Home » SSLC Marks: ಮಾರ್ಕ್ಸ್‌ ಕೊಡದಿದ್ದರೆ ತಾತನ ಬಳಿ ಹೇಳಿ ನಿಮ್ಮ ಮೇಲೆ ವಾಮಾಚಾರ ಮಾಡ್ತೀನಿ-ವಿದ್ಯಾರ್ಥಿ ಬ್ಲಾಕ್‌ಮೇಲ್‌

SSLC Marks: ಮಾರ್ಕ್ಸ್‌ ಕೊಡದಿದ್ದರೆ ತಾತನ ಬಳಿ ಹೇಳಿ ನಿಮ್ಮ ಮೇಲೆ ವಾಮಾಚಾರ ಮಾಡ್ತೀನಿ-ವಿದ್ಯಾರ್ಥಿ ಬ್ಲಾಕ್‌ಮೇಲ್‌

2 comments
SSLC Marks

SSLC Marks: ಮೌಲ್ಯಮಾಪನದ ಸಂದರ್ಭದಲ್ಲಿ ಕೆಲವೊಂದು ವಿದ್ಯಾರ್ಥಿಗಳು ಬರೆಯುವ ನನ್ನನ್ನು ಪಾಸ್‌ ಮಾಡಿ, ಮನವಿ ಮಾಡುವಂತಹ ಅನೇಕ ಸುದ್ದಿಗಳು ಕೇಳಿ ಬರುತ್ತಿದೆ. ಅಂತಹುದೇ ಒಂದು ಸುದ್ದಿ ಇದೀಗ ವೈರಲ್‌ ಆಗಿದೆ. ಅದರಲ್ಲಿ ವಿದ್ಯಾರ್ಥಿಯೊಬ್ಬ ʼʼ ನನಗೆ ಉತ್ತಮ ಅಂಕ ನೀಡದಿದ್ದರೆ ನನ್ನ ತಾತನಿಗೆ ಹೇಳಿ ನಿಮ್ಮ ಮೇಲೆ ವಾಮಾಚಾರ ಮಾಡ್ತೀನಿʼ ಎಂದು ಬರೆದು ಬೆದರಿಕೆ ಹಾಕಿದ್ದಾನೆ.

ಅಂದಹಾಗೆ ಈ ಘಟನೆ ನಡೆದಿರುವುದು ಆಂಧ್ರಪ್ರದೇಶದಲ್ಲಿ. ಇತ್ತೀಚೆಗೆ ಇಲ್ಲಿ 10 ನೇ ತರಗತಿ ಬೋರ್ಡ್‌ ಪರೀಕ್ಷೆ ನಡೆದಿದ್ದು, ಉತ್ತರ ಮೌಲ್ಯಮಾಪನ ಸಂದರ್ಭದಲ್ಲಿ ಈ ಕೆಲಸ ಪತ್ತೆಯಾಗಿದೆ. ಬಾಪಟ್ಲ ಮುನ್ಸಿಪಲ್‌ ಹೈಸ್ಕೂಲ್‌ನಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ನಡೆಯುತ್ತಿದ್ದು, ಪೇಪರ್‌ ತಿದ್ದುವ ಸಂದರ್ಭದಲ್ಲಿ ಶಿಕ್ಷಕರೊಬ್ಬರು ಉತ್ತರಪತ್ರಿಕೆಯಲ್ಲಿ ಈ ಉತ್ತರ ಕಂಡು ಶಾಕ್‌ ಆಗಿದ್ದಾರೆ.

ರಾಮಾಯಣದ ಮಹತ್ವವವನ್ನು ವಿವರಿಸಿ ಎನ್ನುವ ಪ್ರಶ್ನೆಗೆ ಉತ್ತರದ ರೂಪದಲ್ಲಿ ಇದನ್ನು ಬರೆಯಲಾಗಿತ್ತು.

You may also like

Leave a Comment