Home » Bengaluru ರೋಡ್ ಶೋ ವೇಳೆ ಮೋದಿಗೆ ಭದ್ರತೆ ಲೋಪ – ರಸ್ತೆಗಿಳಿದು ಚೊಂಬು ತೋರಿಸಿದ ನಲಪಾಡ್ !!

Bengaluru ರೋಡ್ ಶೋ ವೇಳೆ ಮೋದಿಗೆ ಭದ್ರತೆ ಲೋಪ – ರಸ್ತೆಗಿಳಿದು ಚೊಂಬು ತೋರಿಸಿದ ನಲಪಾಡ್ !!

by ಹೊಸಕನ್ನಡ
1 comment

Bengaluru: ಲೋಕಸಭಾ ಚುನಾವಣೆ(MP Election) ಪ್ರಯುಕ್ತ ಮತ ಭೇಟೆಗೆಂದು ಎರಡನೇ ಸಲ ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ(PM Modi)ಯವರ ಭದ್ರತೆಯಲ್ಲಿ ಲೋಪ ಉಂಟಾಗಿದ್ದು, ಕಾಂಗ್ರೆಸ್ ನಾಯಕ ನಲಪಾಡ್ ರಸ್ತೆಗಿಳಿದು ಚೊಂಬು ಪ್ರದರ್ಶಿಸಿದ್ದಾರೆ.

ಹೌದು, ಚುನಾವಣಾ ಪ್ರಚಾರಕ್ಕೆ ಇಂದು(ಏ.20) ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಅರಮನೆ ಮೈದಾನಕ್ಕೆ ತೆರಳುವಾಗ ಇದ್ದಕ್ಕಿದ್ದಂತೆ ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್(Mohammad Nalapad)ರಸ್ತೆಗೆ ನುಗ್ಗಿ ಚೊಂಬು ಪ್ರದರ್ಶಿಸಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಪೋಲೀಸರು ಮೊಹಮ್ಮದ್ ನಲಪಾಡ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.

ಸದ್ಯ ರಾಜ್ಯ ರಾಜಕೀಯದಲ್ಲಿ ಚೊಂಬಿನ ವಿಚಾರ ಭಾರೀ ಸದ್ದು ಮಾಡುತ್ತಿದೆ. ಅಂದರೆ ಆಡಳಿತ ರೂಡ ಕಾಂಗ್ರೆಸ್ ಸರ್ಕಾರ ಕಳೆದ ಬಿಜೆಪಿ ಗೌರ್ಮೆಂಟ್ ಜನರಿಗೆ ಚೊಂಬು ನೀಡಿದೆ ಹೊರತು ಬೇರೆನನ್ನೂ ಕೊಟ್ಟಿಲ್ಲ ಎಂದು ಟೀಕಿಸುತ್ತಿದ್ದೆ. ಇದನ್ನು ಇನ್ನೂ ವೈಭವೀಕರಿಸುವ ನಿಟ್ಟಿನಲ್ಲಿ ಪ್ರಧಾನಿ ಆಗಮನದ ವೇಳೆ ಚೊಂಬು ಪ್ರದರ್ಶಿಸಿದ್ದಾರೆ.

You may also like

Leave a Comment