Home » Bengaluru: ಮಗುವನ್ನು ಸ್ಕೂಟರಿನ ಸೈಡ್‌ ಸ್ಟ್ಯಾಂಡ್‌ ಹತ್ತಿರದ ಫೂಟ್‌ ರೆಸ್ಟಲ್ಲಿ ನಿಲ್ಲಿಸಿ ಸವಾರಿ; ವೀಡಿಯೋ ವೈರಲ್‌

Bengaluru: ಮಗುವನ್ನು ಸ್ಕೂಟರಿನ ಸೈಡ್‌ ಸ್ಟ್ಯಾಂಡ್‌ ಹತ್ತಿರದ ಫೂಟ್‌ ರೆಸ್ಟಲ್ಲಿ ನಿಲ್ಲಿಸಿ ಸವಾರಿ; ವೀಡಿಯೋ ವೈರಲ್‌

1 comment
Bengaluru

Bengaluru: ಮಗುವನ್ನು ಸ್ಕೂಟರಿನ ಸೈಡ್‌ ಸ್ಟ್ಯಾಂಡ್‌ ಹತ್ತಿರದ ಫೂಟ್‌ ರೆಸ್ಟಲ್ಲಿ ನಿಲ್ಲಿಸಿ ಸವಾರಿ ಮಾಡಿರುವ ವಿಡಿಯೋವೊಂದು ಟ್ವಿಟ್ಟರ್‌ ನಲ್ಲಿ ಭಾರೀ ವೈರಲ್‌ ಆಗಿದೆ. ಈ ವೀಡಿಯೋ ಕುರಿತು ಸಾರ್ವಜನಿಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದು, ಜೊತೆಗೆ ಬೆಂಗಳೂರು ಸಿಟಿ ಪೊಲೀಸ್‌ ಗೆ ಟ್ಯಾಗ್‌ ಮಾಡಿದ್ದಾರೆ.

ಇದೊಂದು ಪೋಷಕರ ದಿವ್ಯ ನಿರ್ಲಕ್ಷ್ಯವೋ, ಅಥವಾ ಭಂಡತನವೋ ಎಂದು ಹೇಳಬಹುದೇನೋ. ಹಾಗಾಗಿ ಈ ವೀಡಿಯೋ ಕುರಿತು ಜನರು ತರಹೇವಾರಿ ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Bantwala: ಅಪ್ಪ, ಮಗಳ ಮುಂದೆಯೇ ನೇತ್ರಾವತಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

ವೈಟ್‌ಫೀಲ್ಡ್‌ ಏರಿಯಾದಲ್ಲಿ ಈ ಘಟನೆ ನಡೆದಿದ್ದು, ಸ್ಕೂಟರಿನಲ್ಲಿ ಒಬ್ಬಾತ ಹೆಲ್ಮೆಟ್‌ ಹಾಕಿ ಸವಾರಿ ಮಾಡುತ್ತಿದ್ದರೆ, ಹಿಂದೆ ಮಹಿಳೆಯೊಬ್ಬರು ಹೆಲ್ಮೆಟ್‌ ಹಾಕದೆ ಕುಳಿತಿದ್ದು, ಮಗುವನ್ನು ಸ್ಕೂಟರಿನ ಸೈಡ್‌ ಸ್ಟ್ಯಾಂಡ್‌ ಹತ್ತಿರ ಫುಟ್‌ರೆಸ್ಟ್‌ನಲ್ಲಿ ನಿಲ್ಲಿಸಿಕೊಂಡು ನಿರ್ಲಕ್ಷ್ಯದ ಚಾಲನೆ ಮಾಡಿದ್ದಾರೆ. ಇದರ ವೀಡಿಯೋವನ್ನು ಹಿಂದಿನಿಂದ ಕಾರಿನಲ್ಲಿ ಬರುತ್ತಿದ್ದವರು ಮಾಡಿದ್ದಾರೆ.

ಇದನ್ನೂ ಓದಿ: ಖ್ಯಾತ ಯೂಟ್ಯೂಬರ್‌ 27 ವರ್ಷದ ಆಂಗ್ರಿ ರ್ಯಾಂಟ್‌ಮ್ಯಾನ್‌ ಸಾವು

ಈ ಈಡಿಯಟ್ಸ್‌ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ನೆಟ್ಟಿಗರು ಆಗ್ರಹ ಮಾಡಿದ್ದಾರೆ. ಬೆಂಗಳೂರು ಸಿಟಿ ಪೊಲೀಸ್‌ ವಿಭಾಗದಿಂದ ವೈಟ್‌ಫೀಲ್ಡ್‌ ಪೊಲೀಸ್‌ ವತ್ತಕ್ಕೆ ಸೂಚನೆ ನೀಡಲಾಗಿದ್ದು, ಸವಾರರ ವಿರುದ್ಧ ಕ್ರಮ ಜರುಗುವ ಸಾಧ್ಯತೆ ಇದೆ ಎನ್ನಲಾಗಿದೆ.

https://twitter.com/i/status/1779925034347429950

 

You may also like

Leave a Comment