Home » Sushma Raj Nishan Wedding: ಕರಾವಳಿಯ ಹೆಣ್ಣು ಹುಲಿ ಖ್ಯಾತಿಯ ಮದುವೆ ಸಂಭ್ರಮ! 10 ವರ್ಷ ಪ್ರೀತಿಸಿ ಮದುವೆಯಾದ ಕ್ಯೂಟ್ ಜೋಡಿ!

Sushma Raj Nishan Wedding: ಕರಾವಳಿಯ ಹೆಣ್ಣು ಹುಲಿ ಖ್ಯಾತಿಯ ಮದುವೆ ಸಂಭ್ರಮ! 10 ವರ್ಷ ಪ್ರೀತಿಸಿ ಮದುವೆಯಾದ ಕ್ಯೂಟ್ ಜೋಡಿ!

0 comments
Sushma Raj Nishan Wedding

Sushma Raj Nishan Wedding:  ಹುಲಿ ಕುಣಿತದಲ್ಲಿಯೇ ಜನಪ್ರಿಯತೆ ಪಡೆದಿರುವ ಮುದ್ದು ಮುಖದ ನಟಿ ಸುಷ್ಮಾ ರಾಜ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿಶೇಷ ಅಂದ್ರೆ ನಟಿ ಸುಷ್ಮಾ ರಾಜ್ ಮತ್ತು ನಿಶಾನ್ 10 ವರ್ಷ ಪ್ರೀತಿಸಿ ಮದುವೆಯಾದ ಜೋಡಿಯಾಗಿದೆ. ಕೆಲ ವರ್ಷಗಳ ಹಿಂದೆಯೇ ಇವರು ತಮ್ಮ ಪ್ರೀತಿಯನ್ನು ಎಲ್ಲರ ಮುಂದೆ ಹೇಳಿಕೊಂಡಿದ್ದಲ್ಲದೆ, ಸೋಶಿಯಲ್ ಮೀಡಿಯಾದಲ್ಲಿಯೂ ರಿವೀಲ್ ಮಾಡಿದ್ದರು. ಅಂದಹಾಗೆ ನಿಶಾನ್‌ಗಿಂತ ಸುಷ್ಮಾ ಅವರು ಎರಡು ವರ್ಷ ದೊಡ್ಡವರಂತೆ.

 

ಇದನ್ನೂ ಓದಿ: AstraZeneca COVID-19 Vaccine: ಕೊರೋನಾ ಲಸಿಕೆಯನ್ನು ವಿಶ್ವಾದ್ಯಂತ ಮಾರಾಟ ಮಾಡಲಾಗುವುದಿಲ್ಲ- ಅಸ್ಟ್ರಾಜೆನೆಕಾ ಕಂಪನಿ

ಇನ್ನು ಕರಾವಳಿಯ ಹೆಣ್ಣು ಹುಲಿ ಎಂದೇ ಹೆಸರು ಗಳಿಸಿರುವ ಸುಷ್ಮಾ ರಾಜ್ ಅವರು ಉಡುಪಿಯ ಅಶೋಕ್ ರಾಜ್-ರಾಧಾ ದಂಪತಿಯ ಪುತ್ರಿ. ಮೂಲತಃ ಉಡುಪಿಯವರು ಆಗಿದ್ದು, ಇವರು ನಟಿ, ಮಾಡೆಲ್, ಫಿಟ್‌ನೆಸ್ ತರಬೇತುದಾರರಾಗಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: Kerala West Nile Fever: ಕೇರಳದಲ್ಲಿ ಹೆಚ್ಚಿದ ವೆಸ್ಟ್‌ ನೈಲ್ ಜ್ವರ; ಇದು ಎಷ್ಟು ಅಪಾಯಕಾರಿ? ಬನ್ನಿ ತಿಳಿಯೋಣ

ನಟಿ ಸುಷ್ಮಾ ರಾಜ್ ಹುಲಿ ಕುಣಿತದಲ್ಲಿಯೇ ಜನಪ್ರಿಯತೆ ಪಡೆದಿದ್ದರೂ ಸಹ ಕನ್ನಡದ ಕೆಲ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮೆಹೆಂದಿ, ಆರತಕ್ಷತೆ, ಮದುವೆಯ ಫೋಟೋಗಳನ್ನು ಸುಷ್ಮಾ ಹಂಚಿಕೊಂಡಿದ್ದಾರೆ. ಸುಷ್ಮಾ ರಾಜ್ ಅವರು ನೇರಳೆ ಬಣ್ಣದ ಸೀರೆ ಉಟ್ಟು ಕಂಗೊಳಿಸಿದ್ದಾರೆ.

ಸುಷ್ಮಾ ಅವರು ದುನಿಯಾ ವಿಜಯ್ ಅವರ ‘ಮಾಸ್ತಿಗುಡಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ‘ಹುಬ್ಬಳ್ಳಿ ಹುಡುಗ ಮಂಗಳೂರು ಹುಡ್ಗಿ’ ಧಾರಾವಾಹಿಯಲ್ಲಿಯೂ ಅವರು ನಟಿಸಿದ್ದರು. ಇವರು ಸಾಕಷ್ಟು ಕಡೆ ಹುಲಿ ಕುಣಿತ ಪ್ರದರ್ಶನ ನೀಡಿದ್ದಾರೆ. ಈಟಿವಿ ವಾಹಿನಿಯ ‘ಇಂಡಿಯನ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಟಾಪ್ 4 ಸ್ಥಾನ ಪಡೆದುಕೊಂಡಿದ್ದರು. ಮಾಡೆಲ್ ಆಗಿ ಕೆಲ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ, ಅದಲ್ಲದೆ ಫಿಟ್‌ನೆಸ್ ಟ್ರೇನಿಂಗ್ ಕೂಡ ನೀಡುತ್ತಾರೆ. ಅಷ್ಟೇ ಅಲ್ಲದೆ ಒಂದು ರಿಯಾಲಿಟಿ ಶೋ ನಿರೂಪಣೆ ಕೂಡ ಮಾಡಿದ್ದರು.

ಈಗಾಗ್ಲೇ ಸುಷ್ಮಾ ರಾಜ್ ಹಾಗೂ ನಿಶಾನ್ ಅವರು ಅದ್ದೂರಿಯಾಗಿ ಮದುವೆ (Sushma Raj Nishan Wedding) ಆಗಿದ್ದಾರೆ. ಈ ಮದುವೆಗೆ ಕುಟುಂಬಸ್ಥರು, ಆತ್ಮೀಯರು ಆಗಮಿಸಿದ್ದರು. ಸುಷ್ಮಾ ರಾಜ್ ಅವರು ಮದುವೆಯಾದ ಬಳಿಕ ಪತಿಯ ಜೊತೆ ಮಂಗಳೂರು ಬೀಚ್‌ನಲ್ಲಿ ಕಾಣಿಸಿದ್ದು, ಇಷ್ಟು ವರ್ಷಗಳ ಕಾಲ ಪ್ರೀತಿಸಿ, ಮದುವೆಯಾದ ಖುಷಿಯಲ್ಲಿದ್ದಾರೆ.

 

You may also like

Leave a Comment