Home » Crime: ಕಳ್ಳತನದಲ್ಲೂ ದೇವರಿಗೂ ಪಾಲು ಕೊಡುತ್ತಿದ್ದ ಕಳ್ಳರು

Crime: ಕಳ್ಳತನದಲ್ಲೂ ದೇವರಿಗೂ ಪಾಲು ಕೊಡುತ್ತಿದ್ದ ಕಳ್ಳರು

1 comment
Crime

Crime: ಪಕ್ಕದ ಮನೆಯಲ್ಲಿಯೇ ಚಿನ್ನಾಭರಣ ದೋಚಿ ಮಗುಮ್ಮಾಗಿದ್ದ ಮೂವರು ಆರೋಪಿಗಳನ್ನು ಜೆ.ಜೆ. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಿರಣ್, ಆನಂದ್, ನಾನಿ ಬಂಧಿತರು.

ಇದನ್ನೂ ಓದಿ: Splendor Bike: ಹಳೆಯ ಸ್ಲೆಂಡರ್ ಬೈಕ್ ಹೊಂದಿರುವವರಿಗೆ RTO ಕಡೆಯಿಂದ ಗುಡ್ ನ್ಯೂಸ್ !!

ಚಾಮರಾಜಪೇಟೆ ಅಪುರಾವ್ ರಸ್ತೆಯ ಉಮಾ ಎಂಬುವವರ ಮನೆಯಲ್ಲಿ ಇತ್ತೀಚೆಗೆ ಅಪರಿಚಿತರು ಚಿನ್ನಾಭರಣ ದೋಚಿದ್ದರು. ಈ ಪ್ರಕರಣ ಬೆನ್ನತ್ತಿದ್ದ ಪೊಲೀಸರು ಹಲವು ಸಾಕ್ಷ್ಯಾಧಾರ ಸಂಗ್ರಹಿಸಿ ಕಿರಣ್ ಮತ್ತು ಇತರರನ್ನು ಬಂಧಿಸಿದ್ದರು. ಮೂವರು ಆರೋಪಿಗಳು ಉಮಾ ಅವರ ಪಕ್ಕದ ಮನೆಯ ನಿವಾಸಿಗಳೇ ಆಗಿದ್ದು, ನಕಲಿ ಕೀ ಬಳಸಿ ಕಳವು ಮಾಡಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Today’s Horoscope: ಇಂದಿನ ದಿನ ತುಂಬಾ ಚೆನ್ನಾಗಿದೆ, ಯಾವ ರಾಶಿಯವರಿಗೆ ಒಲಿಯಲಿದೆ ಹಣ?

ಕಳ್ಳತನವನ್ನೇ ಕಸುಬು ಮಾಡಿಕೊಂಡಿದ್ದ ಆರೋಪಿಗಳು, ಕಳವು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತಕ್ಕಾಗಿ ಮಲೆಮಹದೇಶ್ವರ ಬೆಟ್ಟಕ್ಕೆ ಹೋಗಿ ಒಂದಷ್ಟು ಹಣವನ್ನು ಹುಂಡಿಯಲ್ಲಿ ಹಾಕಿ ತಪ್ಪು ನಿವೇದನೆ ಮಾಡಿಕೊಳ್ಳುತ್ತಿದ್ದ ವಿಚಾರವೂ ಆರೋಪಿಗಳ ವಿಚಾರಣೆ ವೇಳೆ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

You may also like

Leave a Comment