Home » Udupi: ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ನಿಧನ

Udupi: ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ನಿಧನ

1 comment
Udupi

Udupi: ಪುಣೆಯಿಂದ ಕುಂದಾಪುರಕ್ಕೆ ಖಾಸಗಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಉಳ್ಳೂರು-74 ಗ್ರಾಮದ ನೂಜಿನಬೈಲು ನಿವಾಸಿ, ಉದ್ಯಮಿ ಹಾಗೂ ಸಮಾಜ ಸೇವಕ ಪ್ರಶಾಂತ್‌ ಶೆಟ್ಟಿ (50) ಅವರು ಮೇ.1 ರ ಬೆಳಗಿನ ಜಾವದಲ್ಲಿ ಹೊನ್ನಾವರದಲ್ಲಿ ಹೃದಯಾಘಾತಕ್ಕೊಳಗಾಗಿ ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ:  SSLC Result: 8 ಕ್ಕೆ SSLC ರಿಸಲ್ಟ್?

ಹೊನ್ನಾವರ ಬರುವಾಗ ಅವರಿಗೆ ಎದೆನೋವು ಕಾಣಿಸಿದ್ದು, ಬಸ್‌ ನಿರ್ವಾಹಕರಿಗೆ ಮಾಹಿತಿ ನೀಡಿದ್ದರು. ಕೂಡಲೇ ನಿರ್ವಾಹಕ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತ ಹೊಂದಿದ್ದಾರೆ.

ಇದನ್ನೂ ಓದಿ: covishield vaccine: ಕೋವಿಶೀಲ್ಡ್ ಅಡ್ಡಪರಿಣಾಮ: ಸುಪ್ರೀಂ ಕೋರ್ಟ್ ಗೆ ಅರ್ಜಿ

ಇವರು ಹೋಟೆಲ್‌ ಉದ್ಯಮವನ್ನು ಪುಣೆಯಲ್ಲಿ ಹಲವು ವರ್ಷಗಳ ಕಾಲ ಮಾಡಿದ್ದು, ಅನಂತರ ಬಾಬಾಸ್‌ ಕಿಚನ್‌ ಎಂಬ ಉದ್ಯಮ ನಡೆಸಿಕೊಂಡು ಬರುತ್ತಿದ್ದರು. ಸಿದ್ದಾಪುರದಲ್ಲಿ ಕೋವಿಡ್‌ ಸಮಯದಲ್ಲಿ ಶ್ಯಾಮಲಾ ಪ್ಯಾಲೇಸ್‌ ಎನ್ನುವ ಮದುವೆ ಹಾಲ್‌ ಮತ್ತು ಪ್ರಶ್ವಿನ್‌ ಇನ್‌ ಎನ್ನುವ ಲಾಡ್ಜ್‌ ಉದ್ಯಮ ಆರಂಭಿಸಿದ್ದರು.

ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

You may also like

Leave a Comment