Home » Prajwal Revanna: ಅಶ್ಲೀಲ ವೀಡಿಯೋ ಪ್ರಕರಣ; ಕಾರು ಚಾಲಕ ಕಾರ್ತಿಕ್‌ ಎಸ್ಕೇಪ್‌

Prajwal Revanna: ಅಶ್ಲೀಲ ವೀಡಿಯೋ ಪ್ರಕರಣ; ಕಾರು ಚಾಲಕ ಕಾರ್ತಿಕ್‌ ಎಸ್ಕೇಪ್‌

0 comments
Prajwal Revanna

Prahwal Revanna: ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಇದೀಗ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಪ್ರಜ್ವಲ್‌ ಅಶ್ಲೀಲ ವೀಡಿಯೋ ನೀಡಿದ್ದು ನಾನೇ ಎಂದು ಹೇಳಿದ್ದ ಪ್ರಜ್ವಲ್‌ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್‌ ಈಗ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ. ಇದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಇದನ್ನೂ ಓದಿ: covishield vaccine: ಕೋವಿಶೀಲ್ಡ್ ಅಡ್ಡಪರಿಣಾಮ: ಸುಪ್ರೀಂ ಕೋರ್ಟ್ ಗೆ ಅರ್ಜಿ

ಹೊಳೆನರಸೀಪುರ ತಾಲೂಕಿನ ಕಡುವಿನ ಕೋಟೆ ನಿವಾಸಿ ಕಾರ್ತಿಕ್‌, ಪ್ರಜ್ವಲ್‌ ಬಳಿ ಕಾರು ಚಾಲಕನಾಗಿ 13 ವರ್ಷ ಕೆಲಸ ಮಾಡಿದ್ದು, ಎರಡು ದಿನದ ಹಿಂದ ಎಸ್‌ಐಟಿ ಮುಂದೆ ಹಾಜರಾಗೋದಾಗಿ ವೀಡಿಯೋ ಮೂಲಕ ಹೇಳಿಕೆಯೊಂದನ್ನು ಹೇಳಿದ್ದರು.

ಇದನ್ನೂ ಓದಿ: Udupi: ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ನಿಧನ

ನಾನು ಬಿಜೆಪಿ ಮುಖಂಡ ದೇವರಾಜೇಗೌಡ ಬಿಟ್ಟರೆ ಬೇರೆ ಯಾರಿಗೂ ವಿಡಿಯೋ, ಫೋಟೋಗಳನ್ನು ಹಂಚಿಕೊಂಡಿಲ್ಲ ಎಂದು ಕಾರ್ತಿಕ್‌ ಹೇಳಿದ್ದರು. ಹೀಗಾಗಿ ವಿಚಾರಣೆಗೆ ಹಾಜರಾಗಲು ಎಸ್‌ಐಟಿ ಕಾರ್ತಿಕ್‌ ಗೆ ನೋಟಿಸ್‌ ನೀಡಿದ್ದು, ಆದರೆ ಇದೀಗ ಕಾರ್ತಿಕ್‌ ಎಸ್ಕೇಪ್‌ ಆಗಿದ್ದಾರೆ.

You may also like

Leave a Comment