Home » DCM Shivakumar CD: ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರರ ಸಿಡಿ ತರ್ತಾರಾ ಡಿಕೆ ಶಿವಕುಮಾರ್ ?- ಬಿಜೆಪಿ ರಾಜು ಗೌಡ ಆಪಾದನೆ !

DCM Shivakumar CD: ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರರ ಸಿಡಿ ತರ್ತಾರಾ ಡಿಕೆ ಶಿವಕುಮಾರ್ ?- ಬಿಜೆಪಿ ರಾಜು ಗೌಡ ಆಪಾದನೆ !

by ಹೊಸಕನ್ನಡ
1 comment
DCM Shivakumar CD

DCM Shivakumar CD: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು ಪೆನ್ ಡ್ರೈವ್, ಸಿಡಿ ವಿಶ್ವವಿದ್ಯಾಲಯವನ್ನೇ ತೆರೆದಿದ್ದಾರೆ. ಡಿಕೆಗೆ ಎದುರಾಳಿಗಳನ್ನು ಹೇಗೆ ಬಗ್ಗು ಬಡಿಯಬೇಕು ಎಂದು ಗೊತ್ತಿದೆ. ಕೆಲವರಿಗೆ ಬೆದರಿಕೆಯ ಅಸ್ತ್ರ, ಕೆಲವರಿಗೆ ಸಿಡಿ ಅಸ್ತ್ರ ಬಳಸುತ್ತಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DCM Shivakumar) ವಿರುದ್ಧ ಸುರಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜು ಗೌಡ ವಾಗ್ದಾಳಿ ನಡೆಸಿದ್ದಾರೆ.

ಅವರು ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿ, “ಡಿಕೆ ಶಿವಕುಮಾರ್ ಹೀಗೆ ಮಾಡಿಯೇ ಮಾಜಿ ಸಚಿವ ರಮೇಶ ಜಾರಕಿಹೊಳಿಯವರ ಸಿಡಿ ತಯಾರಿಸಿ ಮನೆಗೆ ಕಳುಹಿಸಿದ್ದಾರೆ. ಸಮಯ ಬಂದಾಗ ಎದುರಾಳಿಗೆ ಏನೆಲ್ಲಾ ಕೊಡಬೇಕೋ ಅದನ್ನು ಡಿಕೆ ಶಿವಕುಮಾರ್ ಕೊಡುತ್ತಾರೆ. ಈಗ ಪ್ರಜ್ವಲ್, ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಅಸ್ತ್ರ ಪ್ರಯೋಗಿಸಿದ್ದಾರೆ ” ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Marriage: ಭಾರತದ ಈ ರಾಜ್ಯದಲ್ಲಿ, ಹಿಂದೂಗಳು ಎರಡು ಮದುವೆಯಾಗಬಹುದು

“ನಮ್ಮ ಡಿಕೆ ಶಿವಕುಮಾರ ಸಿಡಿ ಮಾಡೋದ್ರಲ್ಲಿ ಎಕ್ಸ್‌ಪರ್ಟ್. ಇಂತಹವರನ್ನು ಪಕ್ಕದಲ್ಲಿ ಕರೆದುಕೊಂಡು ಯಾರೂ ಓಡಾಡಬೇಡಿ. ಸಿದ್ದರಾಮಯ್ಯ ಸರ್, ನೀವು ಕೂಡಾ ಹುಷಾರಾಗಿರಿ” ಎಂದು ಡಿ.ಕೆ. ಶಿವಕುಮಾರ್ ವಿರುದ್ಧ ರಾಜು ಗೌಡ ಗುರುತರ ಆಪಾದನೆ ಹೊರಿಸಿದ್ದಾರೆ. “ಈ ಡಿಕೆಶಿ ಅಣ್ಣನಿಗೆ ಅರ್ಜೆಂಟ್ ಆಗಿ ಸಿಎಂ ಆಗಬೇಕಿದೆ. ಡಿ.ಕೆ. ಶಿವಕುಮಾರ್ ಗೆ ನಿಮ್ಮ ಕುರ್ಚಿಯ ಮೇಲೆ ಕಣ್ಣಿದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ. ತಾನು ಸಿಎಂ ಆಗಲು ಸಿದ್ದರಾಮಯ್ಯನವರನ್ನು ಕುರ್ಚಿಯಿಂದ ಇಳಿಸಬೇಕು. ಹೀಗಾಗಿ ಡಿಕೆ ಏನು ಬೇಕಾದರೂ ಮಾಡೋಕೆ ಸಿದ್ದರಿದ್ದಾರೆ. ಬೇಕಾದ್ರೆ ಯತೀಂದ್ರ ಅವರದ್ದು ಒಂದು ಸಿಡಿ ಬಿಡುತ್ತಾರೆ. ಭ್ರಷ್ಟಾಚಾರದ್ದೋ ಅಥವಾ ಇನ್ಯಾವುದೋ ಒಂದು ಸಿಡಿ ಬಿಡುತ್ತಾರೆ ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಸಿಲ ಧಗೆ ತಣಿಸಲು ಪೆಟ್ರೋಲ್ ಬಂಕ್ ಮಾಲೀಕನ ಮಾಸ್ಟರ್ ಪ್ಲಾನ್; ವಿಡಿಯೋ ಕಂಡು ಜನ ಫಿದಾ !!ಬಂಕ್ ಮುಂದೆ ಜನವೋ ಜನ

You may also like

Leave a Comment