ತಿ ಉಂಡೆಯನ್ನು ಪಿಗ್ಮೆಂಟೇಷನ್ ಇರುವ ಪ್ರದೇಶಗಳ ಮೇಲೆ ಸರಳವಾಗಿ ಟಚಪ್ ಮಾಡಿ, ಬಳಿಕ ಸುಮಾರು 10-15 ನಿಮಿಷಗಳ ಕಾಲ ಅದನ್ನು ಒಣಗಲು ಬಿಡಿ, ನಂತರ ಅದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಹೀಗೆ ನಿಯಮಿತವಾಗಿ ಈ ರೀತಿ ಮಾಡುವುದರಿಂದ ಪಿಗ್ಮೆಂಟೇಷನ್ ಸಮಸ್ಯೆ ನಿವಾರಣೆ ಆಗುತ್ತದೆ. ಹಾಗೆಯೇ ಮುಖದ ಮೇಲೆ ಗುಳ್ಳೆಗಳ ಸಮಸ್ಯೆ ನಿವಾರಣೆಯಾಗುತ್ತದೆ.
