Bengaluru Rural: ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾಕ್ಟರ್ ಸಿಎನ್ ಮಂಜುನಾಥ್(Dr C Manjunath) ಅವರಿಗೆ ಬೆಂಬಲ ನೀಡಿದ್ದಕ್ಕಾಗಿ ರೈತರೊಬ್ಬರ ತೋಟಕ್ಕೆ ಕಿಡಿಗೇಡಿಗಳು ರಾತ್ರೋರಾತ್ರಿ ಬೆಂಕಿ ಇಟ್ಟು ಸಂಪೂರ್ಣ ಸುಟ್ಟಂತ ಮನಮಿಡಿಯುವ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: Actor Dwarakish Passed Away: ನಟ ದ್ವಾರಕೀಶ್ ನಿಧನ
https://www.instagram.com/reel/C5zh8Frvks9/?igsh=amMzbXVmcjd6dHVy
ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು ಡಾ. ಸಿ ಎನ್ ಮಂಜುನಾಥ್ ಅವರಿಗೆ ಬೆಂಬಲ ನೀಡಿದಕ್ಕಾಗಿ ಕುಣಿಗಲ್ ನ ರೈತರೊಬ್ಬರ ತೆಂಗಿನ ತೊಟಕ್ಕೆ ಕಾಂಗ್ರೆಸ್ ಗೂಂಡಾಗಳು ಬೆಂಕಿ ಇಟ್ಟಿದ್ದಾರೆ ಎಂದು ಬರೆದುಕೊಳ್ಳಲಾಗಿದೆ. ವಿಡಿಯೋದಲ್ಲಿ ತೋಟ ಸುಟ್ಟು ಕರಕಲಾಗಿದೆ.
ಇದನ್ನೂ ಓದಿ: Pomegranate: ದಾಳಿಂಬೆ ತಿಂದರೆ ಪುರುಷರಿಗೆ ಆ ಸಮಸ್ಯೆಗಳು ಬರುವುದಿಲ್ಲ ಗೊತ್ತಾ : ಖಂಡಿತ ಸೇವಿಸಿ
ವಿಡಿಯೋ ಮಾಡಿಕೊಂಡ ರೈತ ಕಣ್ಣೀರು ಹಾಕುತ್ತಾ, ಬಿಕ್ಕಿ ಬಿಕ್ಕಿ ಅಳುತ್ತಾ ಮಂಜುನಾಥ್ ಅವರೆ ನಿಮ್ಮನ್ನು ಬೆಂಬಲಿಸಿದಕ್ಕೆ ಈ ಸ್ಥಿತಿ ಬಂದಿದೆ. ಎಲ್ಲರೂ ಬಿಜೆಪಿಗೆ ಸಾತೂ ಕೊಟ್ಟು ಗೆಲ್ಲಿಸಿ, ಕಾಂಗ್ರೆಸ್ ಸೊಕ್ಕು ಮುರಿಯೋಣ. ನಮ್ಮ ತೋಟವನ್ನೇ ಸರ್ವನಾಶವಾಗಿದೆ. ಈ ಗೂಂಡಾಗಳು ನಾಳೆ ನಮ್ಮನ್ನು ಬದುಕಲೂ ಬಿಡೋಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲಾ!! ಎಂದು ಗೋಳಾಡುವುದನ್ನು ನೋಡಿದರೆ ಎಂತವರ ಕರುಳು ಕಿತ್ತು ಬರುತ್ತದೆ.
ಚುನಾವಣೆ ಎನ್ನುವುದು, ಮತ ಎನ್ನುವುದು ನಮ್ಮ ಹಕ್ಕು. ಅದನ್ನು ಯಾರಿಗೆ ಬೇಕಾದರೂ ಹಾಕಬಹುದು. ನಮ್ಮ ಪ್ರತಿನಿಧಿಯನ್ನು ಆರಿಸುವ ಜವಾಬ್ದಾರಿ ನಮ್ಮದು. ಆದರೆ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಹೀಗೆ ಒಬ್ಬರ ಬದುಕನ್ನೇ ನಾಶಮಾಡುವುದು ಎಷ್ಟು ಸರಿ?
