Menstrual Pain: ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು ಹೆಚ್ಚಾದ ಕಾರಣ ಇಂಗ್ಲೆಂಡ್‌ನ ಲೈಲಾ ಎಂಬ 16 ವರ್ಷದ ಬಾಲಕಿ ತನ್ನ ಸ್ನೇಹಿತರ ಸಲಹೆಯ ಮೇರೆಗೆ ಪ್ರತೀ ತಿಂಗಳು ನೋವು ನಿವಾರಕ ಮಾತ್ರೆ ಸೇವಿಸುತ್ತಿದ್ದು, ಪರಿಣಾಮ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಸಾವಿಗೀಡಾದ ಘಟನೆಯೊಂದು ಇತ್ತೀಚೆಗೆ ನಡೆದಿತ್ತು. ಇದೀಗ ಅಂತಹುದೇ ಇನ್ನೊಂದು ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Stray Dog: ಬಿಬಿಎಂಪಿಯಿಂದ ಹೊಸ ರೂಲ್ಸ್ ಫಾಲೋ ಮಾಡಲು ಆದೇಶ! ಶ್ವಾನಪ್ರಿಯರು ಇನ್ನುಮುಂದೆ ಬೀದಿ ನಾಯಿಗೆ ಊಟ ಹಾಕುವಂತಿಲ್ಲ!
ಬ್ರೆಜಿಲ್‌ನ ಜಾಕ್ವೆಲಿನ್ ಗಮಾಕ್ ಎಂಬ ಯುವತಿ ಮುಟ್ಟಿನ ನೋವು ತಡೆಯಲಾಗದೆ ನೋವು ನಿವಾರಕ ಮಾತ್ರೆ ಸೇವಿಸಿದ್ದು, ಇದರಿಂದ ಆಕೆಯ ಆರೋಗ್ಯದಲ್ಲಿ ಏರುಪೇರಾಗಿದ್ದು ಇದೀಗ ಕೋಮಾಗೆ ಜಾರಿರುವ ಘಟನೆ ನಡೆದಿದೆ. ಯುವತಿ ಮುಟ್ಟಿನ ನೋವಿಗೆಂದು ಐಬುಪ್ರೊಫೆನ್ ಎಂಬ ಮಾತ್ರೆ ಸೇವನೆ ಮಾಡಿದ್ದು, ಕೆಲ ಹೊತ್ತಿನಲ್ಲೇ ಆಕೆಗೆ ಕಣ್ಣು ನೋವು ಹಾಗೂ ಮೈ ಮೇಲೆ ಗುಳ್ಳೆ ಕಾಣಿಸಿದೆ. ಕೂಡಲೇ ಆಕೆಯನ್ನು ಪೋಷಕರು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಇದನ್ನೂ ಓದಿ: Akshaya Tritiya: ಅಕ್ಷಯ ತೃತೀಯ ದಿನದಂದು ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ, ಇಲ್ಲಿದೆ ನೋಡಿ ಆಸ್ಟ್ರೋ ಟಿಪ್ಸ್
ವೈದ್ಯರು ಆಕೆಯನ್ನು ಐಸಿಯುಗೆ ದಾಖಲು ಮಾಡಿದ ಕೆಲ ಹೊತ್ತಿನಲ್ಲೇ ಕೋಮಾಗೆ ಜಾರಿರುವುದಾಗಿ ವೈದ್ಯರು ಹೇಳಿದ್ದಾರೆ.
ಜಾಕ್ವೆಲಿನ್, ಸ್ವೀವನ್ಸ್-ಜಾನ್ಸನ್ ಸಿಂಡ್ರೋಮ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಇದರಿಂದ ನೋವು ನಿವಾರಕ ಮಾತ್ರೆ ಪ್ರಾಣಕ್ಕೆ ಎರವಾಗಿದೆ. ಇದೀಗ ಯುವತಿ 17 ದಿನಗಳ ಬಳಿಕ ಕೋಮಾದಿಂದ ಹೊರ ಬಂದಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ವರದಿಯಾಗಿದೆ.
