Pakistani women Honey Trappingನಮ್ಮ ವಿರೋಧಿ ದೇಶ ಪಾಕಿಸ್ತಾನ(Pakistan) ಯಾವಾಗಲೂ ನಮ್ಮ ದೇಶದ ಮೇಲೆ ಒಂದು ಕಣ್ಣಿಟ್ಟಿರುತ್ತದೆ. ಆಗೊಮ್ಮೆ ಈಗೊಮ್ಮೆ ಸಾಧ್ಯವಾದಾಗಲೆಲ್ಲ ಭಾರತದ ರಹಸ್ಯಗಳನ್ನು(India) ತಿಳಿದುಕೊಳ್ಳಲು ಹಲವಾರು ಪ್ರಯತ್ನಗಳನ್ನು ಮಾಡುತ್ತಲೆ ಇರುತ್ತಾರೆ. ಮಹಿಳೆಯರ ಮೂಲಕ ಇಲ್ಲಿನ ಅಧಿಕಾರಿಗಳಿಗೆ ಆಮಿಷ ಒಡ್ಡಲಾಗುತ್ತದೆ(Honey Trapping). ಅದರಲ್ಲಿಯೂ ಕೆಲವು ಅಧಿಕಾರಿಗಳು ಆ ಮಹಿಳೆಯರ ಹನಿ ಟ್ರಾಪ್ಗೆ ಸಿಲುಕಿ ಸೇನೆಯ ಪ್ರಮುಖ ಗೌಪ್ಯ(Secret information) ಮಾಹಿತಿಯನ್ನು ಒದಗಿಸುತ್ತಿದ್ದಾರೆ.
ಇದರಿಂದ ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ಆ ಸೂಕ್ಷ್ಮ ಮಾಹಿತಿ ತಲುಪಿ ನಮ್ಮ ವಿರುದ್ಧ ಷಡ್ಯಂತರ ನಡೆಸಲು ಸಾಧ್ಯವಾಗುತ್ತಿದೆ. ಇತ್ತೀಚೆಗೆ ಇದೇ ರೀತಿಯ ಪ್ರಕರಣ ಒಂದು ಬೆಳಕಿಗೆ ಬಂದಿದೆ. ಭಾರತೀಯ ಸೇನೆಗೆ ಡ್ರೋನ್ ಪೂರೈಸುವ ಕಂಪನಿಯ ಇಂಜಿನಿಯರ್ ಇದೀಗ ಸಿಕ್ಕಿಬಿದ್ದಿದ್ದು, ಪಾಕಿಸ್ತಾನದ ಮಹಿಳಾ ಏಜೆಂಟ್ ಮೂಲಕ ಪ್ರಮುಖ ಮಾಹಿತಿಯನ್ನು ಸೋರಿಕೆ ಮಾಡಿರುವುದು ತಿಳಿದು ಬಂದಿದೆ.
ಫೇಸ್‌ಬುಕ್‌ನಲ್ಲಿ ಪರಿಚಯವಾದ ಮಹಿಳೆಗೆ ಇಂಜಿನಿಯರ್ ಮಿಲಿಟರಿ ರಹಸ್ಯಗಳನ್ನು ಪಾಕಿಸ್ತಾನಕ್ಕೆ ರವಾನಿಸಿದ್ದಾನೆ. ಈ ಡೇಟಾವು ನಿರ್ಣಾಯಕ ಡ್ರೋನ್‌ಗಳ ವಿವರಗಳನ್ನು ಒಳಗೊಂಡಿರುವಂತೆ ತೋರುತ್ತಿದೆ. ಪ್ರವೀಣ್ ಮಿಶ್ರಾ ಎಂಬ ಎಂಜಿನಿಯರ್ ಸೋನಾಲ್ ಗಾರ್ಗ್ ಎಂಬ ಮಹಿಳೆಯನ್ನು ಫೇಸ್‌ಬುಕ್‌ನಲ್ಲಿ ಭೇಟಿಯಾಗಿದ್ದು, ಬಳಿಕ ಅದು ಪ್ರೀತಿಯಾಗಿ ಮಾರ್ಪಟ್ಟಿದೆ.
ಆಕೆ ತನ್ನನ್ನು ಚಂಡೀಗಢದ ಐಬಿಎಂ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಪರಿಚಯಿಸಿಕೊಂಡಿದ್ದಾಳೆ. ಪಾಕಿಸ್ತಾನದಲ್ಲಿರುವ ಸೋನಾಲ್ ಗಾರ್ಗ್ ಪ್ರವೀಣ್ ಮಿಶ್ರಾ ಅವರೊಂದಿಗೆ ಭಾರತೀಯ ಫೋನ್ ಸಂಖ್ಯೆಯೊಂದಿಗೆ ಚಾಟ್ ಮಾಡುತ್ತಿದ್ದಳು. ಕೊನೆದಾಗಿ ಆತನನ್ನು ಹನಿ ಟ್ರ್ಯಾಪ್ ಗೆ ಸಿಲುಕಿಸಿ ಆತನಿಂದ ಮಹತ್ವದ ಮಾಹಿತಿ ಸಂಗ್ರಹಿಸಿ ಪಾಕಿಸ್ತಾನಕ್ಕೆ ರವಾನಿಸಿದ್ದಾಳೆ.
ಇದನ್ನೂ ಓದಿ: ಕ್ರೇಟಾ ಬದಲು ವ್ಯಾಗನ್-ಆರ್ ಕಾರು ಗಿಫ್ಟ್ ಕೊಟ್ಟ ಮಾವ; ಮದುವೆಯೇ ರದ್ದು ಮಾಡಿದ ವರ !!
ಪ್ರವೀಣ್ ಮಿಶ್ರಾ ಭಾರತೀಯ ಸೇನೆಗೆ ಕ್ಷಿಪಣಿ ಮತ್ತು ಡ್ರೋನ್ ಬಿಡಿಭಾಗಗಳನ್ನು ಪೂರೈಸುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಪ್ರವೀಣ್ ಮಿಶ್ರಾ ಸೋನಾಲ್ ಗಾರ್ಗ್‌ಗಾಗಿ ಸೇನೆ ಮತ್ತು ರಕ್ಷಣಾ ಏಜೆನ್ಸಿಗಳಿಂದ ಪ್ರಮುಖ ಮಾಹಿತಿಯನ್ನು ಸಂಗ್ರಹಿಸಿ ಆಕೆಗೆ ಕಳುಹಿಸುತ್ತಿದ್ದ. ಈ ವೇಳೆ ಅಂಕಲೇಶ್ವರದಲ್ಲಿರುವ ಕಂಪನಿಯೊಂದರ ಗೌಪ್ಯ ಮಾಹಿತಿಯನ್ನು ಕದ್ದಿದ್ದಾನೆ ಎಂದು ಸೇನೆ ಆರೋಪಿಸಿದೆ.
ಕಂಪನಿಯ ಕಂಪ್ಯೂಟರ್‌ಳಿಗೆ ಮಾಲ್‌ವೇರ್ ಸೇರಿಸಲು ಆತ ಪ್ರಯತ್ನಿಸಿದ್ದ ಎಂದು ಸಹ ತಿಳಿದು ಬಂದಿದೆ. ಇದೀಗ ಆತನ ಚಲನವಲನಗಳನ್ನು ಉಧಮ್‌ಪುರದ ಮಿಲಿಟರಿ ಗುಪ್ತಚರ ಇಲಾಖೆ ಪತ್ತೆ ಮಾಡಿದೆ. ವಿಷಯ ತಿಳಿಯುತ್ತಿದ್ದಂತೆ ಗುಜರಾತ್ ಸಿಐಡಿ ಅಧಿಕಾರಿಗಳು ತಕ್ಷಣ ಎಚ್ಚೆತ್ತು ಭರೂಚ್ ಜಿಲ್ಲೆಯಲ್ಲಿ ಆತನನ್ನು ಬಂಧಿಸಿದ್ದಾರೆ.
ಪ್ರವೀಣ್ ಮಿಶ್ರಾನನ್ನು ಬಂಧಿಸಿದ ಗುಜರಾತ್ ಸಿಐಡಿ ಅಧಿಕಾರಿಗಳು. ಪ್ರವೀಣ್ ಮಿಶ್ರಾನ ಫೋನ್ ಅನ್ನು ವಶಪಡಿಸಿಕೊಂಡಿದ್ದು ಅದರಲ್ಲಿ ಸಾಕಷ್ಟು ರಾಷ್ಟ್ರೀಯ ರಕ್ಷಣಾ ಮಾಹಿತಿ ಇರುವುದು ಕಂಡುಬಂದಿದೆ. ಪ್ರವೀಣ್ ಮಿಶ್ರಾ ಈಗಾಗಲೇ ಕೆಲವು ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಿರ್ದಿಷ್ಟವಾಗಿ ಡ್ರೋನ್‌ಗಳ ತಯಾರಿಕೆಯ ಮಾಹಿತಿಗೆ ಸಂಬಂಧಿಸಿದ ಡೇಟಾ ಇದೆ ಎಂದು ತೋರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತದಲ್ಲಿ ಈಗಾಗಲೇ ಪ್ರಮುಖ ವಲಯಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಪಾಕಿಸ್ತಾನದ ಐಎಸ್‌ಐ ಏಜೆಂಟ್‌ಗಳು ಹನಿಟ್ರ್ಯಾಪ್ ಮಾಡುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಹೀಗೆ ಸಿಕ್ಕಿಬಿದ್ದ ಅನೇಕ ಉದ್ಯೋಗಿಗಳು ಸದ್ಯ ಜೈಲಿನಲ್ಲಿದ್ದಾರೆ.
