Home » Cricket News: “ಶಬಾಶ್ ಡಿ. ಕೆ., ವಿಶ್ವಕಪ್ ಖೇಲ್ನಾ ಹೈ ಅಭೀ” : ದಿನೇಶ್ ಕಾರ್ತಿಕ್ ಗೆ ಚೇಡಿಸಿದ ರೋಹಿತ್ ಶರ್ಮಾ

Cricket News: “ಶಬಾಶ್ ಡಿ. ಕೆ., ವಿಶ್ವಕಪ್ ಖೇಲ್ನಾ ಹೈ ಅಭೀ” : ದಿನೇಶ್ ಕಾರ್ತಿಕ್ ಗೆ ಚೇಡಿಸಿದ ರೋಹಿತ್ ಶರ್ಮಾ

2 comments
Cricket News

Cricket News: ನೆನ್ನೆ ತಾನೆ ನಡೆದ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ಐಪಿಎಲ್ ಮ್ಯಾಚ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ರೋಹಿತ್ ಶರ್ಮ ಅವರು ಆರ್ಸಿಬಿ ಆಟಗಾರ ದಿನೇಶ್ ಕಾರ್ತಿಕ್ ಅವರಿಗೆ ತಮಾಷೆಗಾಗಿ ಚೇಡಿಸಿರುವ ಘಟನೆ ವಾಂಖೆಡೆ ಸ್ಟೇಡಿಯಂ ನಲ್ಲಿ ನಡೆದಿದೆ.

ದಿನೇಶ್ ಕಾರ್ತಿಕ್ ಅವರು ಮುಂಬೈ ಇಂಡಿಯನ್ಸ್ ಬೌಲರ್ಗಳ ವಿರುದ್ಧ ತಮ್ಮ ಅದ್ಭುತ ಇನ್ನಿಂಗ್ಸ್ ನ ತುದಿಯಲ್ಲಿದ್ದರು. ಡೆತ್ ಓವರ್ನ ಮೊದಲ ಸ್ಲಿಪ್ ನಲ್ಲಿ ಫೀಲ್ಡಿಂಗ್ ಮಾಡುವಾಗ ರೋಹಿತ್ ಶರ್ಮಾ ತಮಾಷೆಗಾಗಿ ಆರ್. ಸಿ. ಬಿ ಬ್ಯಾಟರ್ ದಿನೇಶ್ ಕಾರ್ತಿಕ್  ಅವರನ್ನು ಲೇವಡಿ ಮಾಡಿದ್ದಾರೆ. “ಶಬಾಶ್ ಡಿ. ಕೆ., ವಿಶ್ವಕಪ್ ಖೇಲ್ನಾ ಹೈ ಅಭೀ”, ಎಂದು ಜೂನ್ನಲ್ಲಿ ಮುಂಬರುವ ಟಿ20 ವಿಶ್ವಕಪ್ ಬಗ್ಗೆ ತಮ್ಮ ಹೇಳಿಕೆಯನ್ನು ಉಲ್ಲೇಖಿಸುತ್ತಾ ರೋಹಿತ್ ಹೇಳಿದ್ದಾರೆ.

23 ಎಸೆತಗಳಲ್ಲಿ ಅಜೇಯ 53 ರನ್ ಗಳಿಸಿದ ಕಾರ್ತಿಕ್ ಅವರ ಅದ್ಭುತ ಇನ್ನಿಂಗ್ಸ್ ನಲ್ಲಿ ಆರ್ಸಿಬಿಗೆ ಬೇಕಾದ ಅಗತ್ಯ ರನ್ ಕಲೆಹಾಕಿದ್ದರು. ಕಾರ್ತಿಕ್ ಕೇವಲ 22 ಎಸೆತಗಳಲ್ಲಿ ಐದು ಬೌಂಡರಿ ಮತ್ತು ನಾಲ್ಕು ಸಿಕ್ಸರ್ಗಳಿಂದ ಅರ್ಧಶತಕ ಗಳಿಸಿದರು.
ಬೌಂಡರಿಗಳು ಮತ್ತು ಸಿಕ್ಸರ್ಗಳ ಅಬ್ಬರದಿಂದ, ಆರ್. ಸಿ. ಬಿ 196 ರನ್ಗಳನ್ನು ದಾಖಲಿಸಿತು. ಆದರೆ ಮುಂಬೈ ಇಂಡಿಯನ್ಸ್ ತಂಡ 27 ಬಾಲ್ಗಳು ಬಾಕಿ ಇರುವಂತೆಯೇ ಆರ್ಸಿಬಿಯ ರನ್ ಪುಡಿಗಟ್ಟಿ ಏಳು ವಿಕೆಟ್ಗಳ ಭರ್ಜರಿ ಜಯಗಳಿಸಿತು‌.

You may also like

Leave a Comment