Home » Physical Assault: ವಾಟರ್ ಪ್ಯೂರಿಫೈಯರ್ ರಿಪೇರಿಗೆಂದು ಬಂದವನಿಂದ ಮಹಿಳೆಗೆ ಲೈಂಗಿಕ ಕಿರುಕುಳ

Physical Assault: ವಾಟರ್ ಪ್ಯೂರಿಫೈಯರ್ ರಿಪೇರಿಗೆಂದು ಬಂದವನಿಂದ ಮಹಿಳೆಗೆ ಲೈಂಗಿಕ ಕಿರುಕುಳ

0 comments
Physical Assault

Physical Assault: ಮನೆಯಲ್ಲಿನ ವಾಟರ್ ಪ್ಯೂರಿಫೈಯರ್ ರಿಪೇರಿಗೆ ಬಂದವನು ಮಹಿಳಾ ಟೆಕ್ಕಿ ಜತೆ ಅಸಭ್ಯ ವರ್ತನೆ ತೋರಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: Devegowda: ದೇವೇಗೌಡ, ಕುಮಾರಸ್ವಾಮಿ ಹೈಕೋರ್ಟ್ ನೋಟಿಸ್

ಘಟನೆಯಿಂದ ಆಘಾತಕ್ಕೊಳಗಾದ ಟೆಕ್ಕಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಮಹೇಂದ್ರನ್ (25) ಎಂಬುವನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Bank Loan: ಬ್ಯಾಂಕ್ ನೌಕರರಿಗೆ ನೀಡುವ ಬಡ್ಡಿರಹಿತ ಸಾಲಕ್ಕೂ ತೆರಿಗೆ

ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುವ 30 ವರ್ಷದ ಲೈಲಾ (ಹೆಸರು ಬದಲಿಸಲಾಗಿದೆ) ಸಿಂಗಸಂದ್ರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ಮೇ 4ರಂದು ಮನೆಗೆ ವಾಟರ್ ಪ್ಯೂರಿಫೈಯರ್ ಅಳವಡಿಸಿಕೊಂಡಿದ್ದರು. ಮಾರನೇ ದಿನ ಅದರಲ್ಲಿ ಸಮಸ್ಯೆ ಉಂಟಾಗಿದ್ದರಿಂದ ಮೊದಲ ದಿನ ಆಗಮಿಸಿದ್ದ ಸರ್ವೀಸ್ ಮಾಡಿಕೊಟ್ಟಿದ್ದ ಯುವಕನಿಗೆ ಕರೆ ಮಾಡಿ ರಿಪೇರಿ ಮಾಡಿಕೊಡುವಂತೆ ಕೋರಿದ್ದರು.

ಮೇ 5ರಂದು 5.15ರ ಸುಮಾರಿಗೆ ಮನೆಗೆ ಬಂದಿದ್ದ ಯುವಕ ಕೆಲಹೊತ್ತು ರಿಪೇರಿ ಕೆಲಸ ಮಾಡಿದ್ದ. ಸ್ವಲ್ಪ ಸಮಯದ ಬಳಿಕ ಅಡುಗೆ ಕೋಣೆಯಲ್ಲಿದ್ದ ಲೈಲಾ ಅವರನ್ನು ಹಿಂದಿನಿಂದ ತಬ್ಬಿಕೊಂಡು ಲೈಂಗಿಕ ಕಿರುಕುಳ ನೀಡಿದ್ದ.

ಇದರಿಂದ ಕಂಗಾಲಾದ ಲೈಲಾ, ಯುವಕನನ್ನು ಅಡುಗೆ ಮನೆಯಿಂದ ಹೊರಗೆ ತಳ್ಳಿ ಲಾಕ್ ಮಾಡಿಕೊಂಡಿದ್ದರು. ಬಳಿಕ ತನ್ನ ಸ್ನೇಹಿತನಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಆಗಮಿಸಿದ ಲೈಲಾ ಸ್ನೇಹಿತ, ಕೀ ಪಡೆದು ಮನೆಯ ಹೊರಗಡೆಯಿಂದ ಬಾಗಿಲು ತೆರೆದಿದ್ದರು. ಈ ವೇಳೆ ಒಳಗಡೆಯಿದ್ದ ಆರೋಪಿ ಪರಾರಿಯಾಗಲು ಯತ್ನಿಸಿದ್ದ.

ಅವನನ್ನು ಹಿಡಿದುಕೊಂಡಿದ್ದಕ್ಕೆ ಸ್ನೇಹಿತನ ಜತೆಗೂ ಜಗಳವಾಡಿ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದರು. ಸಂತ್ರಸ್ತೆ ದೂರು ನೀಡಿದ ದಿನವೇ ಕ್ಷಿಪ್ರ ತನಿಖೆ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿ, ತಮಿಳುನಾಡು ಮೂಲದ ಮಹೇಂದ್ರನನ್ನು ಬಂಧಿಸಲಾಯಿತು. ಸಂತ್ರಸ್ತೆ ಒಂಟಿಯಾಗಿರುವುದನ್ನು ಗಮನಿಸಿ ಕೃತ್ಯ ಎಸಗಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

You may also like

Leave a Comment