Home » Udupi: ಸ್ವಿಮ್ಮಿಂಗ್‌ ಪೂಲ್‌ಗೆ ಇಳಿದ ಬಾಲಕ ಮುಳುಗಿ ಸಾವು

Udupi: ಸ್ವಿಮ್ಮಿಂಗ್‌ ಪೂಲ್‌ಗೆ ಇಳಿದ ಬಾಲಕ ಮುಳುಗಿ ಸಾವು

1 comment
Udupi

Udupi: ಎನ್ವೆಂಚರ್ಸ್‌ ರೆಸಾರ್ಟ್‌ನ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಬಾಲಕನೊಬ್ಬ ಮುಳುಗಿ ಮೃತ ಪಟ್ಟಿರುವ ಘಟನೆಯೊಂದು ನಡೆದಿದೆ. ಈ ಘಟನೆ ನಡೆದಿರುವುದು ಉಡುಪಿಯ ಕುಂದಾಪುರ ತಾಲೂಕಿನ ಹೆಂಗವಳ್ಳಿ ಸಮೀಪದ ಟಿನ್‌ಟಾನ್‌ ಎನ್ವೆಂಚರ್ಸ್‌ ರೆಸಾರ್ಟ್‌ನಲ್ಲಿ ನಡೆದಿದೆ. ಮುಹಮ್ಮದ್‌ ಅಝೀಝ್‌ (10) ಮೃತ ಬಾಲಕ.

ಇದನ್ನೂ ಓದಿ: Mangaluru: ಅಡ್ಯಾರ್‌ನಲ್ಲಿರುವ ʼಬೊಂಡ ಫ್ಯಾಕ್ಟರಿʼ ಬಂದ್‌ಗೆ ಆದೇಶ

ಹೂಡೆಯ ದಾರುಸ್ಸಲಾಮ್‌ ಇಂಗ್ಲೀಷ್‌ ಮೀಡಿಯಂ ಶಾಲೆಯಲ್ಲಿ ನಾಲ್ಕನೇ ತರಗತಿಯ ವಿದ್ಯಾರ್ಥಿಯಾದ ಈತ ಶಾಲೆಗೆ ರಜೆ ಇದ್ದ ಕಾರಣ ಇವರ ಕುಟುಂಬ ಪ್ರವಾಸಕ್ಕೆ ಹೊರಟಿತ್ತು. ರೆಸಾರ್ಟ್‌ ಸ್ಮಿಮ್ಮಿಂಗ್‌ ಪೂಲ್‌ ನೀರಿಗೆ ಇಳಿದ ಮುಹಮ್ಮದ್‌ ಹೊರಬರಲು ಆಗದೆ ತುಂಬಾ ಅಸ್ವಸ್ಥಗೊಂಡಿದ್ದ. ಕೂಡಲೇ ಆತನನ್ನು ಮೇಲೆತ್ತಿ ಪೋಷಕರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಿಸದ ಕಾರಣ ಬಾಲಕ ಮೃತ ಹೊಂದಿದ್ದಾನೆ.

ಇದನ್ನೂ ಓದಿ: Conversion: ಹಿಂದೂ ಧರ್ಮದಿಂದ ಬೇರೆ ಧರ್ಮಕ್ಕೆ ಮತಾಂತರವಾಗುವಿರಾ? ಹಾಗಾದರೆ ಇದನ್ನು ಕಡ್ಡಾಯ ಪಾಲಿಸಬೇಕು-ಸರಕಾರದಿಂದ ಆದೇಶ

You may also like

Leave a Comment