Home » Teacher Transfer: ಶಿಕ್ಷಕರ ವರ್ಗಾವಣೆಗೆ ಮುಹೂರ್ತ ಫಿಕ್ಸ್‌; ಪರಿಷ್ಕೃತ ವೇಳಾಪಟ್ಟಿ ಪ್ರಕಟ

Teacher Transfer: ಶಿಕ್ಷಕರ ವರ್ಗಾವಣೆಗೆ ಮುಹೂರ್ತ ಫಿಕ್ಸ್‌; ಪರಿಷ್ಕೃತ ವೇಳಾಪಟ್ಟಿ ಪ್ರಕಟ

1 comment
Teacher Transfer

Teacher Transfer: ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಗಳ ಶಿಕ್ಷಕರು, ತತ್ಸಮಾನ ವೃಂದದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆ ವೇಳಾಪಟ್ಟಿ ಪರಿಷ್ಕರಿಸಿ ಇದೀಗ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಎ.19 ರ ರಾತ್ರಿ 10.30 ರೊಳಗೆ ಬಿಇಒಗಳು ವರ್ಗಾವಣೆಗೆ ಅರ್ಹರಾದ ಶಿಕ್ಷಕರ ಮಾಹಿತಿ ಅಪ್ಡೇಟ್‌ ಮಾಡಬೇಕು. ನಂತರ ಮಾಡಲು ಅವಕಾಶವಿಲ್ಲ ಎಂದು ಸೂಚಿಸಿದೆ.

ಇದನ್ನೂ ಓದಿ: Kannada New Movie: ಮಾಸ್ಟರ್‌ ಆನಂದ್‌ ಮಗಳ ಮೊದಲ ಸಿನಿಮಾ ನಾಳೆ ಬಿಡುಗಡೆ

ಶಿಕ್ಷಕರ ತಾತ್ಕಾಲಿಕ ಪಟ್ಟಿ ವಲಯವಾರು ವರ್ಗಾವಣೆಗೆ ಅರ್ಹರಾಗಿರುವವರ ಪಟ್ಟಿ ಬಿಡುಗಡೆಯಾಗಿತ್ತು. ಇದೀಗ ಶಾಲಾ ಶಿಕ್ಷಣ ಇಲಾಖೆ ವರ್ಗಾವಣೆಗೆ ಅರ್ಹರಿದ್ದ ಹಲವು ಶಿಕ್ಷಕರ ಹೆಸರು ಅಪ್‌ಡೇಟ್‌ ಆಗಿದ್ದನ್ನು ಗಮನಿಸಿದ್ದು, ವರ್ಗಾವಣೆ ಪ್ರಕ್ರಿಯೆಗೆ ಸಮಯ ವಿಸ್ತರಣೆ ಮಾಡಿ ಸೂಚಿಸಿದೆ.

ಇದನ್ನೂ ಓದಿ: Darshan : ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ- ಸುಮಲತಾಗೆ ಶಾಕ್ !!

ಎ.20 ರಂದು ಬಿಇಒ ಗಳು ವಲಯ ವರ್ಗಾವಣೆಗೆ ಅರ್ಹ ಶಿಕ್ಷಕರ ತಾತ್ಕಾಲಿಕ ಕರಡು ಪಟ್ಟಿ ಪ್ರಕಟ ಮಾಡಬೇಕು. ಎ.20 ರಿಂದ 22 ರವರೆಗೆ ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುವುದು. ಎ.23 ರಂದು ಎ ವಲಯದಲ್ಲಿ ಕೆಲಸ ಮಾಡುವ ಶಿಕ್ಷಕರು ಸಲ್ಲಿಸಿ ಆಕ್ಷೇಪಣೆ ದಾಖಲೆಗಳನ್ನು ಆನ್ಲೈನ್‌ ಮೂಲಕ ಪರಿಶೀಲನೆ ಮಾಡಿ ಪ್ರಕಟ ಮಾಡಲು ಬಿಇಒ ಮತ್ತು ಡಿಡಿಪಿಐ ಗಳಿಗೆ ಅವಕಶ ನೀಡಲಾಗಿದೆ.

ಎ.24 ರಂದು ವಲಯ ವರ್ಗಾವಣೆಗೆ ಅರ್ಹ ಶಿಕ್ಷರ ಆದ್ಯತೆಯ ಕರಡುಪಟ್ಟಿ ಪ್ರಕಟ ಮಾಡಲು ಸೂಚಿಸಲಾಗಿದೆ.

You may also like

Leave a Comment