Home » Mangaluru: ಕರ್ನಾಟಕದಲ್ಲಿ ಸಾಲು ಸಾಲಾಗಿ ಹಿಂದೂ ಯುವತಿಯರ ಹತ್ಯೆ – ಆರೋಪಿಗಳ ವಿರುದ್ಧ ಎನ್ಕೌಂಟರ್ ಅಸ್ತ್ರ ಉಪಯೋಗಿಸಿ – ವಿಶ್ವ ಹಿಂದೂ ಪರಿಷದ್ ಆಗ್ರಹ.

Mangaluru: ಕರ್ನಾಟಕದಲ್ಲಿ ಸಾಲು ಸಾಲಾಗಿ ಹಿಂದೂ ಯುವತಿಯರ ಹತ್ಯೆ – ಆರೋಪಿಗಳ ವಿರುದ್ಧ ಎನ್ಕೌಂಟರ್ ಅಸ್ತ್ರ ಉಪಯೋಗಿಸಿ – ವಿಶ್ವ ಹಿಂದೂ ಪರಿಷದ್ ಆಗ್ರಹ.

1 comment
Mangaluru

Mangaluru: ಕಳೆದ ಒಂದು ತಿಂಗಳಿನಿಂದ ಕರ್ನಾಟಕದಲ್ಲಿ ಪ್ರೀತಿಗಾಗಿ 3 ಯುವತಿಯರ ಹತ್ಯೆ, ಏಪ್ರಿಲ್ 18 ರಂದು ಹುಬ್ಬಳ್ಳಿಯ ನೇಹಾ ಹತ್ಯೆ, ನಂತರ ಕೊಡಗಿನಲ್ಲಿ ಮೀನಾ ಹತ್ಯೆ, ಇದೀಗ ಮೇ 15ರಂದು ಹುಬ್ಬಳ್ಳಿಯ ಅಂಜಲಿ ಹತ್ಯೆ. ಪ್ರೀತಿಯ ಹೆಸರಲ್ಲಿ ಯುವತಿಯರ ಹತ್ಯೆ ಆಗುತ್ತಿರುವುದು ಬಹಳ ಕಳವಳಕಾರಿ ಸಂಗತಿಯಾಗಿದ್ದು ನಾಗರಿಕ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ.

ಇದನ್ನೂ ಓದಿ: Lipstick Ban: ಉತ್ತರ ಕೊರಿಯಾದಲ್ಲಿ ಕೆಂಪು ಲಿಪ್ ಸ್ಟಿಕ್ ಹಾಕಿಕೊಂಡರೆ ಜೈಲು : ಉತ್ತರ ಕೊರಿಯಾದ ಐಲು ದೊರೆ ಕಿಮ್ ಜಾಂಗ್ ಉನ್ ಹೊಸ ಕಾನೂನು

2013 ರಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಬಂದಾಗ ಸಾಲು ಸಾಲು ಹಿಂದೂ ಯುವಕರ ಹತ್ಯೆಯಾಗಿದ್ದು ಇದೀಗ ಇದೇ ಸರಕಾರದಲ್ಲಿ ಹಿಂದೂ ಯುವತಿಯರ ಹತ್ಯೆ ಆಗುತ್ತಿರುವುದು ಗಂಭೀರ ವಿಷಯವಾಗಿದೆ.

ಇದನ್ನೂ ಓದಿ: Cleaning Tips: ನೊಣಗಳ ಕಾಟದಿಂದ ಮುಕ್ತಿ ಪಡೆಯಲು ಸುಲಭ ಪರಿಹಾರ ಇಲ್ಲಿದೆ!

ಈ ಕೃತ್ಯಗಳು ಕರ್ನಾಟಕದಲ್ಲಿ ಹೆಣ್ಣು ಮಕ್ಕಳನ್ನು ಭಯಭೀತಗೊಳಿಸಿದೆ. ರಾಜ್ಯ ದಲ್ಲಿ ಈ ಸರಕಾರ ಬಂದನಂತರ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಹಾಗಾಗಿ ರಾಜ್ಯ ಪೋಲಿಸ್ ಇಲಾಖೆಯು ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಹಂತಕರಿಗೆ ಎನ್ಕೌಂಟರ್ ನಂತಹ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತೆನೆ ಎಂದು ವಿಶ್ವ ಹಿಂದೂ ಪರಿಷದ್ ಶರಣ್ ಪಂಪ್ವೆಲ್ ಹೇಳಿದ್ದಾರೆ.

You may also like

Leave a Comment